ಸದ್ದಿಲ್ಲದೆ ಗ್ರಾಹಕರ ಜೇಬಿಗೆ ಕತ್ತರಿ ಹಾಕಿದ ಬೆಸ್ಕಾಂ..! ದುಬಾರಿ ದುನಿಯಾದಲ್ಲಿ ಗ್ರಾಹಕರಿಗೆ ಬೆಸ್ಕಾಂ ಬಿಗ್ ಶಾಕ್..!
ಕೊರೋನಾದಿಂದ ಆರ್ಥಿಕ ಸಂಕಷ್ಟದಲ್ಲಿವರಿಗೆ ದಿನಬಳಕೆ ವಸ್ತುಗಳ ಬೆಲೆ ಏರಿಕೆಯ ಬಿಸಿ ತಟ್ತಾ ಬರುತ್ತಿದೆ, ಬೆಲೆ ಏರಿಕೆಗೆ ತಲೆ ಮೇಲೆ ಕೈ ಹೋತ್ತು ಕುಳಿತವರಿಗೆ ಮತ್ತೆ ಬೆಸ್ಕಾಂ ಗ್ರಾಹಕರಿಗೆ ಕರೆಂಟ್ ಶಾಕ್ ನೀಡಲು ಮುಂದಾಗಿದೆ, ಅದರ ಬಗ್ಗೆ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
ದಿನದಿಂದ ದಿನಕ್ಕೆ ದುಬಾರಿಯಾಗ್ತಿರುವ ಸಿಟಿ ಜೀವನ, ಪ್ರತ್ರಿನಿತ್ಯ ಪೆಟ್ರೋಲ್, ಡಿಸೇಲ್, ಎಲ್ ಪಿಜಿ ಗ್ಯಾಸ್, ಹಣ್ಣು ತರಕಾರಿಗಳ ಬೆಲೆ ಹೆಚ್ಚಾಗ್ತಿರುವ ಶಾಕ್ ನಲ್ಲಿ ಇದ್ದವರಿಗೆ, ಬೆಸ್ಕಾಂ ಮತ್ತೆ ಕರೆಂಟ್ ಶಾಕ್ ನೀಡಲು ಮುಂದಾಗಿದೆ. ದುಬಾರಿ ದುನಿಯಾದಲ್ಲಿ ದುಡ್ಡಿದ್ದವರಿಗೆ ಮಾತ್ರ ಜೀವನ, ಅಂತ ತಲೆ ಮೇಲೆ ಕೈ ಹೋತ್ತು ಕುಳಿತವರಿಗೆ, ಸದ್ದಿಲ್ಲದೆ ಗ್ರಾಹಕರ ಜೇಬಿಗೆ ಕತ್ತರಿ ಹಾಕಲು ಬೆಸ್ಕಾಂ ಸಿದ್ದವಾಗಿದೆ.
ಹೌದು ದಿನನಿತ್ಯ ಬಳಕೆ ವಸ್ತುಗಳ ಮೇಲೆ ಮಾತ್ರ ಬೆಲೆ ಏರಿಕೆಯಾಗ್ತಿಲ್ಲ. ಫ್ಯಾನ್, ಫ್ರೀಡ್ಜ್, ವಾಷಿಂಗ್ ಮಷಿನ್, ಮೀಕ್ಸಿ ಸ್ವೀಚ್ ಹಾಕಿವ ಮುನ್ನ ಈ ಸ್ಟೋರಿ ಒಮ್ಮೆ ನೋಡಿ. ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ಹೆಚಳದ ನಂತರ ಬೆಸ್ಕಾಂ ನ ಕರೆಂಟ್ ಶಾಕ್ ಸಿದ್ಧವಾಗಿದೆ. ಎಪ್ರಿಲ್ ಅಂತ್ಯಕ್ಕೆ ಗ್ರಾಹಕರಿಗೆ ಕರೆಂಟ್ ಶಾಕ್ ನೀಡಲು KERC ಮುಂದೆ ಕರೆಂಟ್ ಬಿಲ್ ಹೆಚ್ಚಳಕ್ಕೆ ಪ್ರಸ್ತಾಪ ಇಟ್ಟ ಬೆಸ್ಕಾಂ. 1 ರೂ. 39 ಪೈ. ಕರೆಂಟ್ ಬಿಲ್ ಹೆಚ್ಚಳಕ್ಕೆ KERC ಮುಂದೆ ಬೆಸ್ಕಾಂ ಪ್ರಸ್ತಾಪ ಮಾಡಿದೆ.
ದುಬಾರಿ ದುನಿಯಾದ ಬೆಲೆ ಏರಿಕೆ ಮಧ್ಯ, ಕರೆಂಟ್ ಬಿಲ್ ಹೆಚ್ಚಳಕ್ಕೆ ಬೆಸ್ಕಾಂ ಪ್ರಸ್ತಾಪಿಸಿದ್ದು ಗ್ರಾಹಕರ ಕೆಂಗಣ್ಣಿಗೆ ಗುರಿಯಾಗುವುದರ ಜೊತೆ ಕರೆಂಟ್ ಶಾಕ್ ನೀಡಲು ಮುಂದಾಗಿದೆ.