ರಾಜ್ಯದಲ್ಲಿ ಬಡವರಿಗೆ ಸಿಗುತ್ತೆ ಉಚಿತ ಮರಳು…! ಮರಳು ಸಮಸ್ಯೆ ನೀಗಿಸಲು ನಿರಾಣಿ ಹೊಸ ಪ್ಲಾನ್…!

ರಾಜ್ಯದಲ್ಲಿ ಉಂಟಾಗಿರೋ ಮರಳಿನ ಸಮಸ್ಯೆ ಬಗೆ ಹರಿಸಲು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್​ ನಿರಾಣಿ ಮುಂದಾಗಿದ್ದಾರೆ. ಅದರಲ್ಲೂ ಬಡವರಿಗೆ ಉಚಿತ ಮರಳು ನೀಡಲು ಸಚಿವರು ಚಿಂತನೆ ನಡೆಸಿದ್ದಾರೆ. ಫ್ರೀ ಸ್ಯಾಂಡ್​ ಪಾಲಿಸಿ ತರಲು ಚಿಂತನೆ ನಡೆದಿದೆ ಎಂದು ಕೊಪ್ಪಳದಲ್ಲಿ ಮುರುಗೇಶ್​ ನಿರಾಣಿ ಹೇಳಿದ್ದಾರೆ.

ಹೊಸ ಮರಳು ನೀತಿ ಸರಳೀಕರಣದ ಅಧ್ಯಯನ ಆಗ್ತಿದೆ. ರೈತರು, ಆಶ್ರಯ ಮನೆ, ಸಣ್ಣ ಮನೆ ನಿರ್ಮಾಣ ಮಾಡುವವರ ಸಮಸ್ಯೆ ಪರಿಹಾರಕ್ಕೆ ಸರ್ಕಾರ ಗಮನ ಹರಿಸಿದೆ. 10 ಲಕ್ಷ ರೂಪಾಯಿ ಒಳಗಿನ ಕಟ್ಟಡ ನಿರ್ಮಾಣಕ್ಕಾಗಿ ಒಂದು ಟನ್​​​​​ ಮರಳಿಗೆ 100 ರೂಪಾಯಿ ನಿಗದಿಗೊಳಿಸಲಾಗುವುದು.

ದೊಡ್ಡ ಕಟ್ಟಡ, ಗುತ್ತಿಗೆದಾರರು, ಸರ್ಕಾರಿ ಕಟ್ಟಡ, ಅಪಾರ್ಟ್​ಮೆಂಟ್​, ಬಂಗಲೆ ನಿರ್ಮಾಣ ಬೆಲೆ ನಿಗದಿ ಮಾಡಲಾಗುತ್ತೆ. ಸರ್ಕಾರಿ ಕಟ್ಟಡ ಕಟ್ಟುವವರು ಮೊದಲಿನಂತೆ ಅಂತಿಮ ಬಿಲ್​ ಪಾವತಿಸುವ ವೇಳೆ ಮರಳಿನ ಮೊತ್ತ ಪಾವತಿಸಬೇಕು ಎಂದು ನಿರಾಣಿ ಹೇಳಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *