ಬೆಂಗಳೂರು ಟು ಬೆಂಗಾಲ್: ಅರವಿಂದ ಲಿಂಬಾವಳಿಗೆ ಪಶ್ಚಿಮ ಬಂಗಾಳ ಚುನಾವಣೆ ಜವಾಬ್ದಾರಿ
ಬೆಂಗಳೂರು: ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರಿಗೆ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಹೊಣೆಗಾರಿಕೆ ನೀಡಲಾಗಿದೆ.
ರವೀಂದ್ರನಾಥ್ ಠಾಗೂರ್ ಅವರ ಜನ್ಮ ಭೂಮಿಯಲ್ಲಿ ನಡೆಯುವ ಚುನಾವಣಾ ಪ್ರಚಾರದಲ್ಲಿ ಲಿಂಬಾವಳಿ ಭಾಗವಹಿಸಲಿದ್ದಾರೆ. ಸಾಂಪ್ರಾದಾಯಿಕ ಎಡ ಪಂಥೀಯ ಮತದಾರರು ಪಶ್ಚಿಮ ಬಂಗಾಳದಲ್ಲಿ ಪ್ರಾಬಲ್ಯವಿದೆ. ತಮ್ಮ ಕ್ಷೇತ್ರದಲ್ಲಿ 20 ಸಾವಿರ ಬಂಗಾಳಿಗಳಿದ್ದು, ಅವರಲ್ಲಿ ಮಹದೇವಪುರ ಕ್ಷೇತ್ರದಲ್ಲಿ 5,600 ಮತದಾರರು ತಮ್ಮ ಮತ ನೋಂದಾಯಿಸಿದ್ದಾರೆ.
ತಮ್ಮ ಕ್ಷೇತ್ರದಲ್ಲಿರುವ ಬಂಗಾಳಿ ನಿವಾಸಿಗಳ ಜೊತೆ ಸಚಿವರು ಈಗಾಗಲೇ ಎರಡುಸಭೆ ನಡೆಸಿದ್ದಾರೆ. ಬಿಜೆಪಿಗೆ ಮತ ನೀಡುವಂತೆ ಹೇಳಿರುವ ಅವರು ಬಂಗಾಳದಲ್ಲಿರುವ ತಮ್ಮ ಸಂಬಂಧಿಕರು ಮತ್ತು ಸ್ನೇಹಿತರಿಗೂ ಬಿಜೆಪಿಗೆ ಮತ ಹಾಕುವಂತೆ ತಿಳಿಸಲು ಹೇಳಿದ್ದಾರೆ. ಚುನಾವಣೆಯ ನಿಪುಣ ತಂತ್ರಗಾರರೆಂದು ಪ್ರಸಿದ್ಧಿಯಾಗಿರುವ ಲಿಂಬಾವಳಿ ಶನಿವಾರ ನಡೆಯುವ ಸಭೆಯಲ್ಲಿ ಪಾಲ್ಗೊಂಡು ಜೆಪಿ ನಡ್ಡಾ ಮತ್ತು ಅಮಿತ್ ಶಾ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಲಿದ್ದಾರೆ.
ಕಲಬುರ್ಗಿ ಪ್ರವಾಸದಲ್ಲಿದ್ದ ಸಚಿವ ಅರವಿಂದ ಲಿಂಬಾವಳಿ ಅವರಿಗೆ ದೆಹಲಿಯಿಂದ ಅಮಿತ್ ಶಾ ಮತ್ತು ಜೆ.ಪಿ.ನಡ್ಡಾ ಅವರ ತುರ್ತು ಕರೆ ಬಂದ ಕಾರಣ ತಮ್ಮ ಪ್ರವಾಸ ಮೊಟಕುಗೊಳಿಸಿ ದೆಹಲಿಗೆ ತೆರಳಿದರು.
ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಅವರೂ ಈಗಾಗಲೇ ಚುನಾವಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಿಟಿ ರವಿ, ಅಶ್ವತ್ಥ ನಾರಾಣ ಸೇರಿದಂತೆ ಹಲವು ಸಚಿವರು ವಿವಿಧ ರಾಜ್ಯಗಳಲ್ಲಿ ನಡೆಯುವ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಪಾಲ್ಗೋಳ್ಳಲಿದ್ದಾರೆ.