ಸಿಲಿಕಾನ್ ಸಿಟಿಗೆ ಮತ್ತೆ ಶುರುವಾಯ್ತು ಕೊರೋನಾ ಟೆನ್ಷನ್..! ಜನರೇ ಎಚ್ಚರ ಎಚ್ಚರ…!
ನೆರೆ ರಾಜ್ಯ ಕೇರಳದಲ್ಲಿ ಕೊರೋನಾ ಎರಡನೇ ಅಲೆ ಆರಂಭವಾಗಿದ್ದು ಬೆಂಗಳೂರಿನಲ್ಲಿ ದಿನೇ ದಿನೇ ಇದ್ರ ಆತಂಕ ಹೆಚ್ಚಾಗ್ತಲೇ ಇದೆ. ಇದ್ರ ಬೆನ್ನಲ್ಲೇ ಮತ್ತೆ ನಗರದಲ್ಲಿ ಕೊರೋನಾ ಸ್ಪೋಟವಾಗಿದ್ದು, ಆರೋಗ್ಯ ಇಲಾಖೆಗೆ ಮತ್ತಷ್ಟು ಟೆನ್ಷನ್ ಶುರುವಾಗಿದೆ. ಹಾಗಿದ್ರೆ ಏನ್ ಅ ಟೆನ್ಷನ್ ಅಂತ ನೀವೇ ಓದಿ..
ಹೌದು, ನೆರೆ ರಾಜ್ಯಗಳಾದ ಕೇರಳ ಹಾಗೂ ಮಹಾರಾಷ್ಟ್ರ ಕೊರೋನಾ ಎರಡನೇ ಅಲೆಯಿಂದ ತತ್ತರಿಸ್ತಿದೆ. ಇದ್ರ ಬೆನ್ನಲ್ಲೆ ರಾಜ್ಯಕ್ಕೆ ಕೇರಳದಿಂದ ಬರುವವರ ಸಂಖ್ಯೆ ಹೆಚ್ಚಾಗಿದ್ದು, ನಮ್ಮ ರಾಜ್ಯದಲ್ಲೂ ಕೂಡಾ ಕೇರಳದಿಂದ ಕ್ಲಸ್ಟರ್ ನಿರ್ಮಾಣವಾಗಿ ಔಟ್ ಬ್ರೇಕ್ ಆಗ್ತಿದೆ. ಹೀಗಾಗಿ ನಗರದಲ್ಲಿ ದಿನೇ ದಿನೇ ಕೊರೋನಾದ ಅಟ್ಟಹಾಸ ಹೆಚ್ಚಾಗೋ ಎಲ್ಲಾ ಲಕ್ಷಣಗಳು ಗೋಚರವಾಗ್ತಿದೆ.
ನಿನ್ನೆ ಬೆಳ್ಳಂದೂರಿನ ಅಪಾರ್ಟ್‌ಮೆಂಟ್‌ನಲ್ಲಿ ಸುಮಾರು 20 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ವು. ಹೀಗಾಗಿ ನಿನ್ನೆ 544 ಜನರ ಸ್ವಾಬ್ ಸ್ಯಾಂಪಲ್ ತೆಗೆದುಕೊಂಡು ಲ್ಯಾಬ್‌ಗೆ ಕಳುಹಿಸಲಾಗಿತ್ತು. ನಿನ್ನೆ ಅದ್ರ ರಿಪೋರ್ಟ್ ಬಂದಿದ್ದು ಮತ್ತೆ 6 ಮಂದಿಯಲ್ಲಿ ಕೋವಿಡ್ ಪಾಸಿಟಿವ್ ಬಂದಿದೆ. ಇದ್ರಿಂದ ಈ ಅಪಾರ್ಟ್‌ಮೆಂಟ್ ಒಂದರಲ್ಲೇ ಸುಮಾರು 26 ಕೊರೋನಾ ಕೇಸ್‌ಗಳು ಕಂಡು ಬಂದಿದ್ದು, ಇಂದು 82 ಜನರ ಸ್ವಾಬ್ ವರದಿ ಬರಲಿದೆ. ಈ ಬಗ್ಗೆ ಮಹದೇವಪುರ ಜೆಸಿ ವೆಂಕಟಾಚಲಪತಿ ಬಿಟಿವಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ತಪ್ಪಿದ ಭೀಕರ ಗ್ಯಾಂಗ್ ವಾರ್…! ರಾಜಧಾನಿಯಲ್ಲಿ ನೆತ್ತರು ಹರಿಸಲು ಬಂದಿತ್ತು ಮಂಗಳೂರು ಟೀಂ…!
ಒಂದೆಡೆ ಕೊರೋನಾ ತಡೆಗಟ್ಟಲು ಸರ್ಕಾರ ಮುಂದಾಗಿದ್ದು, ಕೇರಳ ಹಾಗೂ ಮಹಾರಾಷ್ಟ್ರದಿಂದ ಬರುವವರಿಗೆ 72 ಗಂಟೆಗಳ ಕಡ್ಡಾಯ ಕೊರೋನಾ ನೆಗೆಟಿವ್ ರಿಪೋರ್ಟ್ ಇರ್ಬೇಕು ಅಂತ ಮಾರ್ಗಸೂಚಿ ಬಿಡುಗಡೆ ಮಾಡಿತ್ತು. ಈ ಮಾರ್ಗಸೂಚಿಯಲ್ಲಿ ಅಂತಾರಾಜ್ಯ ಪ್ರಯಾಣ ನಿಷೇಧ ಮಾಡಿದೆ ಅಂತ ಕೇರಳ ರಾಜ್ಯ ಸಿಎಂ ಪಿನರಾಯಿ ವಿಜಯನ್ ಮೋದಿಗೆ ದೂರಿನ ಪತ್ರ ಬರೆದಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹಿಂದೆ ಕೊರೋನಾ ಸಂದರ್ಭದಲ್ಲೇ ಕೇರಳದಲ್ಲಿ ಕೇಸ್‌ಗಳ ಸಂಖ್ಯೆ ಬಹಳ ಕಡಿಮೆ ಇದ್ದಾಗ ಕರ್ನಾಟಕ ಮೇಲೆ ನಿಷೇಧ ಹೇರಿರ್ಲಿಲ್ವಾ, ಆದ್ರೂ ಯಾಕೆ ಈ ರೀತಿ ಪತ್ರ ಬರೆದ್ರು ಅಂತ ಗೊತ್ತಿಲ್ಲ. ಈ ಪತ್ರ ಗೊಂದಲದಿಂದ ಕೂಡಿದೆ. ಇದು ಸತ್ಯವಾದುದು ಅಲ್ಲ ಎಂದು ಕೇರಳ ಸಿಎಂಗೆ ಸುಧಾಕರ್ ಟಾಂಗ್ ನೀಡಿದ್ದಾರೆ.