ನಾಲ್ಕೇ ದಿನಕ್ಕೆ ಮತ್ತೊಂದು ಗ್ಯಾಸ್ ಶಾಕ್…! ಮತ್ತೆ 25 ರೂಪಾಯಿ ಹೆಚ್ಚಾಯ್ತು LPG ಸಿಲಿಂಡರ್ ಬೆಲೆ…!
ಪೆಟ್ರೋಲ್, ಡಿಸೇಲ್ ಸೇರಿದಂತೆ ದಿನ ನಿತ್ಯ ಬಳಕೆಯ ಎಲ್ಲಾ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚಳ ಕಾಣುತ್ತಿದ್ದು, ಅದರಂತೆ ಎಲ್‌ಪಿಜಿ ಗ್ಯಾಸ್ ಸಿಲೆಂಡರ್ ಬೆಲೆ ಕೂಡ ಇಂದು ಹೆಚ್ಚಳ ಕಂಡಿದೆ. ಫೆಬ್ರವರಿಯಲ್ಲಿ ಮೂರು ಬಾರಿ LPG ಬೆಲೆಯಲ್ಲಿ ಏರಿಕೆಯಾಗಿದೆ. ಎಲ್ ಪಿಜಿ ಸಿಲಿಂಡರ್ ಗಳ ಬೆಲೆ ಇಂದು ಮತ್ತೆ 25 ರೂಪಾಯಿ ಏರಿಕೆ ಕಂಡಿದೆ. ಮೂರು ದಿನಗಳ ಹಿಂದಷ್ಟೇ ಈ ಬೆಲೆ Rs 25 ರಷ್ಟು ಏರಿಕೆ ಯಾಗಿತ್ತು. ಇನ್ನೂ ಕಮರ್ಷಿಯಲ್ ಸಿಲಿಂಡರ್ ದರ 96 ರೂಪಾಯಿ ಏರಿಕೆಯಾಗಿ 1666 ರೂಪಾಯಿ ಏರಿಕೆಯಾಗಿದೆ..
ಈ ಬೆಲೆ ಏರಿಕೆಯಿಂದ ದೆಹಲಿಯಲ್ಲಿ 14.2 ಕೆಜಿ ತೂಕದ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ 800 ರೂ.ಗೆ ಏರಿಕೆಯಾಗಿದೆ. ಮಾರ್ಚ್ 1ರಿಂದ ಹೊಸ ದರ ಜಾರಿಗೆ ಬಂದಿದೆ. ಫೆಬ್ರವರಿ 25ರಂದು ಅಡುಗೆ ಅನಿಲದ ಬೆಲೆ 25 ರೂಪಾಯಿ ಏರಿಕೆ ಕಂಡಿದೆ. ಈ ಹಿಂದೆ ಫೆಬ್ರವರಿ 4 ಮತ್ತು 14ರಂದು ದರ ಏರಿಕೆ ಮಾಡಲಾಗಿತ್ತು. ಫೆಬ್ರವರಿ 25ರಂದು ಅಡುಗೆ ಅನಿಲದ ಬೆಲೆ 25 ರೂ.ಗೆ ಏರಿಕೆ ಯಾಗಿತ್ತು. ಇದು ಫೆಬ್ರವರಿ ತಿಂಗಳಲ್ಲಿ ಮೂರನೇ ಬಾರಿ ಏರಿಕೆಯಾಗಿದೆ.
ಇನ್ನೂ, ಈಗ ಬೆಂಗಳೂರಿನಲ್ಲಿ ಎಲ್‌ಪಿಜಿ ಸಿಲಿಂಡರ್ ದರ 822 ರೂ ಆಗಿದ್ದು, ಕೋಲ್ಕತ್ತಾದಲ್ಲಿ 845, ಚೆನ್ನೈ 835, ಹೈದ್ರಾಬಾದ್ 871 ರೂ. ಏರಿಕೆಯಾಗಿದೆ. ಫೆಬ್ರವರಿ 4 ರಂದು 25, ಫೆಬ್ರವರಿ 14ರಂದು 50 ರೂ. ಏರಿಕೆ ಆಗಿತ್ತು ಅದಾದ ಬಳಿಕ ಫೆಬ್ರವರಿ 25ರಂದು 25 ರೂಪಾಯಿಯಷ್ಟು ಏರಿಕೆಯಾಗಿತ್ತು.