‘ಸೈಬರ್ ಸೆಕ್ಯೂರಿಟಿ ಹಾಗೂ ಇ-ಆಡಳಿತ’ ಕಾರ್ಯಾಗಾರಕ್ಕೆ ಅಪರ ಜಿಲ್ಲಾಧಿಕಾರಿ ಚಾಲನೆ

ಆಡಳಿತ ತರಬೇತಿ ಸಂಸ್ಥೆ ಮೈಸೂರು, ಇ-ಆಡಳಿತ ಕೇಂದ್ರ ಬೆಂಗಳೂರು ಹಾಗೂ ಜಿಲ್ಲಾ ತರಬೇತಿ ಸಂಸ್ಥೆ ಕಲಬುರಗಿ ಇವುಗಳ ಸಹಯೋಗದೊಂದಿಗೆ ಕೇಂದ್ರ ಸರ್ಕಾರದ ಎನ್.ಇ.ಜಿ.ಡಿ. ಸಾಮಥ್ರ್ಯಾಭಿವೃದ್ಧಿ ಯೋಜನೆಯಡಿ ‘ಸೈಬರ್ ಸೆಕ್ಯೂರಿಟಿ ಮತ್ತು ಇ-ಆಡಳಿತ’ ಕುರಿತು ಕಲಬುರಗಿ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಜಿಲ್ಲೆಯ ‘ಎ’ ವೃಂದದ ಅಧಿಕಾರಿಗಳಿಗೆ ಏರ್ಪಡಿಸಲಾಗಿದ್ದ ಒಂದು ದಿನದ ವಿಶೇಷ ಕಾರ್ಯಾಗಾರವನ್ನು ಅಪರ ಜಿಲ್ಲಾಧಿಕಾರಿ ಡಾ.ಶಂಕರ ವಣಿಕ್ಯಾಳ ಅವರು ಶನಿವಾರ ಉದ್ಘಾಟಿಸಿದರು.
ನಂತರ ಅವರು ಮಾತನಾಡಿ, ವಿವಿಧ ಇಲಾಖೆಗಳ ಸರ್ಕಾರಿ ಅಧಿಕಾರಿಗಳು ಕಚೇರಿಯ ಗಣಕಯಂತ್ರ ಮತ್ತು ಮೊಬೈಲ್‍ಗಳಲ್ಲಿ ಅಂತರಜಾಲ ಬಳಕೆಯ ಉಪಯೋಗ ಮತ್ತು ಆಗಬಹುದಾದ ಅನಾನುಕೂಲತೆಗಳ ಬಗ್ಗೆ ಜಾಗೃತಿವಹಿಸಬೇಕು. ಸೈಬರ್ ಕ್ರೈಮ್ ಕುರಿತು ಹಲವಾರು ಉದಾಹರಣೆ ನೀಡುವ ಮೂಲಕ ಹಿಂದಿನ, ಇಂದಿನ ಭದ್ರತೆ ಹಾಗೂ ಇಂದಿನ ದಿನದಲ್ಲಿ ಇ-ಆಡಳಿತದ ಪ್ರಾಮುಖ್ಯತೆ ಕುರಿತು ವಿವರಿಸಿದರು.

ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕಲಬುರಗಿ ಪೆÇಲೀಸ್ ತರಬೇತಿ ಸಂಸ್ಥೆಯ ಸಾಫ್ಟ್‍ವೇರ್ ಇಂಜನಿಯರ್ ವಿವೇಕ ಹೊನಗುಂಟಿಕರ ಅವರು ‘ಸೈಬರ್ ಸೆಕ್ಯೂರಿಟಿ’ ವಿಷಯ ಕುರಿತು ಹಾಗೂ ಕಲಬುರಗಿ ಪಿಡಿಎ ಇಂಜನಿಯರಿಂಗ್ ಕಾಲೇಜಿನ ಗಣಕಯಂತ್ರ ವಿಭಾಗದ ಮುಖ್ಯಸ್ಥೆ ಡಾ. ಸುವರ್ಣ ನಂದ್ಯಾಳ “ಇ-ಆಡಳಿತ” ಕುರಿತು ಉಪನ್ಯಾಸ ನೀಡಿದರು.

ಈ ಕಾರ್ಯಾಗಾರದಲ್ಲಿ ಕಲಬುರಗಿ ಜಿಲ್ಲೆಯ ವಿವಿಧ ಇಲಾಖೆಗಳ “ಎ” ವೃಂದದ ಅಧಿಕಾರಿಗಳು, ಇ-ಆಡಳಿತ ಮತ್ತು ದತ್ತಾಂಶ ವಿಶ್ಲೇಷಣಾ ಕೇಂದ್ರದ ಹಿರಿಯ ಬೋಧಕ ಕವಿತಾ ಎಂ., ಸುರೇಶ್ ತೊನಸಳ್ಳಿಕರ್ ಸೇರಿದಂತೆ ತರಬೇತಿ ಸಂಸ್ಥೆಯ ಉಪ ಪ್ರಾಚಾರ್ಯರು ಹಾಗೂ ಕಿರಿಯ ಬೋಧಕ ಶಿವರಾಜ ಉಪಸ್ಥಿತರಿದ್ದರು.

ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಅಂಬೋಜಿ ನಾಯ್ಕೋಡಿ ಸ್ವಾಗತಿಸಿದರು. ಬೋಧಕ ನರಸಿಂಹರಾವ್ ವಂದಿಸಿದರು. ಪತ್ರಾಂಕಿತ ಬೋಧಕ ಶಿವಪ್ರಭು ಕಾರ್ಯಕ್ರಮ ನಿರೂಪಿಸಿದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *