ಮುದ್ದೇಬಿಹಾಳ : ಮೇ.28 ರಿಂದ ಗ್ರಾಮದೇವತೆ ಜಾತ್ರಾ ಮಹೋತ್ಸವ

ಮುದ್ದೇಬಿಹಾಳ;ಮಾ.7: ಮೇ 28 ರಿಂದ ಐದು ದಿನಗಳು ಜೂನ್ 1 ರವರಗೆ ಮುದ್ದೇಬಿಹಾಳ ಗ್ರಾಮದೇವತೆ ಜಾತ್ರಾಮಹೋತ್ಸವ ಮಾಡಲು ಶುಕ್ರವಾರ ಕುಂಬಾರ ಓಣಿ ಗ್ರಾಮದೇವತೆ ಮಂದಿರದಲ್ಲಿ ಮುದ್ದೇಬಿಹಾಳದ ಹಿರಿಯರು, ವ್ಯಾಪರಸ್ಥರು ಭಕ್ತರು ಮುದ್ದೇಬಿಹಾಳ ಪುರಸಭೆಯ ಅಧ್ಯಕ್ಷರಾದಿಯಾಗಿ ಸದಸ್ಯರ ಸಮ್ಮುಖದಲ್ಲಿ ಗ್ರಾಮ ದೇವತೆ ಜಾತ್ರೆಯ ಕುರಿತು ಸಭೆಯಲ್ಲಿ ತಿರ್ಮಾನಿಸಲಾಯಿತು.
ಕರೊನದ ಸಂಧರ್ಭದಲ್ಲಿ 2020 ಏಪ್ರಿಲ್_ ಮೇ ಮೂರು ವರ್ಷಕ್ಕೊಮ್ಮೆ ಆಗುವ ಗ್ರಾಮದೇವತೆ ಜಾತ್ರೆಯನ್ನು ಮಾಡದೆ ಗರ್ಭಗುಡಿಯಲ್ಲಿ ದೇವಿಗೆ ಸರಳವಾಗಿ ಪೂಜಾ ಕಂಕೈರ್ಯಮಾಡಿ ಬಿಡಲಾಗಿತ್ತು ಮುಂದೆ ಕರೋನ ತಹಬದಿಗೆ ಬಂದ ಮೇಲೆ ಮಾಡೋಣಂತ ಗ್ರಾಮದೇವತೆ ಜಾತ್ರ ಸಮೀತಿಯ ಅಧ್ಯಕ್ಷರಾಗಿದ್ದ ದಿವಗಂತ ಶೃಂಗಾರಗೌಡರು ಹೇಳಿದ್ದರು ನಂತರದ ದಿನಗಳಲ್ಲಿ ಕರೋನ ನಿಯಂತ್ರಣವಾಗಲು ವರ್ಷಗಳೇ ಹಿಡಿಯಿತು ,ಶೃಂಗಾರಗೌಡರು ಕಾಲವಾದರು ,ಗ್ರಾಮದೇವತೆ ಜಾತ್ರೆ ಎಂದು ಮಾಡಬೇಕು ಎಂಬ ಪ್ರಶ್ನೆ ಎಲ್ಲಾ ಮುದ್ದೇಬಿಹಾಳ ಭಕ್ತಾದಿಗಳಲ್ಲಿ ಇತ್ತು ಈ ಪ್ರಶ್ನೆ ಗೆ ಶುಕ್ರವಾರ ತರೆಬಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಪುರಸಭೆ ಸದಸ್ಯ ಕಾಮರಾಜ ಬಿರಾದಾರ ಕರೋನದ ನೆಪ ಮಾಡಿ ಜಾತ್ರೆಯನ್ನು ಮುಂದೂಡುವುದು ಸರಿಯಲ್ಲ , ಕರೋನದ ಸಂದರ್ಭದಲ್ಲಿ ರಾಜಕೀಯ ಕಾರ್ಯಕ್ರಮಗಳು ಹಾಗೂ ಬೇರಡೆ ಜಾತ್ರೆಗಳು ಮಾಡಿದ್ದಾರೆ ಹಾಗೆ ನಾವು ನಮ್ಮ ಊರಿನ ಗ್ರಾಮದೇವತೆ ಜಾತ್ರೆಯನ್ನು ಮಾಡೋಣ ಪ್ರತಿ ಮೂರು ವರ್ಷಕ್ಕೆ ನಡೆಯುವ ಜಾತ್ರೆ ನಿಲ್ಲಿಸುವುದು ಸರಿಯಲ್ಲ ಗ್ರಾಮದೇವತೆ ಕೃಪೆಯಿಂದ ಎಲ್ಲರಿಗೂ ಒಳಿತಾಗಬೇಕು ಎಂದರು.
ರಾಜೇಂದ್ರ ರಾಯಗೂಂಡ,ಅಶೋಕ ನಾಡಗೌಡ ಜಾತ್ರೆಯ ದಿನಾಂಕವನ್ನು ಓದಿ ಹೇಳಿದರು, ಮೇ 28 ಶುಕ್ರವರಾದಿಂದ ಜೂನ್ 1 ಮಂಗಳವಾರ ಐದು ದಿನಗಳಕಾಲ ಗ್ರಾಮ ದೇವತೆ ಜಾತ್ರಾಮಹೋತ್ಸವ ಆಚರಿಸಲಾಗುತ್ತದೆ ಮತ್ತು ಇನ್ನೊಂದು ವಾರದ ನಂತರದ ಸಭೆಯಲ್ಲಿ ಜಾತ್ರೆಯ ಸಮೀತಿ ರಚೆನೆ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ,ಉಪಾಧ್ಯಕ್ಷೆ ಶಹಜಾದಬಿ ಹುಣಚಗಿ, ಸದಸ್ಯರಾದ ಮಹಿಬೂಬ ಗೊಳಸಂಗಿ, ಅಲ್ಲಾಭಕ್ಷ ಢವಳಗಿ, ಶಿವಪ್ಪ ಶಿವಪುರ ಚನ್ನಪ್ಪ ಕಂಠಿ, ಭಾರತಿ ಪಾಟೀಲ್, ಪ್ರೀತಿ ದೇಗಿನಾಳ, ಸಂಗಮ್ಮ ದೇವರಳ್ಳಿ, ಬಸವರಾಜ ಮುರಾಳ,ಅಶೋಕ ವನಹಳ್ಳಿ, ಹಿರಿಯರಾದ ಮಹಾಂತಪ್ಪ ನಾವದಗಿ, ಬಸನಗೌಡ ಪಾಟೀಲ್, ದಾನಪ್ಪ ನಾಗಠಾಣ, ಕಾಮರಾಜ ಬಿರಾದಾರ, ದೇವಸ್ಥಾನದ ಅರ್ಚಕ ಗುಂಡುರಾವ ಬಡಿಗೇರ, ಸಂಗಣ್ಣ ಬಿರಾದಾರ, ಸಂಗಮೇಶ ನಾವದಗಿ,ಸುದೀರ ನಾವದಗಿ, ಶಿವರಾಜ ಬಿರಾದಾರ, ರಾವಸಾಬ ದೇಸಾಯಿ, ಜಗದೀಶ ಲಕ್ಷಟ್ಟಿ,ಪ್ರಭು ಕಡಿ,ರಾಜು ಕಲಬುರಗಿ, ಮಹೇಂದ್ರ ಓಸ್ವಾಲ್, ಹಾಗೂ ನಗರದ ಗಣ್ಯರು, ವರ್ತಕರು,ಗ್ರಾಮದೇವತೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *