ರಾಮ ಜನ್ಮಭೂಮಿ ಅಯೋಧ್ಯೆಯ ಮಂದಿರ ನಿರ್ಮಾಣಕ್ಕೆ ಸಂಗ್ರಹವಾಯ್ತು ನಿರೀಕ್ಷೆಗೂ ಮೀರಿದ ಬೃಹತ್ ಮೊತ್ತ..!
ಭಾರತದಲ್ಲಿ ಅಯೋಧ್ಯೆ ರಾಮಮಂದಿರ ವಿವಾದ ಎನ್ನುವುದು ಇತಿಹಾಸದ ಪುಟಗಳಲ್ಲಿ ತನ್ನದೇ ಆದ ಸ್ಥಾನವನ್ನು ಹೊಂದಿದೆ. 1528ರಲ್ಲಿ ಇಲ್ಲಿ ಬಾಬರಿ ಮಸೀದಿ ನಿರ್ಮಾಣವಾಗಿತ್ತು ಎನ್ನುವ ವಾದ ಕೂಡ ಇದೆ. ಆದರೆ 1885ರಿಂದ ಈ ಕುರಿತು ಕಾನೂನು ಹೋರಾಟ ನಡೆಯುತ್ತಲೇ ಬಂದಿದ್ದು ಇದಕ್ಕೆ ಕೊನೆಗೂ ಮುಕ್ತಿ ಸಿಕ್ಕಿದ್ದು ನವೆಂಬರ್ 9, 2019ರಲ್ಲಿ. ಈಗ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಚಾಲನೆ ಕೂಡ ಸಿಕ್ಕಿದೆ.
ಈ ವಿಷಯವಾಗಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಯವರು ಅಯೋಧ್ಯೆ ವಿವಾದಿತ ಭೂಮಿಯಲ್ಲ ಎಂಬುದಾಗಿ ಕೋರ್ಟ್ ತೀರ್ಮಾನವನ್ನು ನೀಡಿದೆ, ಅಲ್ಲದೇ ಭವ್ಯ ರಾಮ ಮಂದಿರ ನಿರ್ಮಾಣಕ್ಕೆ ತೀರ್ಪು ನೀಡಿದೆ. ಯಾರೋ ಕಾರ್ಪೊರೇಟ್ ಗಳು ನಾವು ಮಂದಿರ ನಿರ್ಮಾಣ ಮಾಡ್ತಿವಿ ಅಂತಾ ಬಂದ್ರು ಆದರೆ ನಾವು ಭಕ್ತರಲ್ಲಿ ಮಂದಿರ ನಿರ್ಮಾಣಕ್ಕೆ ಮನವಿ ಮಾಡಿಕೊಂಡಿದ್ದೇವೆ ಎಂಬುದಾಗಿ ಹೇಳಿದ್ದಾರೆ.
ಭವ್ಯ ರಾಮ ಮಂದಿರ ನಿರ್ಮಾಣಕ್ಕಾಗಿ ನಿಧಿ ಸಂಗ್ರಹವಾಗುತ್ತಿದ್ದು 2100 ಕೋಟಿಯ ಬೃಹತ್ ಮೊತ್ತವನ್ನು ಭಕ್ತರು ಸಂಗ್ರಹಿಸಿದ್ದಾರೆ. ಇನ್ನೂ ಹಲವು ಚೆಕ್ ಗಳು ಬಂದಿದ್ದು ಚೆಕ್ ಕ್ಲೀಯರ್ ಆದ ಬಳಿಕ ಸರಿಯಾದ ಲೆಕ್ಕ ಸಿಗಲಿದೆ ಎನ್ನುವ ವಿಚಾರವನ್ನೂ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಗಳು ತಿಳಿಸಿದ್ದಾರೆ. ಒಟ್ಟಿನಲ್ಲಿ ನಿರೀಕ್ಷೆಗೂ ಮೀರಿ ಮೊತ್ತ ಸಂಗ್ರಹವಾಗುತ್ತಿದ್ದು ಭವ್ಯ ಮಂದಿರ ನಿರ್ಮಾಣವಾಗಲಿದೆ.