ಒಂಟಿ ಮನೆಯ ಅಸಲಿ ಆಟಕ್ಕೆ ಕೌಂಟ್​ಡೌನ್​ ಶುರು..! ಕಿಚ್ಚ​ ಇಟ್ಟ ಮುಹೂರ್ತದಲ್ಲಿಯೇ ಗ್ರ್ಯಾಂಡ್​ ಓಪನಿಂಗ್​..

ಕನ್ನಡ ಕಿರುತೆರೆ ಲೋಕದ ಫೇಮಸ್​ ರಿಯಾಲಿಟಿ ಶೋ ಅಂದ್ರೆ ಓನ್​ ಎಂಡ್​ ಓನ್ಲಿ ಬಿಗ್​ ಬಾಸ್​..ಕರ್ನಾಟಕದ ಕೊಟ್ಯಾಂತರ ಮಂದಿಯನ್ನ ರಂಜಿಸುವಲ್ಲಿ ಯಶಸ್ವಿಯಾಗಿರೋ ಬಿಗ್​ಬಾಸ್​ನ 8ನೇ ಆವೃತ್ತಿಗೆ ವೇದಿಕೆ ಸಜ್ಜಾಗಿದೆ. ಕೊರೋನಾ ಕಾಣರಣದಿಂದ ಬಿಗ್​ಬಾಸ್​​ ಮುಂದೂಡಲಾಗಿತ್ತು. ಈಗ ಕೊರೋನಾಕ್ಕೆ ಸೆಡ್ಡು,ಗ್ರ್ಯಾಂಡ್​​ ಓಪನಿಂಗ್​ಗೆ ಕೇವಲ ಒಂದೇ ಒಂದು ದಿನ ಬಾಕಿಯಿದೆ.

ಪ್ರತಿ ಸೀಸನ್​​ಗಿಂತ ಈ ಸೀಸನ್​ ಸಖತ್​ ಡಿಫರೆಂಟ್​..!

15 ಮಂದಿಯನ್ನು ಅರಮನೆಯಂತಹ ಒಂಟಿಮನೆಯಲ್ಲಿ ಹೊರ ಜಗತ್ತಿನ ಸಂಪರ್ಕ ಇಲ್ಲದಂತೆ ಒಂದೇ ಮನೆಯಲ್ಲಿ ಕೂಡಿ ಹಾಕಿ ಅವ್ರ ಸ್ವಭಾವ ಹೇಗಿದೆ, ಹೇಗೆ ಪ್ರೀತಿಸ್ತಾರೆ, ಹೇಗೆ ಜಗಳ ಆಡ್ತಾರೆ ಅನ್ನುವುದರ ಜೊತೆಗೆ ಒಂದಿಷ್ಟು ಟಾಸ್ಕ್​​ಗಳನ್ನು ಕೊಟ್ಟು ವೀಕ್ಷಕರನ್ನು ಎಂಟರ್​ಟೈನ್​ ಮಾಡೋದೆ ಈ ಕಾರ್ಯಕ್ರಮದ ಕಾನ್ಸೆ​ಪ್ಟ್​. ಆದ್ರೆ ಈ ಸೀಸನ್​ನಲ್ಲಿ ಸ್ವಲ್ಪ ಚೇಂಜ್​.. ಬಿಗ್​ ಬಾಸ್​ ಸೀಸನ್​ 8ರಲ್ಲಿ 15 ಜನ ಇರುವುದಿಲ್ಲ ಬದಲಿಗೆ ಬರೋಬರಿ 17 ಜನ ಬಿಗ್​ ಮನೆಯೊಳಗೆ ಹೋಗ್ತಾರೆ.

ಬಿಗ್​ಬಾಸ್​ನಲ್ಲಿ ಕಾಮನ್​​ಮ್ಯಾನ್​​ ಅಥವಾ ಸೆಲಿಬ್ರೆಟಿನಾ..?

ಸಾಮಾನ್ಯವಾಗಿ ಬಿಗ್​ ಬಾಸ್​ ಶುರುವಾಗುತ್ತೆ ಅಂದ್ರೆ ಪ್ರೇಕ್ಷಕರಲ್ಲಿ ಒಂಥರಾ ಕೂತುಹಲವಿರುತ್ತೆ. ಯಾಱರು ಹೋಗ್ತಾರೆ ಆ ದೊಡ್ಮನೆಗೆ..ಹೇಗಿರುತ್ತೆ ಅಂತೆಲ್ಲಾ ಬಿಗ್​​ ಬಾಸ್​ ಪ್ರೇಕ್ಷಕರ ಮನಸ್ಸಲ್ಲಿ ಪ್ರಶ್ನೆಗಳು ಮೂಡುತ್ತವೆ. ಯೆಸ್​ ಈ ಬಾರಿ ಬಿಗ್​ಬಾಸ್​ ಮನೆಯೊಳಗೆ ಕಾಮನ್ ಮ್ಯಾನ್​ಗೆ ನೋ ಎಂಟ್ರಿ. ಸೀಸನ್​ ಒಂದರಲ್ಲಿ ಬರೀ ಬೇರೆ ಬೇರೆ ಕ್ಷೇತ್ರದ ಸೆಲಬ್ರೆಟಿಗಳು ರಂಜಿಸುತ್ತಿದ್ದರು. ಇದ್ರಂತೆ ಬಿಗ್​ಬಾಸ್​​ ಸೀಸನ್​ 8ರಲ್ಲಿಯೂ ಬರೀ ಸೆಲಬ್ರೆಟಿಗಳೇ ಮೋಡಿ ಮಾಡಲಿದ್ದಾರೆ.

100 ದಿನ ಈ ಸುಂದರ ಬಂದೀಖಾನೆಯೊಳಗೆ ಸೆರೆಯಾಗೋಱರು..?

ಸಾಮಾನ್ಯವಾಗಿ ಬಿಗ್​ಬಾಸ್​​ ಕೆಲ ಸೀಸನ್​ಗಳಲ್ಲಿ ಬರೀ ಸೆಲಬ್ರೆಟಿಗಳಿಂದ್ರೆ. ಇನ್​ ಕೆಲ ಸೀಸನ್​ನಲ್ಲಿ ಜಾಸ್ತಿ ಕಾಮನ್​ ಹಾಗೂ ಸ್ವಲ್ಪ ಸೆಲಬ್ರೆಟಿಗಳಿರತ್ತಿದ್ರು. ಇನ್ನೂ ಕೆಲ ಸೀಸನ್​ಗಳಲ್ಲಿ ಕಾಮನ್​ಮ್ಯಾನ್ ಹಾಗೂ ಸೆಲಬ್ರೆಟಿಗಳು ಸಮವಾಗಿರತ್ತಿದ್ರು.​ ಆದ್ರೆ ಈ ಬಾರಿ ಬಿಗ್​​ಬಾಸ್​ ಸೀಸನ್​ 8ರಲ್ಲಿ ಎಲ್ಲಾ ಕ್ಷೇತ್ರದ ಸೆಲಬ್ರೆಟಿಗಳಿರುತ್ತಾರೆ. ಆ್ಯಕ್ಟರ್​​ ಸಿಂಗರ್​​, ಕಾಮಿಡಿಯನ್​​​, ರಾಜಕೀಯ, ಸ್ಪೋರ್ಟ್ಸ್ ಸೇರಿದಂತೆ ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡಿರುವ ಸೆಲಬ್ರೆಟಿಗಳು, ದೊಡ್ಮನೆಯ ಆಟದಲ್ಲಿ ಭಾಗಿಯಾಗ್ತಾರೆ. ಇನ್ನು ಈ ವರ್ಷ ಬಿಗ್​ಬಾಸ್​ ಲೋಗೋ ಸಹ ಡಿಫರೆಂಟ್​ ಆಗಿದೆ.ಇನ್ನೊಂದು ವಿಶೇಷ ಅಂದ್ರೆ ಈ ವರ್ಷ ಬಿಗ್​ಬಾಸ್​ ಸೀಸನ್​ 8 ರ ಜೊತೆಗೆ ಬಿಗ್​​ಬಾಸ್​ ಸೀಸನ್​ 9 ಸಹ ನಡೆಯುವ ಸಾಧ್ಯತೆಯಿದೆ.

ಎಲ್ಲಾ ಸೀಸನ್​ಗಿಂತ ಈ ಸೀಸನ್​ ಬಿಗ್​ಬಾಸ್​ ಹೊಸ ರೂಪದಲ್ಲಿರುತ್ತದೆ. ಪ್ರತಿ ಸೀಸನ್​ನಂತೆ ಈ ಸೀಸನ್​ನಲ್ಲಿಯೂ ಹಲವು ಹೊಸತುಗಳು ಇರುತ್ತದೆ. ಬಿಗ್​ ಮನೆಯ ವಿನ್ಯಾಸದಲ್ಲಿ ಬದಲಾವಣೆಗಳಿರುತ್ತದೆ. ದೊಡ್ಮನೆ ಗೇಮ್​​ಗಳು ಚೇಂಜ್​ ಇರುತ್ತದೆ. 17 ಮಂದಿಯ ನಿದ್ದೆಗೆಡಿಸುವ ಬಣ್ಣ ಬಣ್ಣದಿಂದ ಕೂಡಿರುವ ಒಂದು ದೊಡ್ಡ ಮನೆಯಲ್ಲಿ, ವ್ಯಕ್ತಿತ್ವದ ಬಣ್ಣಗಳನ್ನ ಬಯಲು ಮಾಡುವ ಆಯಾಮಗಳಿರುತ್ತದೆ. ಇದ್ರಿಂದ ನೋಡುಗರಿಗೆ ಹೊಸತನದ ಫೀಲ್​ ಆಗುತ್ತದೆ.

ಕೊರೋನಾಕ್ಕೆ ಡಿಚ್ಚಿ ಹೊಡೆದು ಶುರುವಾಯ್ತು ಬಿಗ್​ಬಾಸ್​..!

ಬಿಗ್​ಬಾಸ್​ ಸೀಸನ್​ 8 ಈಗಾಗಲೇ ಶುರುವಾಗಿ, ಮುಗಿಸಬೇಕಿತ್ತು. ಆದ್ರೆ ಡೆಡ್ಲಿ ಕೊರೋನಾದ ಕಾರಣ ಬಿಗ್​ಬಾಸ್​ ಸೀಸನ್​ 8 ಮುಂದೂಡಲಾಗಿತ್ತು. ಈಗ ಕಿಚ್ಚ ಸುದೀಪ್​ ಇಟ್ಟ ಮುಹೂರ್ತದಲ್ಲಿಯೇ ಅದ್ಧೂರಿಯಾಗಿ ಶುರುವಾಗಲಿದೆ ಬಿಗ್​ಬಾಸ್. ಇನ್ನೂ ಸಹ ಕೊರೋನಾ ಇರೋ ಕಾರಣ ಬಿಗ್​ ಬಾಸ್​​ ಮನೆಯಲ್ಲಿ, ಆಟದಲ್ಲಿ ಸ್ವಲ್ಪ ಚೇಂಜ್​ ಆಗಿದೆ.

ಯೆಸ್​ ಈಗಾಗಲೇ ಕೊರೊನಾ ಪರೀಕ್ಷೆ ಮಾಡಿಸಿ, ಬಿಗ್​ಬಾಸ್​ ಶುರುವಾಗುವ ಒಂದು ವಾರದ ಮೊದಲೇ, ಸ್ಪರ್ಧಿಗಳನ್ನು ಕ್ವಾರಂಟೈನ್ ಮಾಡಲಾಗಿದೆ. ಮೂರು ಬಾರಿ ಕೊರೊನಾ ಪರೀಕ್ಷೆ ಮಾಡಲಾಗುವುದು. ಪಾಸಿಟಿವ್ ಬಂದಲ್ಲಿ ಆ ಸ್ಪರ್ಧಿಗಳನ್ನು ಬಿಗ್ ಬಾಸ್ ಮನೆಗೆ ಕಳಿಸಲಾಗುವುದಿಲ್ಲ. ಹಾಗೇ ದೊಡ್ಮನೆಯೊಳಗೆ ಎಂಟ್ರಿ ಕೊಟ್ಟ ದಿನದಿಂದ, ಹೊರಗೆ ಬರುವ ದಿನದವರೆಗೂ ಮಾಸ್ಕ್​​, ಸಾನಿಟೈಸರ್​ ಸೇರಿದಂತೆ ಸೇಫ್ಟಿ ಮೆಜರ್ಮೆಂಟ್​ ಇರುತ್ತದೆ.

17 ಸ್ಪರ್ಧಿಗಳು, 80 ಕ್ಯಾಮೆರಾಗಳು !

ದೊಡ್ಮನೆ ನೋಡೋಕ್ಕೆ ಒಂಥರಾ ಚೆಂದ,ಕಲರ್​ ಫುಲ್​ ಲೈಟಿಂಗ್​, ನೂರಾರು ಕ್ಯಾಮೆರಾಗಳು, ಡಿಫರೆಂಟ್​​ ಮಾದರಿಯ ಗಾರ್ಡನ್​​ ಸೇರಿದಂತೆ ಕಿಚನ್​ ನೋಡುಗರನ್ನ ಸಿಕ್ಕಾಪಟ್ಟೆ ಅಟ್ರ್ಯಾಕ್ಟ್​​ ​​ಮಾಡುತ್ತೆ. ಈ ಒಂಟಿ ಮನೆಯಲ್ಲಿ ಹೆಜ್ಜೆ ಇಟ್ಟಲ್ಲೆಲ್ಲಾ ನೂರಾರು ಕ್ಯಾಮೆರಾಗಳು, ಸ್ಪರ್ಧಿಗಳನ್ನೇ ಫೋಕಸ್​ ಮಾಡ್ತಿರುತ್ತದೆ. 24 ಗಂಟೆಯೂ ಅವರ ಚಲನವಲನಗಳು ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಯಾಗ್ತಿರುತ್ತದೆ. ಇದ್ರಂತೆ ಈ ಬಾರಿ ಬಿಗ್​ಬಾಸ್ ಮನೆಯಲ್ಲಿ 80 ಕ್ಯಾಮೆರಾಗಳ ಕಣ್ಗಾವಲಿರುತ್ತದೆ.

ಈ 80 ಕ್ಯಾಮೆರಗಳು 17 ಮಂದಿಯನ್ನು ಅರಮನೆಯಂತಹ ಒಂಟಿಮನೆಯಲ್ಲಿ ಹೊರ ಜಗತ್ತಿನ ಸಂಪರ್ಕ ಇಲ್ಲದಂತೆ ಒಂದೇ ಮನೆಯಲ್ಲಿ ಕೂಡಿ ಹಾಕಿ ಅವ್ರ ಸ್ವಭಾವ ಹೇಗಿದೆ, ಹೇಗೆ ಪ್ರೀತಿಸ್ತಾರೆ, ಹೇಗೆ ಜಗಳ ಆಡ್ತಾರೆ ಅನ್ನುವುದರ ಜೊತೆಗೆ ಒಂದಿಷ್ಟು ಟಾಸ್ಕ್​​ಗಳನ್ನು ಕೊಟ್ಟು ವೀಕ್ಷಕರನ್ನು ಎಂಟರ್​ಟೈನ್​ ಮಾಡಲು ಸಹಕಾರಿಯಾಗುತ್ತೆ. ಈ ಭಾರಿ ಇದಲ್ಲದೇ ಒಂದೊಂದು ಸ್ಪರ್ಧಿಗಳ ಚಲನವಲನಗಳನ್ನ ಗಮನಿಸಲು ನಾಲ್ಕು ಜನರಿರುತ್ತಾರೆ.

‘ಬಿಗ್​ಬಾಸ್​​-8’ ಸ್ಟೈಲಿಶ್​​​ ಹೋಸ್ಟ್​ ಕಿಚ್ಚ ಸುದೀಪ್​..!

ಸ್ಟೈಲಿಶ್​ಗೆ ಹೆಸ್ರುವಾಸಿಯಾದ ಕಿಚ್ಚ ಸುದೀಪ್​ ನಿರೂಪಣೆಯಲ್ಲಿಯೂ ಸಖತ್​​ ಸ್ಟೈಲಿಶ್​. ಕಳೆದ ಏಳು ಸೀಸನ್​​ಗಳನ್ನು ಹೋಸ್ಟ್​​ ಮಾಡಿರೋ ನಟ ಕಿಚ್ಚ ಸುದೀಪ್​​​. ಈ ಸೀಸನ್​​ನಲ್ಲಿಯೂ ದೊಡ್ಮನೆ ನೇತೃತ್ವ ವಹಿಸಿಕೊಂಡಿದ್ದಾರೆ. ಸತತ 7 ಸೀಸನ್​​ಗಳಲ್ಲಿ ಸ್ಟೈಲಿಷ್ ಜೊತೆಗೆ ಜವಾಬ್ದಾರಿಯುತ ನಿರೂಪಣೆ ಮಾಡಿದ್ದ ಕಿಚ್ಚ, ಈ ಬಾರಿ ಕೂಡ ಭರ್ಜರಿ ಸಿದ್ದತೆ ಮಾಡ್ಕೊಂಡು, ಹೊಸ ಹುರುಪಿನಿಂದ ಎದುರು ನೋಡ್ತಿದ್ದಾರೆ.

ನಿಮ್ಮ ಮನೆಯವರೇ ಆಗಲಿರೊ ಆ 17 ಬಂಧುಗಳ್ಯಾರು..?

ಅರೇ ಇದೆಲ್ಲಾ ಓಕೆ ಬಿಗ್​ಬಾಸ್​​ ಮನೆಯೊಳಗೆ ಯಾರ್​​ ಹೋಗ್ತಾರೆ ಅಂತ ಕೇಳೋಕ್ಕೆ ವೈಟ್​ ಮಾಡ್ತಿದ್ದಿರಲ್ವ. ಹೌದು ನಿಮ್ಮ ನಿರೀಕ್ಷೆಯಂತೆ ಈ ಬಾರಿ ಒಂಟಿ ಮನೆಯೊಳಗೆ ಹೋಗುವರು ಸ್ಟಾರ್​​ ಆ್ಯಕ್ಟರ್ಸ್​​​​ಗಳೇ..ಅದ್ರಲ್ಲಿಯೂ ಬ್ರಹ್ಮಗಂಟು ಸೀರಿಯಲ್​ ಮೂಲಕ ರಾಜ್ಯಾದ್ಯಂತ ಫೇಮಸ್​ ಆಗಿರೋ ಕಿರುತೆರೆ ನಟಿ ಗೀತಾ ಭಾರತಿ ಭಟ್​​, ಸ್ಯಾಂಡಲ್​ವುಡ್​ ಖ್ಯಾತ ನಟಿ ಶುಭಾ ಪೂಂಜಾ, ಆನುಷಾ ರಂಗನಾಥ್​​, ವಿನಯ್​ ಪ್ರಸಾದ್​​ ಸೇರಿದಂತೆ ಒಂದು ಖಾಸಗಿ ಚಾನೆಲ್​ ನಿರೂಪಕ ಪಕ್ಕಾ ಆಗಿದ್ದಾರೆ ಅನ್ನೋ ಮಾಹಿತಿಯಿದೆ.

ಒಟ್ನಲ್ಲಿ .. ಯಾರಾದ್ರು ಹೋಗ್ಲಿ, ನಮಗೆ ಎಂಟರ್​ಟ್ರೈನ್​ಮೆಂಟ್​ ಬೇಕಷ್ಟೆ ಅಂತಿದ್ದಾರೆ ಬಿಗ್​ಬಾಸ್​ನ ನಿಯತ್ತಿನ ವೀಕ್ಷಕರು. ಎನಿ ವೇ ಫೆಬ್ರವರಿ 28, ಸಂಜೆ 6ಗಂಟೆಯವರೆಗೆ ಕಾದ್ರೆ, ಬಿಗ್​ಬಾಸ್​​ ಶೋನ ಅಸಲಿ ಮಜವನ್ನ ನೀವು ಸವಿಯಬಹುದು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *