ಶುಲ್ಕ ನೀಡದೆ ಜಲಮಂಡಳಿಗೆ ವಂಚನೆ, 64 ಸಾವಿರ ಮನೆಗಳ ಅಕ್ರಮ ನೀರಿನ ಸಂಪರ್ಕ ಕಡಿತ

ಹೈಲೈಟ್ಸ್‌:

  • 25 ಸಾವಿರ ಮನೆಗಳ ಸಂಪರ್ಕ ಸಕ್ರಮ ಗೊಳಿಸಿದ ಜಲಮಂಡಳಿ
  • ಅಕ್ರಮ ಸಂಪರ್ಕ ಪಡೆದವರ ಪತ್ತೆಕಾರ್ಯ ಚುರುಕು
  • ಜಲಮಂಡಳಿಗೆ ಆರ್ಥಿಕ ಹೊರೆ

ಬೆಂಗಳೂರು: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಅಕ್ರಮವಾಗಿ ಸಂಪರ್ಕ ಪಡೆದಿದ್ದ 64,568 ಸಂಪರ್ಕಗಳನ್ನು ಕಡಿತಗೊಳಿಸಲಾಗಿದ್ದು, ಈ ಪೈಕಿ 25 ಸಾವಿರ ಮನೆಗಳ ಸಂಪರ್ಕವನ್ನು ಸಕ್ರಮಗೊಳಿಸಲಾಗಿದೆ.

ನಗರದಲ್ಲಿ ಬಹಳಷ್ಟು ಮಂದಿ ಅಕ್ರಮವಾಗಿ ಜಲಮಂಡಳಿ ನೀರಿನ ಸಂಪರ್ಕ ಪಡೆದಿದ್ದರು. ಇವರು ಮಂಡಳಿಗೆ ಯಾವುದೇ ಶುಲ್ಕ ನೀಡದೆ ನೀರನ್ನು ಬಳಕೆ ಮಾಡಿ ಜಲಮಂಡಳಿಯನ್ನು ವಂಚಿಸುತ್ತಿದ್ದರು. ಇವರು ಬಳಸುವ ನೀರು ಮಂಡಳಿಯ ಲೆಕ್ಕಕ್ಕೆ ಸಿಗದೆ ಸೋರಿಕೆಯ ಲೆಕ್ಕಕ್ಕೆ ಸೇರ್ಪಡೆಗೊಳ್ಳುತ್ತಿತ್ತು. ಇದರಿಂದ ಮಂಡಳಿಗೆ ನೀರಿನ ನಷ್ಟವಲ್ಲದೆ ಆರ್ಥಿಕ ಹೊರೆಯಾಗಿತ್ತು. ಇದೀಗ ಈ ರೀತಿ ಅಕ್ರಮವಾಗಿ ಸಂಪರ್ಕ ಪಡೆದಿದ್ದವರಿಗೆ ಜಲಮಂಡಳಿ ಅಧಿಕಾರಿಗಳು ನೀರಿನ ಸಂಪರ್ಕ ಕಡಿತಗೊಳಿಸುವ ಮೂಲಕ ಬಿಸಿ ಮುಟ್ಟಿಸಿದ್ದಾರೆ.

ವಾಣಿಜ್ಯ ಕಟ್ಟಡಗಳಿಗಿಂತ ಮನೆಗಳೇ ಹೆಚ್ಚು
ವಾಣಿಜ್ಯ ಕಟ್ಟಡಗಳಿಗಿಂತ ಮನೆಗಳೇ ಹೆಚ್ಚು ಅಕ್ರಮ ಸಂಪರ್ಕ ಪಡೆದಿವೆ. ಪಶ್ಚಿಮ ವಲಯದಲ್ಲಿಹೆಚ್ಚು ಅಕ್ರಮ ಸಂಪರ್ಕ ಹೊಂದಿದ್ದು, ಈ ಭಾಗದಲ್ಲಿಕಂಡು ಬಂದಿರುವ 38 ಸಾವಿರ ಅಕ್ರಮ ಸಂಪರ್ಕಗಳನ್ನು ಕಡಿತಗೊಳಿಸಲಾಗಿದೆ. ಕಡಿತಗೊಳಿಸಿರುವ ಸಂಪರ್ಕಗಳಲ್ಲಿ 10 ಸಾವಿರ ಅನಧಿಕೃತ ಸಂಪರ್ಕಗಳನ್ನು ಸಧಿಕ್ರಮ ಮಾಡಲಾಗಿದೆ.

ಇನ್ನು ಪೂರ್ವ ವಲಯದಲ್ಲಿ 27 ಸಾವಿರ ಅಕ್ರಮ ಸಂಪರ್ಕ ಪಡೆದುಕೊಂಡಿರುವುದನ್ನು ಗುರುತಿಸಲಾಗಿದ್ದು, ಅವುಗಳನ್ನು ಕಡಿತಗೊಳಿಸಲಾಗಿದೆ. ಇಲ್ಲಿಅಕ್ರಮ ಸಂಪರ್ಕ ಪಡೆದಿರುವ ವಾಣಿಜ್ಯ ಕಟ್ಟಡಗಳು ಕಡಿಮೆಯಿವೆ. ಆದರೂ, ಸಂಪರ್ಕ ನಿಯಮ ಬಾಹಿರವಾಗಿರುವುದರಿಂದ 10 ಸಾವಿರ ರೂ. ದಂಡ ವಿಧಿಸಲಾಗುತ್ತಿದೆ.


ದಕ್ಷಿಣ ಮತ್ತು ಪೂರ್ವ (ಆಗ್ನೇಯ) ವಲಯ

ದಕ್ಷಿಣ ಮತ್ತು ಪೂರ್ವ ವಲಯದಲ್ಲಿ41,075 ಒಳಚರಂಡಿ (ಯುಜಿಡಿ) ಅಕ್ರಮ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಇನ್ನು ಕುಡಿಯುವ ನೀರಿನ 23,493 ಅಕ್ರಮ ಸಂಪರ್ಕಗಳನ್ನು ಕಡಿತಗೊಳಿಸಲಾಗಿದೆ.

ಜಲಮಂಡಳಿಯಿಂದ ಶೋಧ
ಜಲಮಂಡಳಿ ಅಧಿಕಾರಿಗಳು ಅಕ್ರಮವಾಗಿ ಸಂಪರ್ಕ ಪಡೆದಿರುವ ಬಗ್ಗೆ ಶೋಧ ನಡೆಸುತ್ತಿದ್ದಾರೆ. ಅಕ್ರಮವಾಗಿ ಸಂಪರ್ಕ ಪಡೆದಿರುವುದು ತಿಳಿದು ಬಂದರೆ ಕೂಡಲೇ ಸಂಪರ್ಕ ಕಡಿತಗೊಳಿಸಿ, ಜಲಮಂಡಳಿ ನಿಯಮಗಧಿಳ ಪ್ರಕಾರ ಸಕ್ರಮಗೊಧಿಳಿಧಿಸಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಜಲಮಂಡಳಿಯ ಅಧಿಕಾರಿಗಳು ತಿಳಿಸಿದರು.

ಕಾನೂನುಬಾಹಿರವಾಗಿ ನೀರು ಮತ್ತು ಒಳಚರಂಡಿ ಸಂಪರ್ಕ ಪಡೆದಿರುವವರಿಗೆ ಜಲಮಂಡಳಿ ಕಾಯಿದೆ ಅನುಸಾರ ದಂಡ ವಿಧಿಸಲಾಗುವುದು. ಜತೆಗೆ ಸಕ್ರಮ ಮಾಡಿಕೊಳ್ಳುವಂತೆಯೂ ಅರಿವು ಮೂಡಿಸಿ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.

ಗೃಹ ಬಳಕೆಗೆ 14 ದಿನಗಳೊಳಗೆ ಅರ್ಜಿ
ಗೃಹ ಬಳಕೆಗೆ ಉಪಯೋಗಿಸುವವರು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವೆಬ್‌ಸೈಟ್‌ನಲ್ಲಿಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. 100 ರೂ. ಪಾವತಿಸಿ ಅರ್ಜಿ ಸಲ್ಲಿಸಿದ 14 ದಿನಗಳೊಳಗೆ ವಿಳಾಸ ಹಾಗೂ ಮಂಡಳಿ ಕೇಳಿರುವ ಇನ್ನಿತರ ಕಾರ್ಯ ವಿಧಾನ ಪಾಲಿಸಬೇಕಾಗುತ್ತದೆ. ಎಲ್ಲದಾಖಲೆಗಳನ್ನು ಪರಿಶೀಲಿಸಿದ ಬಳಿಕ ನೀರಿನ ಸಂಪರ್ಕ ನೀಡಲಾಗುವುದು.

ಪ್ರೊರೇಟಾ ಶುಲ್ಕ ಪಾವತಿಸುವವರಿಗೆ 42 ದಿನಗಳ ಅವಕಾಶ
ಅಪಾರ್ಟ್‌ಮೆಂಟ್‌ಗಳು, ಸಣ್ಣ ಕೈಗಾರಿಕೆಗಳು ಹಾಗೂ ಪ್ರೊರೇಧಿಟಾ ಶುಲ್ಕ ಪಾವತಿಸುವವರು ನೀರಿನ ಸಂಪರ್ಕ ಪಡೆಯಲು 100 ರೂ. ಶುಲ್ಕ ಪಾವತಿಸಿ ಆನ್‌ಲೈನ್‌ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ 42 ದಿನಗಳಲ್ಲಿಮಂಡಳಿಯ ಎಲ್ಲ ಕಾರ್ಯ ವಿಧಾನಗಳನ್ನು ಪಾಲನೆ ಮಾಡಬೇಕು. ಬಳಿಕ ನೀರಿನ ಸಂಪರ್ಕ ಕಲ್ಪಿಸಲಾಗುವುದು.

ನಗರದಲ್ಲಿ ಎಲ್ಲೆಲ್ಲಿ ಅಕ್ರಮವಾಗಿ ನೀರಿನ ಸಂಪರ್ಕ ಪಡೆದಿದ್ದರೂ ಅದನ್ನು ಕಡಿತಗೊಳಿಸುವ ಕಾರ್ಯ ನಡೆಯುತ್ತಿದೆ. ಅಕ್ರಮವಾಗಿ ಸಂಪರ್ಕ ಪಡೆದು ಒಂದು ವರ್ಷದೊಳಗಿದ್ದರೆ ಅಂತಹವರಿಗೆ ಪ್ರೊರೇಟಾ ಶುಲ್ಕದ ಶೇ. 20 ರಷ್ಟನ್ನು ದಂಡ ವಿಧಿಸಲಾಗುವುದು. ಒಂದರಿಂದ ಎರಡು ವರ್ಷಗಳಾಗಿದ್ದರೆ ಅಂತಹವರಿಗೆ ಪ್ರೊರೇಟಾ ಶುಲ್ಕದ ಶೇ. 30 ರಷ್ಟು ಶುಲ್ಕವನ್ನು ವಿಧಿಸಲಾಗುವುದು. ಒಟ್ಟಾರೆ ಅಕ್ರಮವಾಗಿ ಸಂಪರ್ಕ ಪಡೆಯವುದನ್ನು ತಡೆಗಟ್ಟಿ ಪ್ರತಿಯೊಬ್ಬರೂ ಜಲಮಂಡಳಿ ನಿಯಮಾನುಸಾರವಾಗಿ ಸಂಪರ್ಕ ಸಧಿಕ್ರಧಿಮಧಿಗೊಧಿಳಿಧಿಸಿಧಿಕೊಧಿಳ್ಳಧಿಬೇಕು ಎಂಬುದು ಮಂಡಳಿಯ ಆಶಯವಾಗಿದೆ ಎಂದು ಮುಖ್ಯ ಎಂಜಿನಿಯರ್‌ ಬಿ.ಎಂ. ಸೋಮಶೇಖರ್‌ ವಿಕಗೆ ತಿಳಿಸಿದರು.

ಕೆಲವರು ಅಕ್ರಮವಾಗಿ ಜಲಮಂಡಳಿಯಿಂದ ನೀರಿನ ಸಂಪರ್ಕ ಪಡೆದಿದ್ದಾರೆ. ಹಿಂದಿನಿಂದಲೂ ಈ ರೀತಿ ಅಕ್ರಮವಾಗಿರುವ ಸಂಪರ್ಕಗಳನ್ನು ಕಡಿತಗೊಳಿಸಲಾಗುತ್ತಿದೆ. ಇದೀಗ ಅಕ್ರಮ ಸಂಪರ್ಕ ಪಡೆದವರ ಪತ್ತೆಕಾರ್ಯ ಚುರುಕುಗೊಂಡಿದೆ. ಈ ರೀತಿ ಕಾನೂನುಬಾಹಿರವಾಗಿ ಸಂಪರ್ಕ ಪಡೆದವರ ವಿರುದ್ಧ ಜಲಮಂಡಳಿ ಕಾಯಿದೆ ನಿಯಾಮನುಸಾರ ದಂಡ ವಿಧಿಸಲಾಗುವುದು.
-ಎನ್‌. ಜಯರಾಮ್‌, ಜಲಮಂಡಳಿ ಅಧ್ಯಕ್ಷ

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *