GESCOM JOBS : ಜೆಸ್ಕಾಂನಲ್ಲಿ 205 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಗುಲ್ಬರ್ಗಾ: ಗುಲ್ಬರ್ಗಾ ವಿದ್ಯುತ್ ಪೂರೈಕೆ ಕಂಪನಿ (ಜೆಸ್ಕಾಂ)ನಲ್ಲಿ 205 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಫೆ. 27ರಂದು ಈ ಸಂಬಂಧ ನೋಟಿಫಿಕೇಶನ್ ಹೊರಡಿಸಲಾಗಿದೆ. ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಬಹುದು. ಇದು Online ಪ್ರಕ್ರಿಯೆ ಅಲ್ಲ. ಹಾಗಾಗಿ ಅಭ್ಯರ್ಥಿಗಳು ಸಾಮಾನ್ಯ ಲಕೋಟೆಯಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ.

ವಿವರಗಳು ಹೀಗಿವೆ:
1. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಮಾರ್ಚ್18, 2021.
2. ವಯೋಮಿತಿ: (ಫೆ.26, 2021ಕ್ಕೆ ಅನ್ವಯವಾಗುವಂತೆ)ಕನಿಷ್ಠ ವಯೋಮಿತಿ : 16 ವರ್ಷ, ಗರಿಷ್ಠ ವಯೋಮಿತಿ 25 ವರ್ಷ
3. ವಿದ್ಯಾರ್ಹತೆ : SSLC ಪಾಸ್ ಮತ್ತು ತತ್ಸಮಾನ ಐಟಿಐ ಸರ್ಟಿಫಿಕೇಟ್

ಇತರ ಅರ್ಹತೆಗಳು :
1. ಕನ್ನಡ (Kannada)ಓದಲು, ಬರೆಯಲು ಗೊತ್ತಿರಬೇಕು
2. ಕನ್ನಡಿಗರಿಗೆ ಮೊದಲ ಆದ್ಯತೆ
3. ದೃಢಕಾಯರಾಗಿರಬೇಕು

ಅರ್ಜಿಸಲ್ಲಿಸುವ ವಿಧಾನ:
ಆಸಕ್ತ ಆಭ್ಯರ್ಥಿಗಳು gescom.karnataka.gov.inಈ websiteಗೆ ವಿಸಿಟ್ ಕೊಟ್ಟು ಅರ್ಜಿ ಫಾರಂ download ಮಾಡಿ. ಪೂರ್ಣ ವಿವರ ಇರುವ ಅರ್ಜಿಯನ್ನು ಎಲ್ಲಾ ದಾಖಲೆಯೊಂದಿಗೆ “ಪ್ರಧಾನ ವ್ಯವಸ್ಥಾಪಕರು, (ಆ ಮತ್ತು ಮಾಸಂಅ), ನಿಗಮ ಕಚೇರಿ, ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ (ಜೆಸ್ಕಾಂ) ಕಲಬುರಗಿ” ಇವರಿಗೆ ಸಲ್ಲಿಸಬೇಕು. ಲಕೋಟೆ ಮೇಲೆ 2021-22ನೇ ಸಾಲಿನ ಶಿಶಿಕ್ಷು ಆಯ್ಕೆಗೆ ಅರ್ಜಿ ಎಂದು ಸ್ಪಷ್ಟವಾಗಿ ಬರೆದಿರಬೇಕು.

ಅರ್ಜಿಯೊಂದಿಗೆ ಲಗತ್ತಿಸಬೇಕಾದ ದಾಖಲೆಗಳು :
1. ಎಸ್ ಎಸ್ ಎಲ್ ಸಿ ಅಂಕಪಟ್ಟಿ
2. ವರ್ಗಾವಣೆ ಪ್ರಮಾಣಪತ್ರ
3. ಐಟಿಐ (ITI) ಪ್ರಮಾಣಪತ್ರ
4. ಜಾತಿ ಪ್ರಮಾಣಪತ್ರ (cast certificate)
5. ವೈದ್ಯಕೀಯ ಯೋಗ್ಯತಾ ಪತ್ರ
6. ಗಣ್ಯ ವ್ಯಕ್ತಿಗಳಿಂದ ಪಡೆದ ನಡತೆ ಪ್ರಮಾಣ ಪತ್ರ
6. ಎರಡು ಭಾವಚಿತ್ರ
7. ಸ್ವವಿಳಾಸ ಇರುವ 4X9 ಇಂಚು ಅಳತೆಯ ಒಂದು ಲಕೋಟೆ
ಎಲ್ಲಾ ದಾಖಲೆಗಳು ಗಜೆಟೆಡ್ ಅಧಿಕಾರಿಗಳಿಂದ ದೃಢೀಕರಿಸಲ್ಪಟ್ಟಿರಬೇಕು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *