ದೈನಂದಿನ ರಾಶಿ ಭವಿಷ್ಯ 26/02/2021
ಶಾರ್ವರಿನಾಮ ಸಂವತ್ಸರ
ಉತ್ತರಾಯಣ
ಶಿಶಿರ ಋತು
ಮಾಘ ಮಾಸ
ಶುಕ್ಲ ಪಕ್ಷ
ಚತುರ್ದಶಿ ತಿಥಿ
ಆಶ್ಲೇಷಾ ನಕ್ಷತ್ರ
ಶುಕ್ರವಾರ
26/02/2021
ಸೂರ್ಯೋದಯ ಬೆಳಗ್ಗೆ 06:37
ಸೂರ್ಯಾಸ್ತ ಸಂಜೆ 06:28
ರಾಹುಕಾಲ : 11:08 ರಿಂದ 12:34
ಗುಳಿಕಕಾಲ: 08:18 ರಿಂದ 09:43
ಯಮಗಂಡಕಾಲ: 15:24 ರಿಂದ 16:49
ಅಮೃತ ಘಳಿಗೆ : 08:42 ರಿಂದ 10:15
ಮೇಷ ರಾಶಿ
ಉದ್ಯೋಗ ವಿಚಾರದಲ್ಲಿ ನಾನಾ ಕಿರಿಕಿರಿ ಏರ್ಪಡಬಹುದು. ಪಾಪ ಕರ್ಮಾಸಕ್ತಿಗಳು ಹೆಚ್ಚು. ಗುರು- ಹಿರಿಯರ ಬಗ್ಗೆ ಅಸಡ್ಡೆ ತೋರುವಂತೆ ಆಗುತ್ತದೆ. ಯಾವುದೇ ಕಾರಣಕ್ಕೆ ಈ ಅವಧಿಯಲ್ಲಿ ಕೆಲಸ ಬದಲಿಸುವ ಆಲೋಚನೆ ಬೇಡ. ವಿದೇಶ ಪ್ರಯಾಣಕ್ಕೆ ಅವಕಾಶ ಮೊದಲಾದ ಶುಭ ಫಲಗಳನ್ನು ಕಾಣಬಹುದು. ತಾಳ್ಮೆ- ಸಂಯಮ ತಂದುಕೊಳ್ಳಬೇಕು. ಈ ಅವಧಿಯಲ್ಲಿ ಆಪ್ತರಿಂದ ಅಗುವ ಯೋಗ ಇದೆ.
ವೃಷಭ ರಾಶಿ
ವಿನಾಕಾರಣ ಸಣ್ಣ- ಪುಟ್ಟ ವಿಷಯಗಳಿಗೆ ಮನಸ್ತಾಪ ಆಗಬಹುದು. ಹಿಡಿದ ಕೆಲಸಗಳು ಒಂದು ಸಲಕ್ಕೆ ಪೂರ್ತಿ ಮಾಡುವುದು ಕಷ್ಟವಾಗಲಿದೆ. ನಿಮ್ಮ ಸ್ವಭಾವದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ನೀವಾಗಿಯೇ ಒಪ್ಪಿಕೊಂಡ ಜವಾಬ್ದಾರಿಗಳನ್ನು ಮುಗಿಸಿಕೊಡುವ ಕಡೆಗೆ ಹೆಚ್ಚಿನ ನಿಗಾ ಮಾಡಿ. ಏಕೆಂದರೆ ವರ್ಷದ ಮೊದಲ ಮೂರು ತಿಂಗಳು ಎಲ್ಲವೂ ಸರಿಯಿದೆ ಎಂಬ ಭಾವನೆ ಇದ್ದರೂ ನಿಮ್ಮ ಒಳಗೊಂದು ಅಸಮಾಧಾನ ಇದ್ದೇ ಇರುತ್ತದೆ. ಯಾವ ವಿಚಾರದಲ್ಲೂ ಅತಿಯಾದ ಆತ್ಮವಿಶ್ವಾಸ ಮಾಡಬೇಡಿ.
ಮಿಥುನ ರಾಶಿ
ಒಂದೇ ಸಮಯಕ್ಕೆ ನಾನಾ ಬಗೆಯ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ವರ್ಷದ ಮೊದಲ ಮೂರು ತಿಂಗಳು ಆರೋಗ್ಯ ಸಮಸ್ಯೆ, ಸಾಲಗಾರರ ಒತ್ತಡ, ಆಪ್ತರಿಂದ ದೂರವಾಗುವುದು, ಅವಮಾನ ಎದುರಿಸುವುದು, ನಿರೀಕ್ಷೆಗಿಂತ ಸಿಕ್ಕಾಪಟ್ಟೆ ಖರ್ಚು, ಹೆಜ್ಜೆಹೆಜ್ಜೆಗೂ ಶತ್ರುಗಳಿಂದ ಅಡೆತಡೆ ಹೀಗೆ ನೆಮ್ಮದಿ ಹಾಳಾಗುವಂಥ ವಿದ್ಯಮಾನಗಳು ನಡೆಯುತ್ತವೆ. ಯಾವುದೇ ಕಾರಣಕ್ಕೂ ಕೆಲಸ ಬಿಡುವಂಥ ನಿರ್ಧಾರ ಮಾಡದಿರಿ ಹಾಗೂ ದೂರ ಪ್ರಯಾಣಗಳಿಗೆ ನೀವೇ ವಾಹನ ಚಾಲನೆ ಮಾಡದಿರಿ.
ಕರ್ಕಾಟಕ ರಾಶಿ
ನಿಮ್ಮ ಬಗ್ಗೆ ಅಥವಾ ನೀವು ಮದುವೆ ಆಗಬೇಕು ಎಂದಿರುವವರ ಬಗ್ಗೆ ಇಲ್ಲಸಲ್ಲದ ವಿಚಾರ ಹೇಳಿ, ಮದುವೆ ನಿಂತುಹೋಗುವ ಸಾಧ್ಯತೆ ಇರುತ್ತದೆ. ಮಾತಿಗೆ ಮಾತು ಬೆಳೆಸಬೇಡಿ. ಇನ್ನು ಹಿರಿಯರ ಮೂಲಕ ಹಾಗೂ ವಿದೇಶಗಳಲ್ಲಿ ಇರುವ ಸಂಬಂಧಿಗಳು, ಮಕ್ಕಳ ಮೂಲಕ ಹಣ ಬರುವ, ತೀರ್ಥಯಾತ್ರೆ, ಪ್ರವಾಸ ತೆರಳುವ ಯೋಗಗಳಿವೆ. ನೀವು ಮಾಡಿರುವ ಹೂಡಿಕೆಗೆ ಒಳ್ಳೆ ರಿಟರ್ನ್ಸ್ ಕೂಡ ಬರುವ ಸಾಧ್ಯತೆಗಳಿವೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಹಿನ್ನಡೆ ಆಗುವ ಯೋಗ ಇದೆ.
ಸಿಂಹ ರಾಶಿ
ಉದ್ಯೋಗದಲ್ಲಿ ನಿಮಗೆ ಒತ್ತಡ ಕಡಿಮೆ ಆಗಲಿದೆ. ಸುಖವಾಗಿ ಇದ್ದೇನೆ ಎಂದು ಮೈ ಮರೆಯದಿರಿ. ಭೂಮಿ ಖರೀದಿ, ಮನೆ ನಿರ್ಮಾಣ, ವಾಹನ ಖರೀದಿ, ವ್ಯಾಪಾರ ವಿಸ್ತರಣೆ, ಹೊಸದಾಗಿ ಹಣಕಾಸು ಹೂಡಿಕೆ, ವಿದೇಶ ಪ್ರಯಾಣ ಮೊದಲಾದ ಶುಭ ಫಲಗಳು ಕಾಣಲಿದ್ದೀರಿ. ಅತಿಯಾದ ಆತ್ಮವಿಶ್ವಾಸ ಬೇಡ. ವಿದ್ಯಾರ್ಥಿಗಳಿಗೆ ವಿದೇಶ ವ್ಯಾಸಂಗ ಅವಕಾಶ ಸಿಗಲಿದೆ. ಇನ್ನು ಅವಿವಾಹಿತರಿಗೆ ಸೂಕ್ತ ಸಂಬಂಧ ದೊರೆಯಲಿದೆ.
ಕನ್ಯಾ ರಾಶಿ
ಮಕ್ಕಳ ಏಳಿಗೆ ಹಾಗೂ ಪ್ರಗತಿಯಲ್ಲಿ ಮಿಶ್ರ ಫಲಗಳನ್ನು ಕಾಣಬೇಕಾಗುತ್ತದೆ. ಸಂತಾನ ಅಪೇಕ್ಷಿತರಿಗೆ ಶುಭ ಸುದ್ದಿ ಬಂತು ಅಂದುಕೊಳ್ಳುವಲ್ಲಿ ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಸೂಕ್ತ ಸಮಯಕ್ಕೆ ಔಷಧೋಪಚಾರ ಮಾಡುವುದರಲ್ಲಿ ತಡವಾಗದಂತೆ ನೋಡಿಕೊಳ್ಳಿ. ಭೂಮಿ- ಆಸ್ತಿ ಖರೀದಿ ಮಾರಾಟದಲ್ಲಿ ಆದಾಯ ಪ್ರಗತಿ ಕಾಣುವ ಯೋಗ ಇದ್ದರೂ ಕಾನೂನು ತೊಡಕುಗಳಿಂದ ಮಾನಸಿಕ ನೆಮ್ಮದಿ ಹಾಳಾಗಲಿದೆ. ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಲಿದ್ದು, ಅದಕ್ಕೆ ಕಾರಣ ತಿಳಿದುಕೊಳ್ಳುವುದು ಕಷ್ಟವಾಗಲಿದೆ. ವೈದ್ಯಕೀಯ ವೆಚ್ಚಗಳು ವಿಪರೀತ ಹೆಚ್ಚಾಗುತ್ತದೆ.
ತುಲಾ ರಾಶಿ
ವರ್ಷದ ಮೊದಲ ಮೂರು ತಿಂಗಳು ಸ್ನೇಹಿತರನ್ನು ಉಳಿಸಿಕೊಳ್ಳಿ. ಪ್ರತಿಯೊಂದಕ್ಕೂ ಅನುಮಾನ ಪಡುವ ಪ್ರವೃತ್ತಿ ಬೇಡ. ಇನ್ನು ಒರಟು ಮಾತುಗಳಂತೂ ಬೇಡವೇ ಬೇಡ. ಇನ್ನು ವಿದೇಶ ಪ್ರಯಾಣಗಳನ್ನು ಮಾಡಬೇಕು ಎಂದಿದ್ದಲ್ಲಿ ಅಲ್ಪಾವಧಿಯ ಪ್ರಯಾಣ ಮಾಡಬಹುದು. ಉನ್ನತ ವ್ಯಾಸಂಗಕ್ಕೆ ವಿದೇಶಕ್ಕೆ ತೆರಳಬೇಕು ಎಂದಿರುವ ವಿದ್ಯಾರ್ಥಿಗಳಿಗೆ ಸಹಾಯ ಮತ್ತು ಮಾರ್ಗದರ್ಶನ ದೊರೆಯಲಿದೆ. ಸೈಟು- ಮನೆ, ಕಾರು ಖರೀದಿಗೆ ಅವಕಾಶ ಇದೆ. ಸಣ್ಣ ಪುಟ್ಟ ವಿಚಾರದಲ್ಲಿಯೂ ಕಾನೂನು ಮೀರದಿರಿ.
ವೃಶ್ಚಿಕ ರಾಶಿ
ಹಣಕಾಸಿನ ಹರಿವು ಉತ್ತಮವಾಗಿರುತ್ತದೆ. ಮನೆ ನಿರ್ಮಾಣ ಕಾರ್ಯಗಳನ್ನು ಶುರು ಮಾಡುವುದಕ್ಕೆ ಉತ್ತಮ ಸಮಯ. ಹಲವು ಮೂಲಗಳಿಂದ ಅನುಕೂಲ ಒದಗಿ ಬರಲಿದೆ. ನಿಮಗೆ ಯಶಸ್ಸನ್ನು ಸಂಭಾಳಿಸುವುದು ಕಷ್ಟವಾಗಲಿದೆ. ಜತೆಗೆ ಪಾರ್ಟನರ್ ಷಿಪ್ ವ್ಯವಹಾರ ಮಾಡುವವರು ನಂಬಿಕೆ ಎಂಬ ಸಂಗತಿ ಬಂದಾಗ ಎಚ್ಚರಿಕೆಯಿಂದ ಹೆಜ್ಜೆ ಇಡಿ. ಈ ವರ್ಷ ತೀರ್ಥ ಕ್ಷೇತ್ರಗಳ ಪ್ರವಾಸ ಹೆಚ್ಚಿಗೆ ಇರುತ್ತದೆ. ತಂದೆ- ತಾಯಿಯ ಜತೆಗೆ ತೆರಳುವಂಥ ಯೋಗ ಇದೆ. ಇನ್ನು ಸ್ತ್ರೀಯರಿಗೆ ಉಷ್ಣಕ್ಕೆ ಸಂಬಂಧಿಸಿದಂತೆ ಅನಾರೋಗ್ಯ ಸಮಸ್ಯೆಗಳು ಸ್ವಲ್ಪ ಮಟ್ಟಿಗೆ ಕಾಡಬಹುದು.
ಧನುಸ್ಸು ರಾಶಿ
ಈ ವರ್ಷ ನಿಮ್ಮ ಮಾತು ಹಾಗೂ ಸೋದರ ಸಂಬಂಧಿಗಳೇ ಸಮಸ್ಯೆ ಆಗಬಹುದು. ದುಡ್ಡಿನ ವಿಚಾರದಲ್ಲಿ ಪಾರದರ್ಶಕವಾಗಿ ಇರಿ. ಯಾರ ಬಗ್ಗೆಯೂ ಹಗುರವಾದ ಮಾತನಾಡಬೇಡಿ. ಕೆಲವು ಕಾನೂನು ತೊಡಕುಗಳು ನಿಮ್ಮ ಬೆನ್ನತ್ತಿ ಬರಬಹುದು. ಆದ್ದರಿಂದ ನೀವಾಗಿಯೇ ಯಾವ ಸಮಸ್ಯೆಯನ್ನೂ ಮೈಮೇಲೆ ಎಳೆದುಕೊಳ್ಳಬೇಡಿ. ಅದರಲ್ಲೂ ಮುಖ್ಯವಾಗಿ ಇತರರ ಸಾಲಕ್ಕೆ ಜಾಮೀನಾಗಿ ನಿಲ್ಲದಿರಿ. ನೀವು ನಿರೀಕ್ಷೆಯೇ ಮಾಡದ ರೀತಿಯನ್ನು ಬಡ್ತಿಯೊಂದು ದೊರೆಯುವ ಯೋಗ ಇದೆ. ಅದರ ಜತೆಜತೆಗೆ ಬರುವ ಜವಾಬ್ದಾರಿಗಳನ್ನು ನಿರ್ವಹಿಸುವುದು ಸವಾಲಾಗಿ ಪರಿಣಮಿಸಬಹುದು.
ಮಕರ ರಾಶಿ
ನಾನಾ ಬಗೆಯ ಚಿಂತೆ- ಬೇಸರ, ಅನಾರೋಗ್ಯ ಕಾಡುತ್ತದೆ. ಆದರೆ ಹೇಗಾದರೂ ಹಣ ಹೊಂದಾಣಿಕೆ ಆಗುತ್ತದೆ. ಪೌರೋಹಿತ್ಯ- ಜ್ಯೋತಿಷ್ಯ ವೃತ್ತಿಯಲ್ಲಿ ಇರುವವರಿಗೆ ಹಣದ ಹರಿವು ಉತ್ತಮವಾಗಿರುತ್ತದೆ. ಇನ್ನು ಸಂತಾನ ಅಪೇಕ್ಷಿತರಿಗೆ ಶುಭ ಸುದ್ದಿ ಇದೆ. ಈ ವರ್ಷ ನಿಮ್ಮ ಸ್ವಭಾವದಲ್ಲಿ ಮಹತ್ತರವಾದ ಬದಲಾವಣೆ ಆಗಲೇಬೇಕಿದೆ. ಆಲೋಚನೆ ಮಾಡಿ, ಕೆಲಸವನ್ನು ಕೈಗೆತ್ತಿಕೊಳ್ಳುವ ಸ್ವಭಾವವನ್ನು ರೂಢಿಸಿಕೊಳ್ಳಿ. ಯಾರ ಮೇಲೂ ವೈಯಕ್ತಿಕ ದ್ವೇಷ ಸಾಧಿಸಲು ಹೋಗದಿರಿ. ಇನ್ನು ಆಸ್ತಿ ಮಾರಾಟ ಮಾಡಬೇಕು ಎಂದಿದ್ದಲ್ಲಿ ಈ ಅವಧಿಯಲ್ಲಿ ಸಾಧ್ಯವಾಗಲಿದೆ. ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರ ಇರಿ.
ಕುಂಭ ರಾಶಿ
ಹಣದ ಖರ್ಚನ್ನು ಸಂಭಾಳಿಸುವುದರಲ್ಲಿ ಹೈರಾಣಾಗುತ್ತೀರಿ. ನಿಮ್ಮ ತಾಯಿಯ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ತೆಗೆದುಕೊಳ್ಳಬೇಕಾಗುತ್ತದೆ. ಇನ್ನು ಚರ್ಮಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಆದ್ದರಿಂದ ಮಸಾಲೆ ಪದಾರ್ಥಗಳು, ಎಣ್ಣೆಯಲ್ಲಿ ಕರಿದ ಆಹಾರ ಪದಾರ್ಥಗಳಿಂದ ದೂರ ಇರಿ. ವಾಹನ ಖರೀದಿ ಮಾಡಬೇಕು ಎಂದಿರುವವರು, ಸಾಲ ಮಾಡುತ್ತಿದ್ದಲ್ಲಿ ನಿಮ್ಮ ಸಾಮರ್ಥ್ಯ ಏನು ಎಂಬುದನ್ನು ಅಳೆದುಕೊಂಡ ನಂತರವೇ ಮುಂದಕ್ಕೆ ಹೆಜ್ಜೆ ಇಡಿ. ಉದ್ಯೋಗಸ್ಥರಿಗೆ ಮೇಲಧಿಕಾರಿಗಳಿಂದ ಅತ್ಯುತ್ತಮ ಬೆಂಬಲ ಸಿಗಲಿದೆ.
ಮೀನ ರಾಶಿ
ವ್ಯಾಪಾರ- ಉದ್ಯಮ ನಡೆಸುತ್ತಿರುವವರಿಗೆ ಲಾಭದ ಪ್ರಮಾಣದಲ್ಲಿ ಕಡಿಮೆ ಆಗಬಹುದು ಅಥವಾ ತಡವಾಗಿ ಬರಬಹುದು, ಆದರೆ ಬರಲಿದೆ. ಇನ್ನು ಪಿತ್ರಾರ್ಜಿತ ಆಸ್ತಿ ಬರಬೇಕಿದ್ದಲ್ಲಿ ಅದು ದೊರೆಯಲಿದೆ. ಹಣದ ಹರಿವು ಉತ್ತಮವಾಗಿರಲಿದೆ. ಬಡ್ತಿ, ವರ್ಗಾವಣೆ, ವೇತನ ಹೆಚ್ಚಳದ ನಿರೀಕ್ಷೆಯಲ್ಲಿ ಇರುವವರಿಗೆ ಅಂದುಕೊಂಡಂತೆಯೇ ದೊರೆಯಲಿದೆ. ಆದರೆ ಒಮ್ಮೆ ಜನ್ಮ ಜಾತಕವನ್ನು ಪರಿಶೀಲನೆ ಮಾಡಿಸಿಕೊಳ್ಳಿ. ಏಳ್ಗೆ ಅಥವಾ ಪ್ರಗತಿಗೆ ತಡೆಯೊಡ್ಡುವ ದೋಷಗಳೇನಾದರೂ ಇದ್ದಲ್ಲಿ ಅದನ್ನು ಪರಿಹರಿಸಿಕೊಳ್ಳಿ. ಹಣ ಬರುತ್ತಿದೆ ಅಥವಾ ಬರಲಿದೆ ಎಂಬ ಕಾರಣಕ್ಕೆ ವಿಪರೀತ ಖರ್ಚು ಮಾಡದೆ ಉಳಿತಾಯದ ಕಡೆಗೂ ಗಮನ ನೀಡಿ. ಇಲ್ಲದಿದ್ದಲ್ಲಿ ಆ ನಂತರ ಪರಿತಪಿಸಬೇಕಾಗುತ್ತದೆ.