ಮೀಸಲಾತಿ ಹೋರಾಟ: ವಾಲ್ಮೀಕಿ ಸಮುದಾಯದ ಶಾಸಕರ ಜೊತೆ ಬಿಎಸ್‌ವೈ ಚರ್ಚೆ

ಹೈಲೈಟ್ಸ್‌:

  • ವಾಲ್ಮೀಕಿ ಸಮುದಾಯದ ಶಾಸಕರ ಜೊತೆ ಬಿಎಸ್‌ವೈ ಚರ್ಚೆ
  • ಕುತೂಹಲ ಕೆರಳಿಸಿದ ಶಾಸಕರು ಹಾಗೂ ಬಿಎಸ್‌ವೈ ಮಾತುಕತೆ
  • ಇವತ್ತಿನ ಸಭೆ ಆಶಾದಾಯಕ ಎಂದ ಶಾಸಕ ರಾಜೂಗೌಡ

ಬೆಂಗಳೂರು: ಮೀಸಲಾತಿ ಹೋರಾಟ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ವಾಲ್ಮೀಕಿ ಸಮುದಾಯದ ಜನಪ್ರತಿನಿಧಿಗಳಾದ ಸಚಿವ ಶ್ರೀರಾಮುಲು ಸೇರಿದಂತೆ ಪ್ರಮುಖರ ಜೊತೆಗೆ ಗುರವಾರ ಚರ್ಚೆ ನಡೆಸಿದರು.

ಗುರುವಾರ ಬೆಳಗ್ಗೆ ಸಿಎಂ ನಿವಾಸಕ್ಕೆ ಆಗಮಿಸಿದ ಸಚಿವ ಶ್ರೀರಾಮುಲು, ರಮೇಶ್ ಜಾರಕಿಹೊಳಿ, ಶಾಸಕ ರಾಜೂಗೌಡ ಸೇರಿದಂತೆ ಪ್ರಮುಖರು ಈ ಸಭೆಯಲ್ಲಿ ಭಾಗಿಯಾಗಿದ್ದರು.ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಬೇಕು ಎಂಬ ನಿಟ್ಟಿನಲ್ಲಿ ಹೋರಾಟಗಳು ನಡೆಯುತ್ತಿವೆ. ಮತ್ತೊಂದು ಕಡೆಯಲ್ಲಿ 2 ಎ ಪ್ರವರ್ಗಕ್ಕೆ ಸೇರ್ಪಡೆ ಮಾಡಬೇಕು ಎಂಬ ನಿಟ್ಟಿನಲ್ಲಿ ಲಿಂಗಾಯತ ಸಮುದಾಯದ ಪ್ರಮುಖರು ಹೋರಾಟ ನಡೆಸುತ್ತಿದ್ದಾರೆ.

ಸಭೆಯ ಬಳಿಕ ಮಾತನಾಡಿದ ಶಾಸಕ ರಾಜೂಗೌಡ, ವಾಲ್ಮೀಕಿ ಸಮುದಾಯದ ಶಾಸಕರು, ಸಂಸದರು, ಮುಖಂಡರು ಸಿಎಂ ಬಿಎಸ್‌ ಯಡಿಯೂರಪ್ಪ ಜೊತೆ ಉಪಹಾರ ಸಭೆ ಮಾಡಿದ್ದೇವೆ. ಹಲವು ವಿಚಾರ ಚರ್ಚೆ ಮಾಡಿದ್ದೇವೆ. ಕಾನೂನು ತಜ್ಞರ ಜೊತೆ ಮಾತನಾಡಲಾಗಿದೆ. ಇವತ್ತಿನ ಸಭೆ ಆಶಾದಾಯಕವಾಗಿ ಕಾಣುತ್ತಿದೆ ಎಂದರು.

ಮೀಸಲಾತಿ ವಿಚಾರವಾಗಿ ಕಾನೂನು ತಜ್ಞರ ಅಭಿಪ್ರಾಯ ಪಡೆದು, ನ್ಯಾಯಬದ್ದವಾಗಿ ಒದಗಿಸೋದಾಗಿ ಹೇಳಿದ್ದಾರೆ. ಇವತ್ತಿನ ಕ್ಯಾಬಿನೆಟ್‌ನಲ್ಲಿ ಚರ್ಚೆ ಆಗಲ್ಲ, ಲೀಗಲ್ ಒಪೀನಿಯನ್ ಪಡೆಯೋದಾಗಿ ಅಷ್ಟೇ ಹೇಳಿದ್ದಾರೆ.

ಮೀಸಲಾತಿಗಾಗಿ ಎಲ್ಲರೂ ಪಟ್ಟು ಹಿಡಿದಿದ್ದೇವೆ. ನಮಗೆ ನ್ಯಾಯಬದ್ದವಾಗಿ ಮೀಸಲಾತಿ ಸಿಗಬೇಕಿದೆ. ಇಲ್ಲವೇ 50ರಷ್ಟು ಎಸ್‌ಸಿ, 50ರಷ್ಟ ಎಸ್‌ಟಿಗೆ ಕೊಡುವಂತೆ ಕೇಳಿದ್ದೀವಿ. ಇಲ್ಲ ಎಲ್ಲವೂ ಜನರಲ್ ಮಾಡುವಂತೆ ಒತ್ತಾಯ ಮಾಡಿದ್ದೇವೆ ಎಂದರು.

ಮೀಸಲಾತಿ ಆಗ್ರಹಿಸಿ ಪ್ರಥಮವಾಗಿ ಆರಂಭವಾಗಿದ್ದೇ ವಾಲ್ಮೀಕಿ ಜನಾಂಗದ ಹೋರಾಟ. ಸಿದ್ಧರಾಮಯ್ಯ ಸಿಎಂ ಆಗಿದ್ಧಾಗಲೇ ನಾವು ಹೋರಾಟ ಆರಂಭಿಸಿದ್ದೆವು. ಯಡಿಯೂರಪ್ಪ ಸಿಎಂ ಆಗಿದ್ದಾರೆ ಅನ್ನೋ ಕಾರಣಕ್ಕೆ ಕೆಲವರು ಈಗ ಮಾಡುತ್ತಿದ್ದಾರೆ. ನಮ್ಮದು ನ್ಯಾಯಯುತವಾದ ಹೋರಾಟ ಎಂದು ತಿಳಿಸಿದರು.

ಮೀಸಲಾತಿ ಹೋರಾಟ ಜಟಿಲಗೊಳ್ಳುತ್ತಿರುವ ನಿಟ್ಟಿನಲ್ಲಿ ವಾಲ್ಮಿಕಿ ಸಮುದಾಯದ ಶಾಸಕರು ಹಾಗೂ ಜನಪ್ರತಿನಿಧಿಗಳ ಜೊತೆಗೆ ಸಿಎಂ ಬಿಎಸ್‌ ಯಡಿಯೂರಪ್ಪ ಚರ್ಚೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಗುರುವಾರ ಸಂಜೆ ರಾಜ್ಯ ಸಚಿವ ಸಂಪುಟ ಸಭೆ ಕೂಡಾ ನಡೆಯಲಿದೆ. ಸಭೆಯಲ್ಲಿ ಮೀಸಲಾತಿ ಹೋರಾಟದ ಕುರಿತಾಗಿ ಚರ್ಚೆ ನಡೆಯುವ ಸಾಧ್ಯತೆಯೂ ಇದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *