ಸಾರಿಗೆ ಚಾಲಕನ ನಿರ್ಲಕ್ಷದಿಂದ ಸಾವಿನ ಮನೆ ಸೇರಿದ ಯುವಕ
ಕಲ್ಬರ್ಗಿ ಜಿಲ್ಲೆ ಕಾಳಗಿ ತಾಲೂಕಿನ ಕುಡಹಳ್ಳಿ ಗ್ರಾಮದಲ್ಲಿ ಮನಕಲುಕುವ ಘಟನೆ ನಡೆದಿದೆ. ನಿನ್ನೆ ರಾತ್ರಿ ಸುಮಾರು 8 ಗಂಟೆ ಹೊತ್ತಿಗೆ ಗೆಳೆಯರಿಬ್ಬರು ಕುಡಹಳ್ಳಿಯಾ ಹೊಸ ಊರಿಂದ ಹಳೆ ಊರಿಗೆ ರಸ್ತೆ ಬದಿಯಿಂದ ನಡೆದು ಕೊಂಡು ಬರುತ್ತಿದ್ದರು. ಈ ಸಂದರ್ಭದಲ್ಲಿ ಚಿಂಚೋಳಿಯಿಂದ ಕಲ್ಬುರ್ಗಿ ಕಡೆ ಬರುತ್ತಿದ್ದ KSRTC ಬಸ್ ನ್ ಚಾಲಕನ ನಿರ್ಲಕ್ಷದಿಂದ ರಸ್ತೆಬದಿ ನಡೆದುಕೊಂಡು ಬರುತ್ತಿದ್ದ ಯುವಕರಿಗೆ ಡಿಕ್ಕಿ ಹೊಡೆದು ಕೊಂಡು ಹೋಗಿದ್ದ ಪರಿಣಾಮ ಸ್ಥಳದಲ್ಲೇ ಯುವಕ ಸಿದ್ದಲಿಂಗ ಮಾರುತಿ ಪೂಜಾರಿ ಎಂಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇನ್ನೊರ್ವ ಯುವಕ ರೇವಣಸಿದ್ದ ರಾಜಕುಮಾರ್ , ಈತನಿಗೆ ಗಂಭೀರ ಗಾಯ ಆಗಿರುವುದರಿಂದ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತಪಟ್ಟ ಯುವಕನ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಸಾರಿಗೆ ಚಾಲಕನ ನಿರ್ಲಕ್ಷದಿಂದ ಬಾಳಿ ಬದುಕಬೇಕಾದ ಯುವಕ ಸಾವಿನ ಮನೆ ಸೇರಿದ್ದು ಗ್ರಾಮವೇ ತಲ್ಲಣಿಸಿದೆ. ಯುವಕರು ಕಾಳಗಿ ತಾಲೂಕಿನ ಪದವಿಪೂರ್ವ ಕಾಲೇಜಿನಲ್ಲಿ 12ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂಬುದು ತಿಳಿದುಬಂದಿದೆ. ಈ ಪ್ರಕರಣ ಸುಲೇಪೇಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ವರದಿ ಶಿವರಾಜ್ ಕಟ್ಟಿಮನಿ