ಬೆಂಗಳೂರು ಜನರಿಗೆ ಮತ್ತೊಂದು ಶಾಕ್..! ಆಟೋದಲ್ಲಿ ಓಡಾಡೋವ್ರಿಗೆ ಶೀಘ್ರವೇ ಮೀಟರ್ ದರ ಏರಿಕೆ ಬಿಸಿ ತಟ್ಟೋ ಸಾಧ್ಯತೆ…!
ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್ ದರ ಏರಿಕೆ ನಂತರ ಬೆಂಗಳೂರು ಜನರಿಗೆ ಮತ್ತೊಂದು ಶಾಕಿಂಗ್ ಸುದ್ದಿ. ಆಟೋದಲ್ಲಿ ಓಡಾಡೋವ್ರಿಗೆ ಶೀಘ್ರವೇ ಮೀಟರ್ ದರ ಏರಿಕೆ ಬಿಸಿ ತಟ್ಟೋ ಸಾಧ್ಯತೆ ಇದೆ. ಆಟೋ ಪ್ರಯಾಣ ದರ ಪರಿಷ್ಕರಣೆಗೆ ಚಾಲಕರ ಪಟ್ಟು ಹಿಡಿದಿದ್ದಾರೆ.
ಮೀಟರ್ ಮಿನಿಮಮ್ ದರ 25 ರೂ.ನಿಂದ 36 ರೂ.ಗೆ ಏರಿಸಲು ಮನವಿ ಸಲ್ಲಿಸಿದ್ದಾರೆ. 2013ರಲ್ಲಿ 1.8 ಕಿ.ಮೀಗೆ ಕನಿಷ್ಟ ದರ 20 ರಿಂದ 25 ರೂ ಹೆಚ್ಚಳವಾಗಿತ್ತು. ದರ ಪರಿಷ್ಕರಣೆಗೆ ಸಾರಿಗೆ ಸಚಿವ ಲಕ್ಷ್ಮಣ್ ಸವದಿಗೆ ಮನವಿ ಸಲ್ಲಿಕೆ ಮಾಡಿದ್ದು, ದರ ಏರಿಕೆಗೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಗ್ರೀನ್ ಸಿಗ್ನಲ್ ಕೊಡುತ್ತಾ ಕಾದು ನೋಡಬೇಕಾಗಿದೆ.