ಹಂದಿ ಹಿಡಿಯುವ ತಂಡದಿಂದ ನಗರದ ವಿವಿಧ ಪ್ರದೇಶದಲ್ಲಿರುವ 945 ಬೀದಿ ಹಂದಿಗಳ ಸ್ಥಳಾಂತರ

ಕಲಬುರಗಿ,ಮಾರ್ಚ್.02.(ಕ.ವಾ)-ಕಲಬುರಗಿ ಮಹಾನಗರ ಪಾಲಿಕೆಯು ಹುಬ್ಬಳ್ಳಿ-ಧಾರವಾಡದ ಹಂದಿ ಹಿಡಿಯುವ ತಂಡದಿಂದ ಮಂಗಳವಾರದಂದು ಕಲಬುರಗಿ ನಗರದ ವಿವಿಧ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಒಟ್ಟು 945 ಬೀದಿ ಹಂದಿಗಳನ್ನು ಹಿಡಿದು ಸ್ಥಳಾಂತರಿಸಲಾಗಿದೆ ಎಂದು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರಾದ ಸ್ನೇಹಲ್ ಸುಧಾಕರ ಲೋಖಂಡೆ ಅವರು ತಿಳಿಸಿದ್ದಾರೆ.

ಹದಿನಾರು ಜನರನ್ನೊಳಗೊಂಡ ಹಂದಿ ಹಿಡಿಯುವ ತಂಡವು ನಗರದ ಕೇಂದ್ರ ಬಸ್ ನಿಲ್ದಾಣ, ಕಣ್ಣಿ ತರಕಾರಿ ಮಾರ್ಕೇಟ್, ಎಂ.ಎಸ್.ಕೆ. ಮೀಲ್, ಜಿಲಾನಾಬಾದ್, ಮಹ್ಮದಿ ಚೌಕ್, ಮೌಲಾಲಿ ಕಟ್ಟಾ, ಮಿಸ್ಬಾ ನಗರ, ಹಿರಾಪುರ ವೃತ್ತ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿರುವ ಬೀದಿ ಹಂದಿಗಳನ್ನು ಹಿಡಿದು ಸ್ಥಳಾಂತರಿಸಲಾಗಿದೆ.

ಅದೇ ರೀತಿ ಹಂದಿ ಹಿಡಿಯುವ ತಂಡವು ಕಲಬುರಗಿ ಜಿಮ್ಸ್ ಆಸ್ಪತೆ ಆವರಣಕ್ಕೆ ಭೇಟಿ ನೀಡಿದಾಗ ಹಂದಿಗಳು ಕಂಡು ಬಂದಿರುವುದಿಲ್ಲ. ಮುಂದಿನ ದಿನಗಳಲ್ಲಿಯುವ ಸಹ ಈ ತರಹದ ಕಾರ್ಯಕ್ರಮವನ್ನು ರೂಪಿಸಿ ನಗರದಿಂದ ಹಂದಿಗಳ ಹಾವಳಿಯನ್ನು ನಿಯಂತ್ರಸಲು ಕ್ರಮಕೈಗೊಳ್ಳಲಾಗುವುದು.

ಕಲಬುರಗಿ ಮಹಾನಗರ ಪಾಲಿಕೆಯ ಹಿರಿಯ ಪಶುವೈದ್ಯಾಧಿಕಾರಿ ಡಾ. ಮಹ್ಮದ್ ಸಖಾವತ ಹುಸೇನ, ಹಿರಿಯ ಪಶುವೈದ್ಯಕೀಯ ಪರೀಕ್ಷಕ ಹಣಮಂತ ಹಬ್ಶಿಯಾಳ, ನೈರ್ಮಲ್ಯ ನಿರೀಕ್ಷಕ ನಾಗರಾಜ್, ಬಸವರಾಜ ಪಾಣೆಗಾಂವ ಹಾಗೂ ಮತ್ತಿತರರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *