ಬಳ್ಳಾರಿ, : ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕರಿಂದ ಚಾಲನೆ
ಬಳ್ಳಾರಿ, ಮಾ.07: ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ ಅವರು ಇಂದು ನಗರದ ವಾಲ್ಮೀಕಿ ಸರ್ಕಲ್ ನಿಂದ ಸಿರುಗುಪ್ಪ ರಸ್ತೆಯ ಕಾಲುವೆವರೆಗೆ ಡಿ.ಎಂ.ಎಫ್ ಅನುದಾನದಲ್ಲಿ ಅಂದಾಜು 2.75 ಕೋಟಿ ರೂಪಾಯಿ ವೆಚ್ಚದಲ್ಲಿ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಬುಡಾ ಅಧ್ಯಕ್ಷ ದಮ್ಮೂರು ಶೇಖರ್, ರಾಬಕೊ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ವೀರಶೇಖರ ರೆಡ್ಡಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾದ ಶ್ರೀನಿವಾಸ್ ಮೋತ್ಕರ್ ಮತ್ತು ಮುಖಂಡರುಗಳಾದ ಶ್ರೀ ಶ್ರವಣ್ ಕುಮಾರ್ ರೆಡ್ಡಿ, ಪ್ರವೀಣ್, ನಾಗಪ್ಪ, ಬಿಜೆಪಿ ರೈತ ಮೋರ್ಚಾದ ಸತ್ಯನಾರಾಯಣ, ಭಾಸ್ಕರ್, ಭೀಮಲಿಂಗ, ನಲ್ಲ ರೆಡ್ಡಿ, ಪರಂಧಾಮ ಹಾಗೂ ವಾರ್ಡಿನ ಪ್ರಮುಖ ಮುಖಂಡರುಗಳು ಮತ್ತು ಮಹಾನಗರ ಪಾಲಿಕೆ ಅಧಿಕಾರಿ ಖಾಜಾ ಮೋಹಿದೀನ್ ಮತ್ತಿತರರು ಉಪಸ್ಥಿತರಿದ್ದರು