ಪ್ರೀತಿ ವಿಶ್ವಾಸಕ್ಕೆ ತಾತ್ಕಾಲಿಕ ಸಮಸ್ಯೆ..! ಧನ್ಯವಾದ ದರ್ಶನ್ : ನಟ ಜಗ್ಗೇಶ್ ಹೀಗ್ಯಾಕಂದ್ರು..?
ಕಳೆದ ಒಂದೆರಡು ದಿನಗಳಿಂದ ಸ್ಯಾಂಡಲ್ವುಡ್ನಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ನವರಸ ನಾಯಕ ಜಗ್ಗೇಶ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ನಡುವಿನ ಕಿತ್ತಾಟಕ್ಕೆ ಕೊನೆಗೂ ತೆರೆ ಬಿದ್ದಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ನಟ ಜಗ್ಗೇಶ್ ದರ್ಶನ್ ಬಗ್ಗೆ ಮಾತನಾಡಿದ್ದಾರೆ ಹಾಗಾದ್ರೆ ನಟ ಜಗ್ಗೇಶ್ ಹೇಳಿದ್ದಾದ್ರೂ ಏನು ಈ ಸ್ಟೋರಿ ನೋಡಿ..!
ಮೈಸೂರಿನಲ್ಲಿ ತೋತಾಪುರಿ ಚಿತ್ರೀಕರಣದಲ್ಲಿ ನವರಸ ನಾಯಕ ಜಗ್ಗೇಶ್ ಭಾಗವಹಿಸಿದ ಸಂದರ್ಭದಲ್ಲಿ ಶೂಟಿಂಗ್ ಸೆಟ್ಗೆ ನುಗ್ಗಿದ ದರ್ಶನ್ ಅಭಿಮಾನಿಗಳು, ನವರಸ ನಾಯಕ ಜಗ್ಗೇಶ್ ಅವರನ್ನು ತೀವ್ರ ತರಾಟಗೆ ತೆಗೆದುಕೊಂಡಿದ್ರು. ಇನ್ನು ಈ ಬಗ್ಗೆ ಆಕ್ರೋಶಗೊಂಡ ನಟ ಜಗ್ಗೇಶ್ ಟ್ವಿಟ್ಟರ್ನಲ್ಲಿ ಲೈವ್ ಮೂಲಕ ತಮ್ಮ ಅಸಮಾಧಾನ ಹೊರ ಹಾಕಿದ್ದರು. ಇದೂ ಸಾಲದು ಎಂಬಂತೆ ಇಂದು ಬನ್ನೂರಿನಲ್ಲಿ ಪ್ರೆಸ್ಮೀಟ್ ನಡೆಸಿದ ಜಗ್ಗೇಶ್ ದರ್ಶನ್ ಬಗ್ಗೆ ಮಾತನಾಡಿದ್ದರು. ಇನ್ನು ಸಂಜೆ ಹೊತ್ತಿಗೆ ಮಾತನಾಡಿದ ನಟ ದರ್ಶನ್ ಕ್ಷಮೆ ಕೇಳಿದ್ರು.
ನಟ ದರ್ಶನ್ ಅವರ ಈ ನಡೆಯ ಬಗ್ಗೆ ಟ್ವಿಟ್ಟರ್ನಲ್ಲಿ ಬರೆದುಕೊಂಡಿರುವ ನಟ ಜಗ್ಗೇಶ್
ಸಮಯ ಸಂದರ್ಭ ವಿಷಘಳಿಗೆ,
ಪ್ರೀತಿ ವಿಶ್ವಾಸಕ್ಕೆ ತಾತ್ಕಾಲಿಕ ಸಮಸ್ಯೆ..!
ವೈಶಾಲ್ಯತೆ ಚಿಂತನೆ ಹೃದಯ ಇದ್ದಾಗ ಅಪನಂಬಿಕೆಗಳ ಮೋಡ ಸರಿದು ಮತ್ತೆ ಸೂರ್ಯ ಪ್ರಜ್ವಲಿಸುತ್ತಾನೆ
ಕನ್ನಡಕ್ಕೆ ಒಗ್ಗಟ್ಟಿರಲಿ
ಧನ್ಯವಾದ ದರ್ಶನ್
ಮನಸ್ಸು ಹಗುರವಾಯಿತು
ಧನ್ಯವಾದ ಮಾಧ್ಯಮ ಮಿತ್ರರಿಗೆ
ಧನ್ಯವಾದ ಕನ್ನಡ ಮನಗಳಿಗೆ
ಇನ್ನೆಂದು ಇಂಥ ದಿನ ಬಾರದಿರಲಿ
ಎಂದು ಟ್ವೀಟ್ ಮಾಡಿ ನಟ ದರ್ಶನ್ಗೆ ಟ್ಯಾಗ್ ಮಾಡಿದ್ದಾರೆ. ಇದರಿಂದಾಗಿ ನಟ ಜಗ್ಗೇಶ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ನಡುವಿನ ಕಿತ್ತಾಟಕ್ಕೆ ತೆರೆ ಬಿದ್ದಿದೆ.