ಕನ್ನಡಿಗರ ಕೆಂಗಣ್ಣಿಗೆ ಗುರಿಯಾದ ಆರ್ಸಿಬಿ ತಂಡ..! ಶೂಗೆ ಕನ್ನಡ ಬಾವುಟ ಬಣ್ಣ ಬಳಸಿ ಅವಮಾನ..!
ಇನ್ನೇನೂ ಕೆಲವೇ ದಿನಗಳಲ್ಲಿ ಐಪಿಎಲ್ ಪ್ರಾರಂಭವಾಗಲಿದೆ. ಐಪಿಎಲ್ಗೆ ಎಲ್ಲ ತಂಡಗಳು ತಯಾರಿ ನಡೆಸಿದ್ದು, ಈ ಭಾರೀ ತಂಡಗಳು ಕಪ್ ಗೆಲ್ಲಲು ಫೀಲ್ಡ್ನಲ್ಲಿ ಫುಲ್ ಪ್ರಾಕ್ಟೀಸ್ ಮಾಡ್ತಿದ್ರೆ. ಎಲ್ಲರ ಅಚ್ಚು ಮೆಚ್ಚಿನ ತಂಡ ಆರ್ಸಿಬಿ ಈಗ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಹೌದು, ಐಪಿಎಲ್ ನಲ್ಲಿ ಆರ್ ಸಿಬಿ ಅಂದ್ರೆ ಆರ್ ಸಿಬಿಯೇ.. ಪಂದ್ಯ ಗೆಲ್ಲಲಿ, ಸೋಲಲಿ.. ಪ್ರಶಸ್ತಿ ಗೆಲ್ಲದಿದ್ರೂ ಪ್ರತಿ ವರ್ಷವೂ ಈ ಬಾರಿ ಕಪ್ ನಮ್ದೆ ಅಂತ ಬೀಗುತ್ತಿರುವ ಅಭಿಮಾನಿಗಳ ಸಂಖ್ಯೆಗೇನೂ ಕಮ್ಮಿ ಇಲ್ಲ. ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಆರ್ ಸಿಬಿ ತಂಡದ ಬಗ್ಗೆ ಅಭಿಮಾನಿಗಳು ಇಟ್ಟಿರುವ ಪ್ರೀತಿ ಅಷ್ಟಿಷ್ಟಲ್ಲ. ತಂಡದಲ್ಲಿ ಹೆಚ್ಚು ಕನ್ನಡಿಗರೂ ಇಲ್ಲದಿದ್ರೂ ಪರವಾಗಿಲ್ಲ. ಆರ್ ಸಿಬಿ ನಮ್ಮ ಗರಿಮೆ ಅನ್ನೋ ಮನೋಭಾವನೆಯನ್ನು ಹೊಂದಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು, ತನ್ನ ಆಟಗಾರರಿಗೆ ನೀಡಿರುವಂತ ಶೂ ಮೇಲಿನ ಬಣ್ಣ, ಈಗ ಕನ್ನಡಿಗರನ್ನ ಕೆಣಕುವಂತೆ ಮಾಡಿದೆ. ಆರ್ ಸಿ ಬಿ ಆಟಗಾರರಿಗೆ ನೀಡಿರುವಂತ ಶೂ ಮೇಲೆ ಕನ್ನಡ ಬಾವುಟ ಬಣ್ಣ ಬಳಸಲಾಗಿದೆ. ಈ ಮೂಲಕ ಕನ್ನಡ ಬಾವುಟಕ್ಕೆ ಅವಮಾನಿಸಲಾಗಿದೆ.
ಆರ್ ಸಿ ಬಿಯ ಶೂಗಳ ಪೋಟೋವನ್ನು ಟ್ವಿಟ್ಟರ್ ನಲ್ಲಿ ಕ್ರಿಕೆಟಿಗ ಕೊಹ್ಲಿ ಹಂಚಿಕೊಂಡಿದ್ದು, ಹಳದಿ ಮತ್ತು ಕೇಸರಿ ಮಿಶ್ರಿತ ಕನ್ನಡ ಬಾವುಟದ ಬಣ್ಣವನ್ನು ಬಳಕೆ ಮಾಡಲಾಗಿದೆ. ಇದರಿಂದಾಗಿ ಈಗ ಆರ್ ಸಿ ಬಿ ಶೂ ವಿವಾದಕ್ಕೆ ಗುರಿಯಾಗಿದ್ದು, ಕನ್ನಡಿಗರು ಕನ್ನಡ ಬಾವುಟದ ಬಣ್ಣವನ್ನು ಆರ್ ಸಿ ಬಿ ಶೂ ಬಣ್ಣದಲ್ಲಿ ಬಳಸಿಕೊಂಡಿದ್ದಕ್ಕೆ ಕಿಡಿಕಾರಿದ್ದಾರೆ.