ಆ ಬೈಕ್ ಸದ್ದಿನ ಜೊತೆಗೆ ಅದರ ಬೆಲೆ ಕೂಡ ಸದ್ದು ಮಾಡ್ತಿದೆ..! ರಾಯಲ್ ಎನ್ಫೀಲ್ಡ್ ಬುಲೆಟ್ ಪ್ರಿಯರಿಗೆ ಶಾಕಿಂಗ್ ನ್ಯೂಸ್..!
ಆ ಬೈಕ್ ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚು, ಆ ಬೈಕ್ ನೋಡಿದ್ರೆ ಸಾಕು ಒಂದು ರೈಡ್ ಹೋಗ್ಬೇಕು ಅನ್ಸೋದ್ರಲ್ಲಿ ಎರಡು ಮಾತಿಲ್ಲ. ಆ ಬೈಕ್ ಹತ್ತಿ ಲಾಂಗ್ ರೈಡ್ ಹೊರಟ್ರೇ ಆ ಮಜಾನೇ ಬೇರೆ. ಆದ್ರೆ ಈಗ ಆ ಬೈಕ್ ವಿಶೇಷತೆಗಳು ಹೆಚ್ಚಾಗಿದ್ದು, ಬೆಲೆಯು ಕೂಡ ದುಬಾರಿಯಾಗಿದೆ. ಆ ಬೈಕ್ ಏಷ್ಟು ದುಬಾರಿ ಅಂತ ತಿಳಿಬೇಕಾ ಈ ಸ್ಟೋರಿ ನೋಡಿ.
ಒಮ್ಮೆ ರಾಯಲ್ ಎನ್ಫೀಲ್ಡ್ ಬೈಕ್ ಪಕ್ಕದಲ್ಲಿ ಹೋದ್ರೆ ಅದರ ಸದ್ದಿಗೆ ತಿರುಗಿ ನೋಡಿ ಏನ್ ಸದ್ದು ಅಂತ ಮನಸ್ಸಿನಲ್ಲೇ ಗೊಣಗೋದು ಕಾಮನ್, ಆದ್ರೀಗ ರಾಯಲ್ ಎನ್ಫೀಲ್ಡ್ ಬುಲೆಟ್ ಬೆಲೆ ಕೂಡ ಸದ್ದು ಮಾಡ್ತಿದೆ. ಇದರ ಬೆಲೆ ರಾಯಲ್ ಎನ್ಫೀಲ್ಡ್ ಬುಲೆಟ್ ಪ್ರಿಯರ ಎದೆಬಡಿತ ಹೆಚ್ಚಿಸುವ ಸುದ್ದಿಯಾಗಿದೆ. ಲೈಫ್ನಲ್ಲಿ ಒಂದು ಭಾರಿ ಈ ಬೈಕ್ನ ಖರೀದಿ ಮಾಡ್ಬೇಕು ಅನ್ನೋರಿಗೆ ಇದು ಶಾಕಿಂಗ್ ನ್ಯೂಸ್ ಆಗಿದೆ.
ರಾಯಲ್ ಎನ್ಫೀಲ್ಡ್ ಬುಲೆಟ್ ಬಿಎಸ್6 ಮಾದರಿಯ ಎನ್ಫೀಲ್ಡ್ ಬುಲೆಟ್ 350 ಬೈಕ್ನ ಬೆಲೆಯನ್ನು ಹೆಚ್ಚಿಸಲಾಗಿದೆ.ಬುಲೆಟ್ ಬೇಸಿಕ್ ಮಾದರಿಯ ಎಕ್ಸ್ ಶೋರೂಂ ಬೆಲೆ ಈಗ 1.30 ಲಕ್ಷಕ್ಕೆ ಏರಿಕೆಯಾಗಿದ್ದು, 350 ಸಿಸಿಯ ಎಲ್ಲ ಬುಲೆಟ್ ಬೈಕ್ ಬೆಲೆ ಕನಿಷ್ಠ 3500 ರೂ ಏರಿಕೆಯಾಗಿದೆ.ಬುಲೆಟ್ 350(ಸ್ಟ್ಯಾಂಡರ್ಡ್)- ಬೆಲೆ ₹1,30,228, ಆಗಿದ್ದು, ಈ ಹಿಂದಿನ ಬೆಲೆಗಿಂತ 3134 ₹ ಹೆಚ್ಚಳವಾಗಿದೆ. ಬುಲೆಟ್ 350 ಇಎಸ್ (ಇಲೆಕ್ಟ್ರಿಕ್ ಸ್ಟಾರ್ಟ್) ಬೆಲೆ ₹1,46,152 ಆಗಿದ್ದು, ಹಳೆಯ ಬೆಲೆಗಿಂತ ₹ 3447 ಹೆಚ್ಚಳವಾದಂತಾಗಿದೆ. ಚೆನ್ನೈ ಮೂಲದ ರಾಯಲ್ ಎನ್ಫೀಲ್ಡ್ ಕಂಪನಿ 1932 ರಲ್ಲಿ ಬುಲೆಟ್-350 ಬೈಕ್ ಗಳನ್ನು ಪರಿಚಯಿಸಿತು. ವಿಶ್ವದಲ್ಲಿ ಅತಿ ಹೆಚ್ಚು ವರ್ಷ ಬಳಕೆಯಲ್ಲಿರುವ ಬೈಕ್ ಮಾಡೆಲ್ ಇದಾಗಿದೆ. ಭಾರತದಲ್ಲಿ ಅತಿ ಪ್ರಸಿದ್ಧವಾದ ಹಾಗೂ ಇಲ್ಲಿನ ಜನ ಪ್ರೀತಿಯಿಂದ ಬಳಸಿದ ಬೈಕ್ ಅಂತ ಹೇಳಬಹುದು.