ಪ್ರಧಾನಿಗೆ ಲಸಿಕೆ ಕೊಟ್ಟ ನರ್ಸ್ ಪಿ. ನಿವೇದಾ ಹೇಳಿದ್ದೇನು ಗೊತ್ತಾ..?
ಕೊರೋನಾ ವ್ಯಾಕ್ಸಿನ್ ಪಡೆಯುವ ಮೂಲಕ ಪ್ರಧಾನಿ ಮೋದಿ ದೇಶದ ಜನರಲ್ಲಿ ಇದ್ದ ಅನುಮಾನ ದೂರ ಮಾಡಿದ್ದಾರೆ. ಬೆಳಗ್ಗೆ 6.25ಕ್ಕೆ ದೆಹಲಿಯ ಏಮ್ಸ್ಗೆ ತೆರಳಿದ ಮೋದಿ, ವ್ಯಾಕ್ಸಿನ್ ಪಡೆದರು. ಲಸಿಕೆಗಾಗಿ ಕ್ಯೂ ನಿಲ್ಲುವ ಜನರಿಗೆ ತೊಂದರೆ ಆಗಬಾರದು ಅನ್ನೋ ಕಾರಣಕ್ಕೆ ಬಹುಬೇಗ ಹೋಗಿ ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ.
ಕೇರಳದ ರೋಸಮ್ಮ ಅನಿಲ್ ಹಾಗೂ ಪುದುಚೆರಿಯ ಪಿ. ನಿವೇದಾ ಪ್ರಧಾನಿ ಮೋದಿಗೆ ಭಾರತ್ ಬಯೋಟೆಕ್ನ ಕೋವ್ಯಾಕ್ಸಿನ್ ಲಸಿಕೆಯ ಮೊದಲ ಡೋಸ್ ನೀಡಿದ್ದಾರೆ. ಅಸ್ಸಾಂನ ಗಮ್ಚಾ ಧಿರಿಸು ತೊಟ್ಟು ಏಮ್ಸ್ ಆಸ್ಪತ್ರೆಗೆ ಮೋದಿ ಬಂದಿದ್ದರು. ಸಾರ್ವಜನಿಕರಲ್ಲಿ ಕೊರೋನಾ ವ್ಯಾಕ್ಸಿನ್ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮೋದಿ ಈ ಮೂಲಕ ಮಾಡಿದ್ದಾರೆ.
ಇನ್ನು ಪ್ರಧಾನಿಗೆ ಲಸಿಕೆ ನೀಡಿದ ಸಿಸ್ಟರ್ ನಿವೇದಾ ರಿಯಾಕ್ಟ್ ಮಾಡಿ 28 ದಿನಗಳ ನಂತರ ಎರಡನೇ ಡೋಸ್ ಹಾಕ್ತೇವೆ. ಇಂಜೆಕ್ಷನ್ ಹಾಕಿದ್ರಾ..? ಹಾಕಿದ್ದು ಗೊತ್ತಾಗಲೇ ಇಲ್ಲ ಅಂತಾ ಪ್ರಧಾನಿ ಹೇಳಿದ್ರು ಅಂತಾ ನರ್ಸ್ ನಿವೇದಾ ಸಂತಸ ವ್ಯಕ್ತಪಡಿಸಿದರು. ಹಾಗೂ ನನ್ನನ್ನ ಲಸಿಕೆ ಕೇಂದ್ರಕ್ಕೆ ಡ್ಯೂಟಿಗೆ ಹಾಕಿದ್ದರು. ಇಂದು ಬೆಳಗ್ಗೆ ನನ್ನನ್ನ ಕರೆದು ಪ್ರಧಾನಿ ಮೋದಿ ಬರ್ತಿದ್ದಾರೆ ಎಂದು ಹೇಳಿದ್ರು. ನನಗೆ ಪ್ರಧಾನಿ ಮೋದಿಯನ್ನ ಭೇಟಿಯಾಗಿದ್ದಕ್ಕೆ ಹೆಮ್ಮೆ ಎನಿಸುತ್ತಿದೆ ಎಂದು ಹೇಳಿದ್ದಾರೆ.
ಇದೇ ವಿಚಾರವಾಗಿ ಮಾತನಾಡಿದ ಕೇರಳದ ನರ್ಸ್ ರೋಸಮ್ಮ, ನನಗೂ ಕೂಡ ಇದು ಆಶ್ಚರ್ಯಕರ ಸಂಗತಿಯಾಗಿದೆ. ಮೋದಿ ಸರ್ ಜೊತೆ ನಮಗೆ ಮಾತನಾಡಿದ್ದು ಖುಷಿ ಕೊಡ್ತು ಎಂದು ಹೇಳಿದ್ದಾರೆ.