ಸುದ್ದಿಗೋಷ್ಠಿಯಲ್ಲಿ ಪೊಗರು ಸಕ್ಸಸ್ ಸಂಭ್ರಮ..! ಧ್ರುವ ಸರ್ಜಾ ಹೇಳಿದ್ದೇನು?
ಸದ್ಯ ಸ್ಯಾಂಡಲ್ವುಡ್ನಲ್ಲಿ ಬಿಡುಗಡೆಯಾಗಿ ಸದ್ದು ಮಾಡುತ್ತಿದ್ದ ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರಕ್ಕೆ ವಿವಾದ ಅಂಟಿಕೊಂಡಿದೆ. ಚಿತ್ರದಲ್ಲಿರುವ ಕೆಲವು ದೃಶ್ಯಗಳು ಬ್ರಾಹ್ಮಣರನ್ನು ಅಪಮಾನ ಮಾಡುವಂತಿದೆ ಎಂದು ಆರೋಪಿಸಿ ಬ್ರಾಹ್ಮಣ ಸಂಘಟನೆಗಳು ಭಾರೀ ಪ್ರತಿಭಟನೆ ನಡೆಸಿ ಫಿಲಂ ಚೇಂಬರ್ ಮುಂಭಾಗದಲ್ಲೇ ಆಕ್ರೋಶ ವ್ಯಕ್ತಪಡಿಸಿದ್ದರು. ಇನ್ನು ಇದೀಗ ಪೊಗರು ಚಿತ್ರದ ವಿವಾದಗಳಿಗೆ ತಾತ್ಕಾಲಿಕ ಅಂತ್ಯ ಕಂಡಿದೆ.
ನಂತರ ಪೊಗರು ಟೀಂಗೆ ಹೊಸ ಸಂಕಷ್ಟ ಎದುರಾಗಿದ್ದು, ಕರಾಬು ಸಾಂಗ್ ವಿರುದ್ಧ ಹೊಸ ಕಂಪ್ಲೇಂಟ್ ನೀಡಿದ್ದಾರೆ. ಖರಾಬು ಸಾಂಗ್ ನಲ್ಲಿ ಮಹಿಳೆಯ ಕುರಿತು ಕೆಟ್ಟದಾಗಿ ಚಿತ್ರಿಸಲಾಗಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ವಕೀಲ ಅಮೃತೇಶ್ ದೂರು ನೀಡಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೂ ಅಮೃತೇಶ್ ದೂರು ನೀಡಿದ್ದು, ಖರಾಬು ಸಾಂಗ್ನಲ್ಲಿ ಮಹಿಳೆಯನ್ನು ಹೀನಾಯವಾಗಿ ನಡೆಸಿಕೊಳ್ಳಲಾಗಿದೆ, ತಕ್ಷಣ ಖರಾಬು ಹಾಡನ್ನು ಹಿಂದಕ್ಕೆ ಪಡೆಯಬೇಕು ಅಂತ ಅಮೃತೇಶ್ ಆಗ್ರಹಿಸಿದ್ದಾರೆ. ಹಾಡಿನಲ್ಲಿ ಹೆಣ್ಣಿನ ಮೇಲೆ ದೌರ್ಜನ್ಯ ನಡೆಸುವಂತೆ ಚಿತ್ರಿಸಲಾಗಿದೆ. ಹಾಡನ್ನು ನೋಡಿ ಕೆಲವರು ನಿಜಜೀವನದಲ್ಲೂ ಅನುಸರಿಸಿದ್ರೆ ಕಷ್ಟ. ಸಮಾಜಕ್ಕೆ ಕಂಟಕವಾದ ಖರಾಬು ಸಾಂಗ್ ತೆಗೆಸಿರಿ ಎಂದು ದೂರು ನೀಡಿದ್ದರು.
ಹಾಗಾಗಿ ಇಂದು ನಾಯಕ ನಟ ಧ್ರುವ ಸರ್ಜಾ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಿದ್ದು ಹಲವು ವಿವಾದಗಳ ನಂತರವೂ ಚಿತ್ರ ಯಶಸ್ಸನ್ನು ಕಂಡಿದೆ. ಈ ಚಿತ್ರ ರಂಗ 10 ತಿಂಗಳ ನಂತರ ಮುಂದೆ ಬಂದಿದೆ. ಹೊಸ ದಿಕ್ಕಿನತ್ತ ನಮ್ಮ ಕನ್ನಡ ಚಿತ್ರರಂಗ ನಡೆಯಬೇಕು, ಇಡೀ ಭಾರತ ದೇಶ ಕನ್ನಡ ಚಿತ್ರ ದತ್ತ ನೋಡಬೇಕು ಹಾಗೂ ಅಂಥಹ ಸಿನೆಮಾಗಳು ಬರಬೇಕು. ಇಲ್ಲಿ ನಿರ್ಮಾಪಕನೇ ತಾಯಿಯ ಸ್ಥಾನದಲ್ಲಿದ್ದರೆ ನಿರ್ದೇಶಕ ತಂದೆಯ ಸ್ಥಾನದಲ್ಲಿದ್ದಾನೆ. ನಾವೆಲ್ಲಾ ಕಲಾವಿದರು ಆ ತಾಯಿಯ ಮಕ್ಕಳು ಯಾರಿಗೂ ಯಾವುದೇ ತೊಂದರೆಯಾಗಿದ್ದರೆ ಕ್ಷಮಿಸಬೇಕು ಹಾಗೂ ಸಿನೆಮಾದ ಯಶಸ್ಸಿಗೆ ಕಾರಣರಾದವರಿಗೆ ಧನ್ಯವಾದಗಳನ್ನು ತಿಳಿಸಿದರು. ಸಿನೆಮಾದಲ್ಲಿ ಕೆಲವು ದೃಷ್ಯಗಳನ್ನು ತೆಗೆದು ಹೊಸ ವರ್ಷನ್ನಲ್ಲಿ ತೆರೆಕಾಣಲಿದೆ ಇದಕ್ಕೆ ಅಭಿಮಾನಿಗಳು ಸಹಕರಿಸಬೇಕು ಎಂದು ಹೇಳಿದ್ದಾರೆ. ಡೈರೆಕ್ಟರ್ ನಂದಕಿಶೋರ್, ನಿರ್ಮಾಪಕ ಬಿ.ಕೆ.ಗಂಗಾಧರ್, ಬಾಡಿ ಬಿಲ್ಡರ್ ಜಾನ್ ಲುಕಾಸ್, ನಟಿ ತಾರಾ ಸೇರಿದಂತೆ ಹಲವರು ಬೆಂಗಳೂರಿನ ಖಾಗಿ ಹೋಟೆಲ್ನಲ್ಲಿ ಭಾಗಿಯಾಗಿದ್ದರು.
ಪೊಗರು ಸಿನಿಮಾ ವಿವಾದ ಕೂಡಾ ಸುಖಾಂತ್ಯ ಕಂಡಿದೆ. ಪೊಗರು ಸಿನಿಮಾದಲ್ಲಿ ಬ್ರಾಹ್ಮಣರ ಅವಹೇಳನ ಮಾಡಲಾಗಿದೆ ಅನ್ನೋ ವಿವಾದ ಸೃಷ್ಟಿಯಾಗಿತ್ತು. ಈ ಬಗ್ಗೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕ್ಷಮೆಯಾಚಿಸಿದ್ದಾರೆ. ನಮ್ಮ ಇಡೀ ಕುಟುಂಬ ಹಿಂದುತ್ವ ಪದ್ಧತಿ ಆಚರಿಸುತ್ತೇವೆ, ಗೌರವಿಸುತ್ತೇವೆ. ಪಾತ್ರದಲ್ಲಿ ಯಾವುದೇ ಸಮುದಾಯಕ್ಕೆ ನೋವಾಗಿದ್ರೆ ಬೇಷರತ್ ಕ್ಷಮೆ ಕೇಳುತ್ತೇನೆ ಅಂತಾ ಧ್ರುವ ಸರ್ಜಾ ಟ್ವೀಟ್ ಮಾಡಿದ್ದಾರೆ.