ಮಂಗಳನ ಅಂಗಳದಲ್ಲಿ ರೋವರ್‌ ಇಳಿಸಿದ ಕನ್ನಡತಿ ಸ್ವಾತಿ ಹಣೆಯಲ್ಲಿ ಬಿಂದಿ, ದೇಸಿ ಲುಕ್‌ಗೆ ನೆಟ್ಟಿಗರು ಫಿದಾ!

ವಾಷಿಂಗ್ಟನ್‌: ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಕಳುಹಿಸಿದ ‘ಪರ್ಸೀವರೆನ್ಸ್‌’ ರೋವರ್‌ ಯಶಸ್ವಿಯಾಗಿ ಮಂಗಳನ ಅಂಗಳದಲ್ಲಿ ಇಳಿದಿದೆ. ಈ ಮೂಲಕ ಅಮೆರಿಕ ಮಹತ್ತರ ಸಾಧನೆಯೊಂದನ್ನ ಮಾಡಿದಂತೆ ಆಗಿದೆ. ಈ ರೋವರ್‌ ಮುಂದಿನ ದಿನಗಳಲ್ಲಿ ಮಂಗಳ ಗ್ರಹದಲ್ಲಿ ಜೀವಿಗಳು ವಾಸಿಸುತ್ತಿದ್ದವೇಯೇ ಎಂಬುವುದನ್ನು ಮಾಹಿತಿ ಸಂಗ್ರಹಿಸಿ ಭೂಮಿಗೆ ಕಳುಹಿಸಲಿದೆ.

ಇನ್ನು ಮಂಗಳನ ಮೇಲ್ಮೈನಲ್ಲಿ ರೋವರ್‌ ಸೇಫ್‌ ಆಗಿ ಇಳಿಯುವಲ್ಲಿ ಪ್ರಮುಖ ಪಾತ್ರವಹಿಸಿರುವುದು ಕನ್ನಡತಿ

ಸ್ವಾತಿ ಮೋಹನ್‌. ಹೌದು, ಬೆಂಗಳೂರು ಮೂಲದ ವಿಜ್ಞಾನಿ ಡಾ. ಸ್ವಾತಿ ಮೋಹನ್‌.ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗ ದಂಪತಿ ಮೋಹನ್‌ ಹಾಗೂ ಜ್ಯೋತಿ ಅವರ ಪುತ್ರಿಯಾಗಿದ್ದಾರೆ. ನಾಸಾದಲ್ಲಿ ‘ಜಿಎನ್‌ ಅಂಡ್‌ ಸಿ’ ಎಂಬ ವೈಜ್ಞಾನಿಕ ತಂಡದ ಮುಖ್ಯಸ್ಥೆಯಾಗಿದ್ದಾರೆ. ಪರ್ಸೀವರೆನ್ಸ್‌ ರೋವರನ್ನು ಮಂಗಳ ಗ್ರಹದ ಮೇಲೆ ಇಳಿಸುವ ಜವಾಬ್ದಾರಿ ಸಂಪೂರ್ಣವಾಗಿ ಇವರ ತಂಡದ್ದಾಗಿತ್ತು.

ಅದನ್ನು ಯಶಸ್ವಿಯಾಗಿ ನಿಭಾಯಿಸಿದ ಸ್ವಾತಿ ಅವರ ಬಗ್ಗೆ ಅಮೆರಿಕ, ಭಾರತದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಇನ್ನು ರೋವರ್‌ ಯಶಸ್ಸಿನಿಂದ ಫುಲ್ ಖುಷ್‌ ಆಗಿರುವ ನಾಸಾ, ಕಂಟ್ರೋಲ್‌ ರೂಂನಲ್ಲಿದ್ದ ಸಿಬ್ಬಂದಿಗಳ ಪ್ರತಿಕ್ರಿಯೆಯ ವಿಡಿಯೋ ಫೋಟೊಗಳನ್ನು ಶೇರ್‌ ಮಾಡಿಕೊಂಡಿದ್ದಾರೆ. ಆದರೆ ಈ ವಿಡಿಯೋ ಪೈಕಿ ಪ್ರಮುಖ ಹೈಲೈಟ್‌ ಆಗಿರುವುದು, ಸ್ವಾತಿ ಮೋಹನ್‌ ಹಣೆ ಮೇಲೆ ಇಟ್ಟಿದ್ದ ಬಿಂದಿ. ಹೌದು, ಜಿಎನ್‌ ಅಂಡ್‌ ಸಿ ಎಂಬ ವೈಜ್ಞಾನಿಕ ತಂಡದ ಮುಖ್ಯಸ್ಥೆಯಾಗಿ ಸ್ವಾತಿ ಮೋಹನ್‌ ಕಂಟ್ರೋಲ್‌ ರೂಂನಲ್ಲಿ ಕುಳಿತು, ನೌಕೆ ಇಳಿಸಲು ಕಮಾಂಡ್‌ಗಳನ್ನು ನೀಡುತ್ತಿದ್ದರು.

ಅಮೆರಿಕದ ಬಾಹ್ಯಕಾಶ ಸಾಧನೆಯ ಹಿಂದೆ ಕನ್ನಡತಿ ಸ್ವಾತಿ: ಜೀವದ ಹುಡುಕಾಟದಲ್ಲಿ ಪರ್ಸಿ!

ಈ ವಿಡಿಯೋವನ್ನು ನಾಸಾ ಶೇರ್‌ ಮಾಡಿಕೊಂಡಿದೆ. ಕಂಟ್ರೋಲ್‌ ರೂಂನಲ್ಲಿ ಮಾರ್ಗದರ್ಶನ ನೀಡುತ್ತಿದ್ದ ಸ್ವಾತಿ ಕಪ್ಪು ಬಣ್ಣದ ಬಿಂದಿ ಧರಿಸಿದ್ದರು. ಇದು ಅನೇಕ ಭಾರತೀಯರ ಖುಷಿಗೆ ಕಾರಣವಾಗಿದೆ. ಅಮೆರಿಕದಲ್ಲೇ ಇರಲಿ, ಎಷ್ಟೇ ದೊಡ್ಡ ವಿಜ್ಞಾನಿಯೇ ಆಗಿರಲಿ ಸ್ವಾತಿ ತಾನು ಭಾರತಿಯೇ, ಭಾರತದ ಸಂಸ್ಕೃತಿ ಹೊಂದಿದವಳು ಎನ್ನುವುದನ್ನ ತೋರಿಸಿಕೊಟ್ಟಿದ್ದಾಳೆ ಎಂದು ಪ್ರಶಂಸಿಸಿದ್ದಾರೆ. ಅನೇಕ ಗಣ್ಯರು ಕೂಡ ಮುಗ್ಧ ಸಾಧನೆ ಮಾಡಿದ ಮುಖದ ಮೇಲಿನ ತೇಜಸ್ಸಿನ ಬಿಂದಿಗೆ ಶಹಬ್ಬಾಸ್‌ ಎಂದಿದ್ದಾರೆ.

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *