ಇನ್ನು ಮುಂದೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹಬ್ಬಿಸುವ ಮುನ್ನ ಎಚ್ಚರವಾಗಿರಿ…! ಯಾಕೆ ಗೊತ್ತಾ ? ಈ ಸ್ಟೋರಿ ಓದಿ
ಸಾಮಾಜಿಕ ಸಭ್ಯತೆ ಮೀರಿ ಸುಳ್ಳು ಮಾಹಿತಿ ವದಂತಿಗಳನ್ನು ಪ್ರಸಾರ ಮಾಡುತ್ತಿರುವ ಗಂಭೀರ ಆರೋಪಕ್ಕೀಡಾಗುವ ಒಟಿಟಿ, ಸೋಷಿಯಯಲ್ ಹಾಗೂ ಡಿಜಿಟಲ್ ಮೀಡಿಯಾಗಳಿಗೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ಹೊಸ ಕರಡು ನಿಯಮಗಳನ್ನು ರೂಪಿಸಿದೆ. ಈ ಕರಡು ನಿಯಮಗಳ ಪ್ರಕಾರ ಯಾವುದೇ ಕಮ್ಯೂನಿಕೇಶನ್ ಕಂಪನಿಗಳು ಸಂದೇಶ ಮೂಲಗಳನ್ನು ಪ್ರಕಟಿಸುವುದು ಕಡ್ಡಾಯವಾಗಿದೆ. ಇದರಿಂದ ಫಾರ್ವರ್ಡ್ ಮೆಸೇಜ್ಗಳ ಮೂಲ ಯಾವುದು ಅಥವಾ ಬರೆದವರು ಯಾರು ಎಂಬುದು ಎಲ್ಲರಿಗೂ ಗೊತ್ತಾಗುತ್ತೆ.
ಒಟಿಟಿ ಪ್ಲಾಟ್ಫಾರ್ಮ್ ಗಳು ಧಾರ್ಮಿಕ ಭಾವನೆಗಳಿಗೆ , ರಾಷ್ಟ್ರೀಯ ಸುರಕ್ಷತೆಗಳಿಗೆ ಮತ್ತು ಇತರ ವಿಚಾರಗಳಿಗೆ ಬೆಲೆ ಕೊಡದೆ ಪ್ರಚೋದನಾತ್ಮಕ ಕಂಟೆಂಟ್ಗಳನ್ನು ಸಹ ಪ್ರಸಾರ ಮಾಡುತ್ತಿರುವುದು ಹಾಗೂ ಸಾಂಪ್ರದಾಯಿಕ ಮಾಧ್ಯಮಗಳಾದ ಮದ್ರಣ ಮಾಧ್ಯಮ, ಟೆಲಿವಿಷನ್ ಮಾಧ್ಯಮಗಳಿಗೆ ಇರುವಂತಹ ನಿಯಂತ್ರಣ ಇವುಗಳಿಗೆ ಇಲ್ಲದಿರುವುದು ಮತ್ತು ಟ್ವಿಟ್ಟರ್, ಫೇಸ್ಬುಕ್ ಮುಂತಾದ ಸಾಮಾಜಿಕ ಮಾಧ್ಯಮಗಳು ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಯಮ ಮೀರಿ ವರ್ತಿಸುತ್ತಿರುವುದು ಇದಕ್ಕೆ ಮೂಲ ಕಾರಣವಾಗಿದೆ.
ಒಟ್ಟು ಮೂರು ಸ್ತರದ ನಿಯಂತ್ರಣ ಮಾದರಿ ಇದರಲ್ಲಿದೆ. ಇದಕ್ಕಾಗಿ 30 ಪುಟಗಳ ಇನ್ಫಾರ್ಮೇಶನ್ ಟೆಕ್ನಾಲಜಿ ರೂಲ್ಸ್ 2021 ಅನ್ನು ಸರ್ಕಾರ ರೂಪಿಸುವುದಾಗಿ ಹೇಳಿದೆ.
- ಸ್ವಯಂ ನಿಯಂತ್ರಣ ವ್ಯವಸ್ಥೆ – ಸೋಷಿಯಲ್ ಮೀಡಿಯಾ. ಒಟಿಟಿ ಮತ್ತು ಇತರ ಡಿಜಿಟಲ್ ಮೀಡಿಯಾ ವೇದಿಕೆಗಳು ಕುಂದುಕೊರತೆ ಪರಿಹಾರ ವಿಭಾಗವನ್ನು ಸ್ಥಾಪಿಸಬೇಕು ಇದಕ್ಕೆ ಒಬ್ಬ ಅಧಿಕಾರಿಯನ್ನು ನೇಮಕ ಮಾಡಬೇಕು ಆತನ ಹೆಸರು ಸಂಪರ್ಕ ವಿವರಗಳೆಲ್ಲವೂ ಎಲ್ಲರಿಗೂ ಕಾಣುವಂತೆ ಪ್ರದರ್ಶಿಸಬೇಕು.
- ಸ್ವಯಂ ನಿಯಂತ್ರಣ ಸಂಸ್ಥೆ ಮಂಡಳಿ ಸ್ವಯಂ ನಿಯಂತ್ರಣ ವ್ಯವಸ್ಥೆಗೆ ಪೂರಕವಾಗಿ ಕುಂದುಕೊರತೆ ಪರಿಹಾರಕ್ಕೆ ಸ್ವಯಂ ನಿಯಂತ್ರಣ ಸಂಸ್ಥೆ ಮಂಡಳಿಯ ಸ್ಥಾಪನೆಯಾಗಬೇಕು ಇದಕ್ಕೆ ಸುಪ್ರಿಂಕೋರ್ಟ್, ಹೈ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಮುಖ್ಯಸ್ಥನಾಗಿರಬೇಕು.
- ಇದು ಅಂತರ್ ಸಚಿವಾಲಯ ಸಮಿತಿಯಾಗಿದ್ದು ನೀತಿಗಳ ಪರಿಣಾಮಕಾರಿ ಅನುಷ್ಠಾನಗಳನ್ನು ಜಾರಿಗೊಳಿಸುವ ಹೊಣೆಗಾರಿಕೆ ಹೊಂದಿದೆ. ಇದು ಈ ವ್ಯವಸ್ಥೆಯ ಉನ್ನತ ಸ್ಥಾನವಿರಲಿದ್ದು ನಿಯಂತ್ರಣ ಚೌಕಟ್ಟುಗಳ ಮೇಲೆ ನಿಗಾವಹಿಸಲಾಗುತ್ತದೆ.