ಸಿಲಿಕಾನ್ ಸಿಟಿಯ ಕಲಾವಿದನ ಕೈಯಲ್ಲಿ ಅರಳಿದೆ ರಾಮ ಮಂದಿರದ ಕಲಾಕೃತಿ

ರಾಮಮಂದಿರ ಶತಕೋಟಿ ಹಿಂದೂಗಳ ಕನಸು. ನೂರಾರು ವರ್ಷಗಳ ಹೋರಾಟದ ಪ್ರತಿಫಲ ರಾಮಮಂದಿರದ ಕನಸು ನನಸ್ಸಾಗ್ತಿದೆ. ಇಡೀ ದೇಶಕ್ಕೆ ರಾಮಮಂದಿರ ಹೇಗಿರಬಹುದು ಅನ್ನೋ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಈ ನಿಟ್ಟಿನಲ್ಲಿ ಆಯೋಧ್ಯೆಯಲ್ಲಿ ನಿರ್ಮಾಣಗೊಳ್ಳುವ ರಾಮಮಂದಿರದ ಅಕೃತಿಯನ್ನು ಸಿಲಿಕಾನ್ ಸಿಟಿಯ ಕಲಾವಿದನ ಕೈಯಲ್ಲಿ ಅರಳಿದೆ.

ಹೌದು ಏನಾದರೊಂದು ಸಾಧಿಸಬೇಕೆಂಬ ಛಲವೊಂದಿದ್ದರೆ ಅಸಾಧ್ಯವಾದದನ್ನು ಸಾಧ್ಯವನ್ನಾಗಿಸಬಹುದು ಅನ್ನೋದಕ್ಕೆ ಈ ಕಲಾವಿದನೇ ಸಾಕ್ಷಿ. ಮೂಲತಃ ಬೆಂಗಳೂರಿನ ಈ ಕಲಾವಿದನ ಹೆಸರು ಹರೀಶ್ ಕುಮಾರ್​ ಇವ್ರಿಗೆ ಕ್ರಾಫ್ಟ್​ ವರ್ಕ್​ ಮಾಡೋದೆಂದ್ರೆ ಬಲು ಇಷ್ಟ. ಇದಕ್ಕಾಗಿಯೇ ಲಾಕ್​ಡೌನ್ ಸಮಯವನ್ನು ವರ್ಥ್ಯ ಮಾಡಬಾರದೆಂದು ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರದ ಪರಿಕಲ್ಪನೆಯ ಮಾದರಿಯ ಕಲಾಕೃತಿಯನ್ನು ಅರಳಿಸಿದ್ದಾರೆ.

ಇದು ರಾಮ ಜನ್ಮ ಭೂಮಿಯ ಪವಿತ್ರ ಯಾತ್ರಕ್ಷೇತ್ರ. ಈ ಆಕೃತಿಯನ್ನು ನೋಡ್ತಿದ್ರೆ ರಾಮನ ಆ ಕ್ಷೇತ್ರವನ್ನು ಕಣ್ತುಂಬಿಕೊಂಡಷ್ಟು ಸಂತಸವಾಗುತ್ತೆ. ಇದು ಬರೊಬ್ಬರಿ 6 ಅಡಿ ಉದ್ದ ಹಾಗೂ 3ವರೆ ಅಡಿ ಅಗಲ, 2 ಅಡಿ ಎತ್ತರ ಹೊಂದಿದ್ದು, ಮರ ಹಾಗೂ ಪ್ಲೈವುಡ್​ ಬಳಸಿದ್ದಾರೆ. ಸುಮಾರು ಮೂರು ತಿಂಗಳಿನಿಂದ ಸತತ ಪ್ರಯತ್ನದಿಂದ ಅದ್ಬುತ ಕಲಾಕೃತಿಯೇ ಅನಾವರಣಗೊಂಡಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ..

 

ಒಟ್ಟಾರೆಯಾಗಿ ರಾಮ ಮಂದಿರದ ತೀರ್ಥ ಕ್ಷೇತ್ರದ ಕಲಾಕೃತಿ ಇವರ ಈ ಕೈ ಚಳಕಕ್ಕೆ ಸಾಟಿಯೇ ಇಲ್ಲ ಎಂಬಂತೆ ಅದ್ಬುತವಾಗಿ ಅನಾವರಣಗೊಂಡಿದಂತೂ ನಿಜ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *