ಜಾರಕಿಹೊಳಿ ಸಿಡಿ 5 ಕೋಟಿಗೆ ಡೀಲ್, ‌ ಕುಮಾರಸ್ವಾಮಿ ಹೊಸ ಬಾಂಬ್

ಮೈಸೂರು:ರಮೇಶ್‌ ಜಾರಕಿಹೊಳಿ ಅವರದ್ದೆನ್ನಲಾದ ರಾಸಲೀಲೆ ಸಿಡಿ 5 ಕೋಟಿ ರೂ.ಗಳಿಗೆ ಡೀಲ್‌ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೊಸ ಬಾಂಬ್‌ ಸಿಡಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ”ರಮೇಶ್‌ ಜಾರಕಿಹೊಳಿ ಅವರದ್ದೆನ್ನಲಾದ ಸಿಡಿ ತಕ್ಷಣಕ್ಕೆ ಹೊರ ಬಂದಿಲ್ಲ. ಸುಮಾರು ಮೂರು ತಿಂಗಳಿನಿಂದ ವ್ಯವಹಾರ ಕುದುರಿಸುತ್ತಿದ್ದ ಸಾಧ್ಯತೆ ಇದ್ದು, ನನ್ನ ಮಾಹಿತಿ ಪ್ರಕಾರ 5 ಕೋಟಿ ರೂ.ಗಳಿಗೆ ಡೀಲ್‌ ಆಗಿದೆ. ಇದರ ಹಿಂದೆ ಸಾಕಷ್ಟು ಪ್ರಭಾವಿಗಳಿದ್ದಾರೆ. ಈ ಹಿನ್ನೆಲೆಯಲ್ಲಿ ಸರಕಾರ ಉನ್ನತಮಟ್ಟದ ತನಿಖೆ ನಡೆಸಿ ಸತ್ಯಾಂಶವನ್ನು ಹೊರಗೆಳೆಯಬೇಕು,” ಎಂದು ಆಗ್ರಹಿಸಿದರು. ”ತನ್ನ ಬಳಿ ಹಲವು ಸಿಡಿ ಇವೆ ಎಂದು ಹೇಳುತ್ತಿದ್ದಾರೆ. ಇವುಗಳನ್ನು ಸರಕಾರವೇ ಪಡೆದು ಬಿಡುಗಡೆ ಮಾಡಲಿ. ಅಲ್ಲದೆ, ಮಾಜಿ ಮುಖ್ಯಮಂತ್ರಿಯೊಬ್ಬರ ಸಿಡಿಯೂ ಇದೆ ಎಂದು ಹೇಳಿಕೆ ನೀಡಿದ್ದಾರೆ.

ರಾಜ್ಯದಲ್ಲಿ ಹಲವು ಮಂದಿ ಮಾಜಿ ಮುಖ್ಯಮಂತ್ರಿ ಇದ್ದಾರೆ. ಅವರು ಯಾರು ಎನ್ನುವುದನ್ನು ಸ್ಪಷ್ಟಪಡಿಸಲಿ. ಇಲ್ಲದಿದ್ದರೆ ಹೋದಕಡೆಯೆಲ್ಲ ಮುಜುಗರಕ್ಕೆ ಒಳಗಾಗಬೇಕಿದೆ. ಜನ ಅನುಮಾನದಿಂದ ನೋಡುವಂತಾಗ ಬಾರದು. ಹಿಂದೆಯೂ ನನ್ನ ಹೆಸರು ಕೆಲವು ಪ್ರಕರಣಗಳಲ್ಲಿಜೋಡಿಸಲು ಪ್ರಯತ್ನಿಸಿ ದರು. ಆಗ ಸರಿಯಾಗಿ ಜಾಡಿಸಿದ್ದೇನೆ. ಇಂಥ ವಿಚಾರದಲ್ಲಿನನಗೆ ಯಾವುದೇ ಭಯ ಇಲ್ಲ. ಆದರೆ, ರಾಜಕಾರಣಿಗಳ ಸಿಡಿ ಎಂದು ಬ್ಲ್ಯಾಕ್‌ಮೇಲ್‌ ಮಾಡುವ ವರನ್ನು ಒದ್ದು ಒಳಗೆ ಹಾಕಿ ಏರೋಪ್ಲೇನ್‌ ಹತ್ತಿಸಬೇಕು. ಇಂತಹ ದಂಧೆಯನ್ನು ನಿಲ್ಲಿಸಬೇಕು,” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಕ್ರಮ ಚುನಾವಣೆ ನಿಲ್ಲಲಿ: ಒನ್‌ ನೇಷನ್‌ ಇನ್‌ ಎಲೆಕ್ಷನ್‌ ಕುರಿತು ಸದನದಲ್ಲಿನಡೆದ ಘಟನೆಗೆ ಪ್ರತಿಕ್ರಿಯೆ ನೀಡಿದ ಅವರು, ”ಮೊದಲು ಹಣದಿಂದ ಚುನಾವಣೆ ನಡೆಸುವುದನ್ನು ನಿಲ್ಲಿಸಲಿ. ಚುನಾವಣೆ ವ್ಯವಸ್ಥೆಯ ಲೋಪಗಳನ್ನು ಸರಿಪಡಿಸುವ ಕೆಲಸವನ್ನು ಮಾಡಬೇಕಿದೆ. ಹಣವಿದ್ದವರಿಗೆ ಮಾತ್ರ ಚುನಾವಣೆ ಎನ್ನುವ ಪರಿಸ್ಥಿತಿ ನಿಲ್ಲಬೇಕು. ನಂತರ ಉಳಿದ ವಿಚಾರಗಳ ಕುರಿತು ಚರ್ಚೆ ಮಾಡಬಹುದು. ಒನ್‌ ನೇಷನ್‌ ಒನ್‌ ಎಲೆಕ್ಷನ್‌ ವಿಚಾರದಲ್ಲಿಕಾಂಗ್ರೆಸ್‌ ಯೂ ಟರ್ನ್‌ ಹೊಡೆದಿದೆ. ಈ ವಿಚಾರದ ಚರ್ಚೆಯಲ್ಲಿ ಕಾಂಗ್ರೆಸ್‌ ಭಾಗವಹಿಸಿತ್ತು” ಎಂದು ಹೇಳಿದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *