ಕಲಬುರಗಿ : ಆಧ್ಯಾತ್ಮಿಕ ಚಿಂತನೆಯ ಅಳವಡಿಕೆಯಿಂದ ಮಾನಸಿಕ ನೆಮ್ಮದಿ : ಬಿ.ಆರ್.ಪಾಟೀಲ
ಕಲಬುರಗಿ : ಶರಣರ, ಸಂತರ, ಮಹಾತ್ಮರ ಅನುಭವದ ಮಾತುಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡರೆ ಮಾನಸಿಕ ನೆಮ್ಮದಿ ದೊರೆಯಲು ಸಾಧ್ಯವಿದೆಯೆಂದು ಮಾಜಿ ಶಾಸಕ ಬಿ.ಆರ್.ಪಾಟೀಲ ಹೇಳಿದರು.
ನಗರದ ಕೈಲಾಸ ನಗರದಲ್ಲಿರುವ ಶ್ರೀ ಶಿವಲಿಂಗೇಶ್ವರ ದೇವಸ್ಥಾನದಲ್ಲಿ ಮಹಾ ಶಿವಾರಾತ್ರಿ ನಿಮಿತ್ಯ 11 ದಿವಸಗಳ ಕಾಲ ಜರುಗುತ್ತಿರುವ ಹಾರಕೂಡ ಮಠದ ಲಿಂ.ಚನ್ನಬಸವ ಶಿವಯೋಗಿಗಳ ಪುರಾಣ ಕಾರ್ಯಕ್ರಮದ ನಾಲ್ಕನೇ ದಿನವಾದ ಬುಧವಾರ ಸಂಜೆ ಭಾಗವಹಿಸಿ ಮಾತನಾಡುತ್ತಿದ್ದ ಅವರು, ಇಂದಿನ ಆಧುನಿಕ ಒತ್ತಡದ ಜಂಜಾಟದ ಬದುಕಿನಲ್ಲಿ ನಿರಂತರವಾಗಿ ಬಿಡುವಿಲ್ಲದ ದುಡಿಮೆಯ ಜೀವನದಲ್ಲಿ ನಮ್ಮದಿ ಕಳೆದುಕೊಂಡಿರುವ ಮನಸಿಗೆ ಇಂತಹ ಸತ್ಸಂಗ ಕಾರ್ಯಕ್ರಮಗಳು ಅವಶ್ಯಕವಾಗಿವೆಯೆಂದರು.
ವೇದಮೂರ್ತಿ ಗಂಗಾಧರ ಶಾಸ್ತ್ರಿಗಳಿಂದ ಪುರಾಣ ಸೇವೆ, ಸೈದಪ್ಪ ಚೌಡಪೂರ, ರವಿ ಸ್ವಾಮಿ ಗೋಟೂರ ಅವರಿಂದ ಸಂಗೀತ ಸೇವೆ ಜರುಗಿತು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಶರಣಬಸಪ್ಪ ಭೂಸನೂರ, ಆರ್.ಜಿ.ಪಾಟೀಲ, ರಾಜಕುಮಾರ ಪಾಟೀಲ, ರವಿ ಬಂಗರಗಿ, ಗಿರೀಶ ದಂಡಿನ್, ಶಿವಕುಮಾರ ಪಾಟೀಲ, ಕೃಷ್ಣಪ್ಪ ಬೆಳಮಗಿ, ರೇವಣಸಿದ್ದಯ್ಯ ಮಠ, ರಾಜೇಂದ್ರ ಬಡಿಗೇರ, ಅಶೋಕ ಪಟ್ಟಣಶೆಟ್ಟಿ, ಬಸವರಾಜ ಕಲ್ಯಾಣಿ, ಸಂತೋಷ ರಾಂಪುರೆ, ರಘುವೀರಸಿಂಗ್, ಮಲ್ಲಿಕಾರ್ಜುನ ಭೈರಾಮಡಗಿ, ಶಿವಕುಮಾರ ಪಾಟೀಲ, ಪ್ರೊ.ಎಚ್.ಬಿ.ಪಾಟೀಲ ಸೇರಿದಂತೆ ಬಡಾವಣೆ ಹಾಗೂ ಸುತ್ತ-ಮುತ್ತಲಿನ ಬಡಾವಣೆಯ ಅನೇಕರು ಭಾಗವಹಿಸಿದ್ದರು.