‘ಜಿ.ಟಿ ದೇವೇಗೌಡ, ಆನಂದ್ ಆಸ್ನೋಟಿಕರ್ ಪಕ್ಷ ತ್ಯಜಿಸಿಲ್ಲ: ಮಧು ಬಂಗಾರಪ್ಪ ಜೆಡಿಎಸ್ ನಲ್ಲಿ ಸಕ್ರಿಯರಾಗಿಲ್ಲ’
ಹಾಸನ: ಮಾಜಿ ಸಚಿವ ಆನಂದ್ ಅಸ್ನೋಟಿಕರ್, ಶಾಸಕ ಜಿ.ಟಿ. ದೇವೇಗೌಡ ಅವರು ಜೆಡಿಎಸ್ ಬಿಡುವ ಮಾತೇ ಇಲ್ಲ ಎಂದು ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ ಹೇಳಿದರು.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜಿ.ಟಿ. ದೇವೇಗೌಡ ಮತ್ತು ಆನಂದ್ ಆಸ್ನೋಟಿಕರ್ ಜೆಡಿಎಸ್ ತ್ಯಜಿಸಲ್ಲ, ಅವರು ಜೊತೆ ನಾನು ನಿರಂತರ ಸಂಪರ್ಕದಲ್ಲಿದ್ದೇನೆ ಇಲ್ಲ ಸಲ್ಲದ ಊಹಾಪೋಹ ಬೇಡ ಎಂದು ಸ್ಪಷ್ಟನೆ ನೀಡಿದ್ದಾರೆ.
ಮಧು ಬಂಗಾರಪ್ಪ ಚುನಾವಣೆಯಲ್ಲಿ ಸೋತ ಬಳಿಕ ಒಂದೂವರೆ ವರ್ಷದಿಂದ ಪಕ್ಷದ ಕಚೇರಿಗೆ ಬರುತ್ತಿಲ್ಲ. ನಾನೂ ಅನೇಕ ಬಾರಿ ಕರೆದರೂ ಬಂದಿಲ್ಲ. ಅವರನ್ನ ಶಾಸಕರನ್ನಾಗಿ ಮಾಡಲು ಎಚ್.ಡಿ. ಕುಮಾರಸ್ವಾಮಿ ಅವರು ಪಟ್ಟ ಕಷ್ಟ ಏನೆಂಬುದು ಅರಿಯಬೇಕು’ ಎಂದು ತಿಳಿಸಿದರು.
ಪಕ್ಷವನ್ನು ಬಲ ಪಡಿಸಲು ವಿಜಯಪುರ, ಯಾದಗಿರಿ ಸೇರಿದಂತೆ ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕಗಳಲ್ಲಿ ಮಹಿಳಾ ಕಾರ್ಯಕರ್ತರ ಸಮಾವೇಶ ಸೇರಿದಂತೆ ರ್ಯಾಲಿಗಳನ್ನು ಆಯೋಜಿಸುವುದಾಗಿ ದೇವೇಗೌಡ ಹೇಳಿದ್ದಾರೆ.