ಪಂಚಮಶಾಲಿ ಶ್ರೀಗಳಿಗೆ ಆಶ್ರಯ ನೀಡಿದ್ದ ಸಂಸ್ಥೆ ಮೇಲೆ ಐಟಿ ದಾಳಿ
ಬೆಂಗಳೂರು: ಇನ್ಕಂ ಟ್ಯಾಕ್ಸ್ ಡಿಪಾರ್ಟ್ಮೆಂಟ್ ಈಗ ಸಕ್ರೀಯವಾಗಿದೆ. ಅಕ್ರಮವಾಗಿ ಮುಚ್ಚಿಟ್ಟ ಟ್ಯಾಕ್ಸ್ಗಳನ್ನ ಕಟ್ಟದ ವ್ಯಕ್ತಿಗಳಿಗೆ ಸಿಂಹ ಸ್ವಪ್ನದಂತೆ ಕಾಟ ಕೊಡುತ್ತಲೇ ಇದೆ. ಅಂತಹ ತಿಮಿಂಗಿಲಗಳ ಜಾಗಕ್ಕೆ ಇಂದು ಐಟಿ ರೇಡು ಬಿದ್ದಿದೆ. ಇಂದು ಬೆಳಗಿನ ಜಾವ 4 ಗಂಟೆಗೆ ಒಂದು ಸಣ್ಣ ಸುಳಿವೂ ನೀಡದೆ ಐಟಿ ಅಧಿಕಾರಿಗಳು ದಾಳಿ ನಡೆಸಿದರು. ನಿದ್ದೆಯಲ್ಲಿದ್ದ ಅಧಿಕಾರಿಗಳಿಗೆ ನಿಜಕ್ಕೂ ಶಾಕ್ ಅಂತಾನೇ ಹೇಳಬಹುದು. ತುಮಕೂರು, ಮಂಗಳೂರು ಮತ್ತು ಬೆಂಗಳೂರಿನಲ್ಲಿ ದಾಳಿ ನಡೆಸಿದ ಐಟಿ ಅಧಿಕಾರಿಗಳು ಸರ್ಕಾರಕ್ಕೆ ವಂಚಿಸಿ ಕಟ್ಟದ ಟ್ಯಾಕ್ಸ್ ಬಗ್ಗೆ ಪರಿಶೀಲನೆ ನಡೆಸಿದರು.
ಈ ಹಿಂದೆ ಪಂಚಮಸಾಲಿ ಮಠದ ಶ್ರೀಗಳಿಗೆ ಆಶ್ರಯ ನೀಡಿದ್ದ ಸಂಸ್ಥೆಗಳ ಮೇಲೆಯೂ ದಾಳಿ ನಡೆದಿದ್ದು ಅದು ಬಿಜೆಪಿ ಮುಖಂಡ ಹುಲಿನಾಯ್ಕರ್ ಒಡೆತನದ ಶ್ರೀದೇವಿ ಶಿಕ್ಷಣ ಸಂಸ್ಥೆ ಮತ್ತು ಆಸ್ಪತ್ರೆ ಮೇಲೆ ದಾಳಿ ನಡೆದಿದೆ. ಹಾಗೆ ಬೆಂಗಳೂರಿನಲ್ಲಿ ಬಿಜಿಎಸ್ ಆಸ್ಪತ್ರೆ ಮತ್ತು ಸಪ್ತಗಿರಿ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜುಗಳ ಮೇಲೆ ದಾಳಿ ನಡೆದಿತ್ತು. ಸಪ್ತಗಿರಿ ಸಂಸ್ಥೆ ದಯಾನಂದ್ ಒಡೆತನದಲ್ಲಿದ್ದು ಇಂದು ಬೆಳಗಿನ ಜಾವ 4-30ಕ್ಕೆ ಒಟ್ಟು 16 ಇನ್ನೋವಾದಲ್ಲಿ ಬಂದಿದ್ದ ಅಧಿಕಾರಿಗಳು, ಆಸ್ಪತ್ರೆಯಿಂದ ಯಾರನ್ನೂ ಹೊರ ಬಿಡದ ರೀತಿಯಲ್ಲಿ ಬಂದೋಬಸ್ತ್ ನ್ನು ಮಾಡಿಕೊಂಡಿದ್ದರು. ಇನ್ನು ಮೊದಲಿಗೆ ಮೊಬೈಲ್ ಸೀಝ್ ಮಾಡಿದ್ದ ಅಧಿಕಾರಿಗಳು ಆಸ್ಪತ್ರೆಯಲ್ಲಿದ್ದಂತಹ ದಾಖಲೆಗಳನ್ನ ಪರಿಶೀಲಿಸಿ ವಶಕ್ಕೆ ಪಡೆದಿದ್ದಾರೆ.
ಈ ಹಿಂದೆ ಕೋವಿಡ್ ಸಂಧರ್ಭದಲ್ಲಿ ಖಾಸಗಿ ಆಸ್ಪತ್ರೆಗಳನ್ನೂ ಕೂಡ ಕೋವಿಡ್ ಟ್ರೀಟ್ಮೆಂಟ್ ಗಾಗಿ ಸರ್ಕಾರ ಬಳಸಿಕೊಂಡಿತ್ತು. ಸರ್ಕಾರಿ ಆಸ್ಪತ್ರೆಗಳಲ್ಲಿ ಕಡಿಮೆ ದರ ನಿಗದಿಯಾದರೆ ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಬೆಲೆ ತೆತ್ತು ಚಿಕಿತ್ಸೆ ಪಡೆಯಬೇಕಿತ್ತು. ಇಡೀ ಜಗತ್ತಿಗೆ ತಲೆ ನೋವಾಗಿದ್ದ ಕೊರೊನಾ ಹೋದರೆ ಸಾಕು ಎನ್ನುವಷ್ಟರ ಮಟ್ಟಿಗೆ ಸರ್ಕಾರಕ್ಕೆ ತಲೆ ನೋವಾಗಿತ್ತು. ಈ ಸಂಧರ್ಭದಲ್ಲಿ ಕೆಲ ಖಾಸಗಿ ಆಸ್ಪತ್ರೆಗಳು ಕೂಡ ವಸೂಲಿಗೆ ನಿಂತು ಬಿಟ್ಟಿತ್ತು. ಈ ಹಿನ್ನೆಲೆಯಲ್ಲಿ ಅಂದು ಮಾಡಿದ ಅಕ್ರಮಗಳಿಗೆ ಬ್ರೇಕ್ ಹಾಕಲು ಐಟಿ ಅಧಿಕಾರಿಗಳು ಮುಂದಾಗಿದ್ದಾರೆ. ಇನ್ನು ಐಟಿ ಅಧಿಕಾರಿಗಳು ಹಲವು ದಾಖಲೆಗಳನ್ನ ಈಗಾಗಲೆ ವಶಕ್ಕೆ ಪಡೆದಿದ್ದು, ಅದಕ್ಕೆ ಸರಿಯಾದ ದಾಖಲೆಗಳನ್ನ ನೀಡುವ ಸಲುವಾಗಿ ಸಂಬಂಧ ಪಟ್ಟ ಆಡಳಿತ ಮಂಡಳಿಗೆ ಮುಂದಿನ ದಿನಗಳಲ್ಲಿ ನೊಟೀಸ್ ನೀಡಲಾಗುತ್ತದೆ.