‘ಇನ್ನೂ CD ಇವೆ ಅನ್ನೋದು ಬ್ಲಾಕ್ ಮೇಲ್; ಏರೋಪ್ಲೇನ್ ಹತ್ತಿಸಿದ್ರೆ ಸತ್ಯ ಹೊರಬರುತ್ತೆ’ ಹೆಚ್ಡಿಕೆ ಕಿಡಿ
ಮೈಸೂರು: ರಮೇಶ್ ಜಾರಕಿಹೊಳಿ ವಿರುದ್ಧದ ಸಿಡಿ ಬಗ್ಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು ದೂರುದಾರ ದಿನೇಶ್ ಕಲ್ಲಳ್ಳಿ ವಿರುದ್ಧ ಹರಿಹಾಯ್ದಿದ್ದಾರೆ.
ರಮೇಶ್ ಜಾರಕಿಹೊಳಿ ಸರ್ಕಾರಿ ಕೆಲಸ ಕೊಡಿಸೋದಾಗಿ ನಂಬಿಸಿ ಮಹಿಳೆಯೊಬ್ಬರಿಗೆ ವಂಚನೆ ಮಾಡಿದ್ದಾರೆಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದೇ ವಿಚಾರವಾಗಿ ಸಿ.ಡಿಯೊಂದು ಬಿಡುಗಡೆಯಾಗಿ ತೀವ್ರ ಖಂಡನೆಗೆ ಗುರಿಯಾದ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು.
ಈ ಹಿನ್ನೆಲೆ ಇಂದು ಮೈಸೂರಿನಲ್ಲಿ ಮಾತನಾಡಿದ ಹೆಚ್ಡಿಕೆ, ಸಂತ್ರಸ್ತೆ ಬಗ್ಗೆ ಮಾತು ಆನಂತರ ಇರಲಿ. ಮೊದಲು ಸಿಡಿ ವಿಚಾರವಾಗಿ ಮಾತನಾಡುವವನನ್ನ ಬಂಧಿಸಲಿ ಎಂದರು. ಇನ್ನೂ ನಾಲ್ಕು, ಹತ್ತೊಂಭತ್ತು ಸಿಡಿ ಇವೆ ಅನ್ನೋದು ಬ್ಲಾಕ್ಮೇಲ್. ಯಾರದ್ದೇ ಖಾಸಗಿ ಬದುಕನ್ನ ಈ ರೀತಿ ತೋರಿಸೋದು ತಪ್ಪು ಅಂತಾರೆ. ಅಷ್ಟು ಸಿಡಿ ಇವೆ ಅಂತ ಹೇಳಬೇಕಾದ್ರೆ ಈತನೇ ಚಿತ್ರೀಕರಣ ಮಾಡಿಸಿದ್ನ? ಎಂದು ಪ್ರಶ್ನಿಸಿದ್ರು.
ಮೊದಲು ಬ್ಲಾಕ್ಮೇಲ್ ಮಾಡೋರನ್ನ ಬಂಧಿಸಿ ಏರೋಪ್ಲೇನ್ ಹತ್ತಿಸಿದ್ರೆ ಸತ್ಯ ಹೊರ ಬರುತ್ತೆ ಅಂತ ದೂರುದಾರ ದಿನೇಶ್ ಕಲ್ಲಳ್ಳಿ ವಿರುದ್ದ ಹೆಚ್.ಡಿ.ಕುಮಾರಸ್ವಾಮಿ ಕಿಡಿ ಕಾರಿದ್ರು.