ದೇಶದ 16 ರಾಜ್ಯಗಳಲ್ಲಿ ಮತ್ತೆ ಲಾಕ್‍ಡೌನ್ ..! ರೂಪಾಂತರ ಕೊರೋನಾ ವೈರಸ್ ಮತ್ತೆ ದಾಳಿ..!

ಪ್ರಪಂಚದಲ್ಲೇ ಕೊರೋನ ಹಾವಳಿ ಕಡಿಮೆಯಾಗುತ್ತಿದೆ ಆದರೆ ಈ ದೇಶ ಕೋವಿಡ್-19 ಹಾವಳಿಗೆ ಮತ್ತೆ ಲಾಕ್‍ಡೌನ್​ನತ್ತ ಮುಖ ಮಾಡಿದೆ. ಆ ದೇಶ ಯಾವುದು ಅಂತ ತಿಳಿಬೇಕಾ ಈ ಸ್ಟೋರಿ ನೋಡಿ.


ಜರ್ಮನಿ ದೇಶದಲ್ಲಿ ಮತ್ತೆ ರೂಪಾಂತರ ಕೊರೋನಾ ವೈರಾಣು ದಾಳಿ ಮುಂದುವರೆಸಿದೆ. ಮುನ್ನೆಚ್ಚರಿಕೆಗಾಗಿ ದೇಶದ 16 ರಾಜ್ಯಗಳಲ್ಲಿ ಮತ್ತೆ ಲಾಕ್‍ಡೌನ್ ಘೋಷಣೆಯಾಗಿದೆ.ಈ ರಾಜ್ಯಗಳಲ್ಲಿ ವೈರಸ್ ಪೂರ್ಣ ಪ್ರಮಾಣದಲ್ಲಿ ಸ್ಥಗಿತಗೊಳಿಸುವ ಕಾರಣದಿಂದ ಮಾ.28 ರವರೆಗಿನ ಮೂರು ವಾರಗಳ ಕಾಲ ಲಾಕ್‍ಡೌನ್ ವಿಸ್ತರಿಸಿದ್ದಾರೆ. ಆದರೆ, ಸೋಂಕಿನ ಪ್ರಮಾಣ ಕಡಿಮೆ ಇರುವ ಪ್ರದೇಶಗಳಲ್ಲಿ ಮಳಿಗೆಗಳು ಮತ್ತು ಇತರ ಅಗತ್ಯ ವಸ್ತುಗಳ ವ್ಯವಹಾರಗಳ ವಹಿವಾಟು ನಡೆಸಲು ಯಾವುದೇ ನಿರ್ಬಂಧವನ್ನು ಹೇರಿಲ್ಲ ಎಂದು ಹೇಳಲಾಗಿದೆ.


ಆದರೆ, ಮುಂಜಾಗ್ರತ ಕ್ರಮಗಳಾದ ಮಾಸ್ಕ್ ಧರಿಸುವಿಕೆ, ಅಂತರ ಕಾಯ್ದುಕೊಳ್ಳುವಿಕೆ , ಸ್ಯಾನಿಟೈಸೇಷನ್ ಕ್ರಮಗಳ ಅನುಸರಿಸುವುದನ್ನು ಮುಂದುವರಿಸ ಲಾಗಿದೆ ಎಂದು ಜರ್ಮನಿ ಚಾನ್ಸೆಲರ್ ಆಯಂಜೆಲಾ ಮಾರ್ಕೆಲ್ ತಿಳಿಸಿದ್ದಾರೆ.
ಅವರು ದೇಶದ 16 ರಾಜ್ಯಗಳ ಗವರ್ನರ್​ಗಳ ಜೊತೆ ನಡೆಸಿದ ಮಾತುಕತೆಯಲ್ಲಿ ಹೆಚ್ಚು ಸಾಂಕ್ರಾಮಿಕ ಕೊರೋನಾ ವೈರಾಣು ರೂಪಾಂತರಗಳ ಪ್ರಭಾವದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅದನ್ನು ನಿಯಂತ್ರಣಗೊಳಿಸಿ ಸಮತೋಲನಕ್ಕೆ ತರುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು ಸಾಮಾನ್ಯ ಜೀವನಕ್ಕೆ ಮರಳಲು ಕೇಳಿಬರುತ್ತಿರುವ ಕೂಗುಗಳ ಬಗ್ಗೆ ಮಾರ್ಕೆಲ್ ಒಪ್ಪಿಕೊಂಡರು.ಅದಕ್ಕಾಗಿ ಈ ಕ್ರಮಗಳನ್ನು ಅನುಸರಿಸಲು ಸರ್ಕಾರ ಬದ್ಧವಾಗಿದೆ ಎಂದರು. ಕಳೆದ ವಾರ ಅನೇಕ ಪ್ರಾಥಮಿಕ ವಿದ್ಯಾರ್ಥಿಗಳು ಶಾಲೆಗೆ ಮರಳಿದರು. ಎಂದಿನಂತೆ ಇತರ ವಹಿವಾಟು, ಕಚೇರಿಗಳು, ಅಂಗಡಿ-ಮುಂಗಟ್ಟುಗಳು ನಡೆಯುತ್ತಿವೆ. ವರ್ಕ್ ಫ್ರಂ ಹೋಂ ಅಗತ್ಯವಿರುವ ಕಡೆ ಮುಂದುವರಿಸಲಾಗಿದೆ ಎಂದು ತಿಳಿದುಬಂದಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *