ಗೋಹತ್ಯೆ ನಿಷೇಧ, ರಾಜ್ಯದಲ್ಲಿ ಗೋಶಾಲೆಗಳ ಕೊರತೆ; ಗೋವುಗಳು ತಬ್ಬಲಿಯಾಗದಿರಲಿ!

ಹೈಲೈಟ್ಸ್‌:

  • ಗಂಡು ಕರು, ವಯಸ್ಸಾದ ರಾಸುಗಳ ನಿರ್ವಹಣೆಗೆ ರೈತರು ಹೈರಾಣ
  • ಪ್ರತಿ ತಾಲೂಕಿನಲ್ಲಿ ಹೋಬಳಿ ಮಟ್ಟದಲ್ಲಿ ಗೋಶಾಲೆಗಳನ್ನು ಆರಂಭಿಸಲು ರೈತರ ಒತ್ತಾಯ
  • ಅಕ್ರಮ ಗೋ ಮಾರಾಟ, ಸಾಗಾಟಕ್ಕೆ ಲಗಾಮು; ಆದರೆ ಗೋಶಾಲೆಗಳ ಕೊರತೆ!
  • ಜಾನುವಾರುಗಳ ಅಕ್ರಮ ಸಾಗಾಟಕ್ಕೆ ಕಡಿವಾಣ, ತಪಾಸಣಾ ಸಿಬ್ಬಂದಿಗಳ ಕೊರತೆ

ವ್ಯಕ್ತವಾಗಿದೆ. ಆದರೆ ರೋಗಪೀಡಿತ ಮತ್ತು ಗಂಡು ಕರುಗಳ ಪೋಷಣೆ ಸವಾಲಾಗಿದೆ. ಜಾನುವಾರುಗಳ ಸಂಖ್ಯೆಗೆ ತಕ್ಕಂತೆ ಗೋ ಶಾಲೆಗಳಿಲ್ಲ. ಕೆಲ ಖಾಸಗಿ ಗೋ ಶಾಲೆಗಳು ಜಾನುವಾರುಗಳನ್ನು ತಂದು ಬಿಟ್ಟವರಿಂದಲೇ ಹಣ ಕೇಳುತ್ತಿವೆ. ಇದರಿಂದ ರೈತರು ಹೈರಾಣಾಗಿದ್ದಾರೆ. ಜಾನುವಾರುಗಳ ಅಕ್ರಮ ಸಾಗಾಟಕ್ಕೆ ಕಡಿವಾಣ ಬಿದ್ದಿದ್ದರೂ ತಪಾಸಣಾ ಸಿಬ್ಬಂದಿಗಳ ಕೊರತೆ ಇದ್ದೇ ಇದೆ. ಈ ಕಾಯಿದೆ ಜಾರಿಯಾದ ನಂತರ ಉಂಟಾಗಿರುವ ಪರಿಸ್ಥಿತಿಯತ್ತ ವಿಸ್ತೃತ ನೋಟ ಇಲ್ಲಿದೆ.

ಪೊಲೀಸರ ‘ಮಾಮೂಲಿ’ ಏರಿಕೆ
ಶಿವಮೊಗ್ಗ: ಗೋ ಹತ್ಯೆ ನಿಷೇಧ ಕಾಯಿದೆ ಜಾರಿಯಾದರೂ ಶಿವಮೊಗ್ಗ ಜಿಲ್ಲೆಯಲ್ಲಿ ಗೋವುಗಳ ವಧೆಗೇನೂ ನಿಯಂತ್ರಣ ಬಿದ್ದಿಲ್ಲ. ಬದಲಿಗೆ ಗೋ ಮಾಂಸ ದುಬಾರಿಯಾಗಿದೆ. ಇನ್ನು ಕಸಾಯಿಖಾನೆಗಳು ಪೊಲೀಸರಿಗೆ ಸಲ್ಲಿಸುವ ಮಾಮೂಲಿ ಸಹ ಹೆಚ್ಚಾಗಿದೆ. ವಯಸ್ಸಾದ ಗೋವುಗಳನ್ನು ಬಿಡಲು ಗೋ ಶಾಲೆಗಳೂ ಸಾಕಷ್ಟಿಲ್ಲ. ಜಿಲ್ಲೆಯಲ್ಲಿ ಕಡಿಯುವ ಉದ್ದೇಶದಿಂದಲೇ ಬಳಕೆಯಾಗುವಂತಹ ಗಂಡು ಕರುಗಳನ್ನು ಸಂತೆಗಳಲ್ಲಿ ಮಾರಾಟ ಮಾಡುವುದಿಲ್ಲ. ಬದಲಿಗೆ ಕೊಟ್ಟಿಗೆಯಿಂದಲೇ ಖರೀದಿಸಿ ಕಸಾಯಿಖಾನೆಗಳಿಗೆ ತೆಗೆದುಕೊಂಡು ಹೋಗಲಾಗುತ್ತಿದೆ.

ಸಾಗಾಟ, ದಾಳಿ ನಡೆದೇ ಇದೆ
ಚಿಕ್ಕಮಗಳೂರು: ಗೋಹತ್ಯೆ ನಿಷೇಧ ಕಾಯಿದೆ ಜಾರಿಯಾದ ಬಳಿಕ ಶೃಂಗೇರಿ ತಾಲೂಕಿನ ತನಿಕೋಡು ಗೇಟ್‌ ಮತ್ತು ಕೈಮನೆಯಲ್ಲಿ ನಡೆದ ಎರಡು ಪ್ರತ್ಯೇಕ ದಾಳಿಯಲ್ಲಿ ಅಕ್ರಮವಾಗಿ ಗೋವು ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ. ಈ ವೇಳೆ ದಾಳಿ ನಡೆಸಿದ್ದ ಹಿಂದೂ ಸಂಘಟನೆಗಳ ನಾಲ್ವರು ಕಾರ್ಯಕರ್ತರನ್ನೂ ಬಂಧಿಸಲಾಗಿತ್ತು. ಅವರು ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

ಗೋಶಾಲೆಗಳಿಗೆ ಪ್ರಸ್ತಾವನೆ ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ಕಾಯಿದೆ ಜಾರಿಯಾದ ಬಳಿಕ ಯಾವುದೇ ಅಹಿತಕರ ಘಟನೆಗಳು ಜರುಗಿಲ್ಲ. ಜಿಲ್ಲೆಯಲ್ಲಿ 6 ಖಾಸಗಿ ಗೋಶಾಲೆಗಳಿವೆ. ಕಾಯಿದೆ ಜಾರಿಗೆ ಬಂದ ನಂತರ ತಾಲೂಕಿಗೆ ಎರಡು ಗೋಶಾಲೆಗಳು ಬೇಕು ಎಂದು ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಇತ್ತೀಚೆಗೆ ಎರಡು ಪ್ರಕರಣಗಳಲ್ಲಿ ಗಾಯಗೊಂಡ ಹಸುಗಳನ್ನು ಮಾರಾಟಕ್ಕೆ ತಂದಾಗ ಅವುಗಳನ್ನು ಯಾರೂ ಖರೀದಿ ಮಾಡಲಿಲ್ಲ. ರಾಯಚೂರು ಜಿಲ್ಲೆಯೊಂದರಲ್ಲೇ ಹೊಸದಾಗಿ ಹತ್ತು ಕಡೆ ಗೋಶಾಲೆ ತೆರೆಯಲು ಸಿದ್ಧತೆ ನಡೆದಿದೆ. ಬಾಗಲಕೋಟೆಯಲ್ಲಿ ಗೋಶಾಲೆಗಳ ಕೊರತೆ ತೀವ್ರವಾಗಿದೆ.

ಸರಾಗವಾಗಿ ಮಾರಾಟ
ಯಾದಗಿರಿ: ಜಾನುವಾರುಗಳ ಮಾರಾಟ ಸರಾಗವಾಗಿ ನಡೆಯುತ್ತಿದೆ. ಆದರೆ ರಾಜ್ಯ ಸರಕಾರ ಇಲ್ಲಿಯವರೆಗೂ ಸ್ವಯಂಪ್ರೇರಿತವಾಗಿ ಗೋ ಶಾಲೆಗಳನ್ನು ಆರಂಭಿಸಿಲ್ಲ. ಶಹಾಪುರ ಮತ್ತು ಸುರಪುರದಲ್ಲಿ ಖಾಸಗಿ ಗೋಶಾಲೆಗಳು ಇವೆ. ಕೆಲವರು ಅಲ್ಲಿಯೇ ಬಿಟ್ಟು ಬರುತ್ತಿದ್ದಾರೆ. ಬಹುತೇಕರು ಮನೆಯಲ್ಲಿಯೇ ಸಾಕಾಣಿಕೆ ಮಾಡುತ್ತಿದ್ದಾರೆ. ಇದಲ್ಲದೆ ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಗೋ ಶಾಲೆಗಳನ್ನು ಆರಂಭಿಸಬೇಕು ಎಂಬುದು ಜನಾಭಿಪ್ರಾಯವಾಗಿದೆ.

ಖರೀದಿಗೆ ಹಿಂದೇಟು
ಬೀದರ್‌: ಗೋ ಕಾಯಿದೆ ಬಳಿಕ ಗೋ ಶಾಲೆಗಳು ಹೆಚ್ಚಾಗಲಿ ಎನ್ನುವ ಬೇಡಿಕೆ ಕೇಳಿ ಬಂದಿದೆ. ಮೊದಲಿನಂತೆ ಜಾನುವಾರುಗಳನ್ನು ಖರೀದಿಸಲು ಕಟುಕರು ಹಾಗೂ ರೈತರೂ ಹಿಂದೇಟು ಹಾಕುತ್ತಿರುವುದು ಕಂಡು ಬರುತ್ತಿದೆ. ರೈತರು ಜಾನುವಾರುಗಳನ್ನು ಎಂದಿನಂತೆ ಸಾಕುತ್ತಿದ್ದರಾದರೂ, ವಯಸ್ಸಾದ ಜಾನುವಾರುಗಳಿಗಾಗಿ ಗೋ ಶಾಲೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆರಂಭಿಸಬೇಕು.

ಹೋರಿ ಕರುಗಳಿಗೆ ನೋ ಎಂಟ್ರಿ!
ದಾವಣಗೆರೆ: ಕಳೆದ ಮೂರು ತಿಂಗಳಿಂದ ಸಂತೆ ಮಾರಾಟಕ್ಕೆ ಬರುವ ದನಗಳು ಕಡಿಮೆ ಆಗಿದೆ ಎನ್ನುತ್ತಾರೆ ಎಪಿಎಂಸಿ ಅಧಿಕಾರಿ ಗಂಗಾಧರಸ್ವಾಮಿ. ಹೈಬ್ರಿಡ್‌ ತಳಿಗಳ ಸಾಕಾಣಿಕೆಯಲ್ಲಿ ಮಾತ್ರ ಹೋರಿ ಕರುಗಳ ಸಮಸ್ಯೆಯಿದೆ. ಮುಂದೆ ಬೆಳೆದು ದೊಡ್ಡ ಹೋರಿಗಳಾದರೂ ಅವುಗಳು ಬೇಸಾಯಕ್ಕೆ ಬಳಸಿಕೊಳ್ಳಲು ಆಗುವುದಿಲ್ಲ. ಗೋಶಾಲೆಗಳಿದ್ದರೂ ಈ ಹೋರಿ ಕರುಗಳನ್ನು ಅವರು ಕೂಡ ಸೇರಿಸಿಕೊಳ್ಳುವುದಿಲ್ಲಎನ್ನುವ ದೂರು ರೈತರದ್ದಾಗಿದೆ. 10 ಸಾವಿರದಿಂದ 2 ಸಾವಿರಕ್ಕೆ ಚಿಕ್ಕಬಳ್ಳಾಪುರ: ಗೋ ಹತ್ಯೆ ನಿಷೇಧ ಕಾಯಿದೆ ನಂತರ ಹೈನೋದ್ಯಮ ಸೊರಗಿದೆ. ಏಕೆಂದರೆ ರೈತರಿಗೆ ಅನುತ್ಪಾದಕ ಎನಿಸಿಕೊಳ್ಳುವ ಗಂಡು ಕರು ಮತ್ತು ವಯಸ್ಸಾದ ಹಸು, ಎಮ್ಮೆಗಳನ್ನು ಮಾರುವುದೇ ಈಗ ದೊಡ್ಡ ಸಮಸ್ಯೆಯಾಗಿದೆ. ಕರು ಮತ್ತು ವಯಸ್ಸಾದ ದನಗಳ ಬೆಲೆ ಶೇ.80ರಷ್ಟು ಕಡಿಮೆಯಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *