ಸೆಕ್ಸ್ ಸಿಡಿಯಲ್ಲಿರುವ ಮಹಿಳೆಗಾಗಿ ಪೊಲೀಸರ ಭೇಟೆ: ಆಕೆಯ ಬಗ್ಗೆ ಮಾಹಿತಿ ನೀಡಲು ಜಾರಕಿಹೊಳಿ ನಿರಾಕರಣೆ
ಬೆಂಗಳೂರು: ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿ ಜೊತೆ ರಾಸಲೀಲೆಯಲ್ಲಿ ತೊಡಗಿದ್ದ ಮಹಿಳೆ ಬಗ್ಗೆ ಕಬ್ಬನ್ ಪಾರ್ಕ್ ಪೊಲೀಸರು ಶೋಧ ನಡೆಸಿದ್ದಾರೆ. ಮಹಿಳೆ ಬಗ್ಗೆ ವಿವರಣೆ ಕೇಳಲು ಪೊಲೀಸರು ರಮೇಶ್ ಜಾರಕಿಹೊಳಿಯನ್ನು ಭೇಟಿ ಮಾಡಿದ್ದಾರೆ, ಆದರೆ ಅವರು ಯಾವುದೇ ಮಾಹಿತಿ ನೀಡಲಿಲ್ಲ.
ಬಿಜೆಪಿ ನಾಯಕನ ಜೊತೆಗಿನ ದೂರವಾಣಿ ಕರೆಗಳು, ಕಾಲ್ ರೆಕಾರ್ಡ್ ಮುಂತಾದವುಗಳ ಆಧಾರದ ಮೇಲೆ, ಸೆಕ್ಸ್ ಟೇಪ್ ನಲ್ಲಿರುವ ಮಹಿಳೆ ಆರ್ ಟಿ ನಗರದಲ್ಲಿರುವ ಮಹಿಳೆಯರ ವಸತಿ ಗೃಹದಲ್ಲಿದ್ದಳು ಎಂದು ತಿಳಿದು ಬಂದಿದೆ.
2018 ರಲ್ಲಿ ಪಿಜಿಗೆ ಸೇರಿದ್ದ ಆಕೆ ರಾಜಾಜಿನಗರದ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುವುದಾಗಿ ಹೇಳಿದ್ದಳು, ಆದರೆ ಯಾವ ಕಂಪನಿ ಎಂದು ತಿಳಿಸಿರಲಿಲ್ಲ. ಸೋಮವಾರ ಸೆಕ್ಸ್ ವಿಡಿಯೋ ವೈರಲ್ ಆಗುವುದಕ್ಕೂ ಮೊದಲು ಆಕೆ ಪಿಜಿ ಖಾಲಿ ಮಾಡಿದ್ದಾಳೆ. ಆಕೆಯ ಇಬ್ಬರು ಸ್ನೇಹಿತೆಯರಿಗೂ ಕೂಡ ಅವಳ ಬಗ್ಗೆ ಮಾಹಿತಿಯಿಲ್ಲ, ಸೋಮವಾರ ಕೊನೆಯದಾಗಿ ಆಕೆಯನ್ನು ನೋಡಿದ್ದಾಗಿ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇನ್ನೂ ಮಹಿಳಾ ಹೋರಾಟಗಾರ್ತಿ ಕೆಎಚ್ ಇಂದಿರಾ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ, ದಿನೇಶ್ ಕಲ್ಲಹಳ್ಳಿ ಮತ್ತು ರಾಜಶೇಖರ್ ಮುಲಾಲಿ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.