ಪೊಗರು ಸಕ್ಸಸ್ ಬೆನ್ನಲ್ಲೇ ಕೂದಲಿಗೆ ಕತ್ತರಿ ಹಾಕಿದ ಧ್ರುವ..! ಹೊಸ ಲುಕ್ನಲ್ಲಿ ಬಹದ್ದೂರ್ ಹುಡುಗ ಮಿಂಚಿಂಗ್..!
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾ, ಇಂದಿಗೂ ಹೌಸ್ಫುಲ್ ಪ್ರದರ್ಶನ ಕಾಣ್ತಿದ್ದು, ಸಕ್ಸಸ್ ಸಂಭ್ರಮದಲ್ಲಿ ತೇಲಾಡ್ತಿದೆ. ಇದೇ ಖುಷಿಯಲ್ಲಿರೋ ಧ್ರುವ ಸರ್ಜಾ, ತನ್ನ ಪತ್ನಿ ಪ್ರೇರಣಾ ಜೊತೆ ಗೋವಾದಲ್ಲಿ ಕೆಲ ಸಮಯ ಕಳೆದಿದ್ದಾರೆ. ಅಲ್ಲಿಂದ ಡೈರೆಕ್ಟ್ ಆಗಿ ಬೆಂಗಳೂರಿಗೆ ಬಂದವರೇ, ತನ್ನ ಉದ್ದನೆಯ ಕೂದಲು ಹಾಗೂ ಗಡ್ಡಕ್ಕೆ ಕತ್ತರಿ ಹಾಕಿದ್ದಾರೆ. ಹಾಗಾದ್ರೆ ಯಾವುದಕ್ಕಾಗಿ ಬಹದ್ದೂರ್ ಹುಡುಗ ಹೊಸ ಲುಕ್ನಲ್ಲಿ ಮಿಂಚುತ್ತಿರೋದು..? ಗೊತ್ತಾ ಈ ಸ್ಟೋರಿ ಓದಿ..
ಸುಮಾರು ಮೂರ್ನಾಲ್ಕು ವರ್ಷಗಳಿಂದ ಪೊಗರು ಸಿನಿಮಾದಲ್ಲಿ ಬ್ಯುಸಿಯಾಗಿದ್ದ ಧ್ರುವ, ಉದ್ದ ಕೂದಲು ಮತ್ತು ಗಡ್ಡ ಬಿಟ್ಟ ಗೆಟಪ್ ನಲ್ಲಿ ಕಾಣಿಸಿಕೊಳ್ಳುತ್ತಿದ್ರು. ಪೊಗರು ಶೂಟಿಂಗ್ ಮುಗಿದ ನಂತ್ರ ಉದ್ದನೆಯ ಗಡ್ಡ ಹಾಗೂ ಕೂದಲು ಕತ್ತರಿಸಿಕೊಂಡಿದ್ರು. ಈಗ ಪೊಗರು ಸಕ್ಸಸ್ ಬೆನ್ನಲೇ ಮತ್ತಷ್ಟು ಕೂದಲು ಹಾಗೂ ಗಡ್ಡವನ್ನ ಕತ್ತರಿಸುವ ಮೂಲಕ ಹೊಸ ಲುಕ್ನಲ್ಲಿ ಮಿಂಚುತ್ತಿದ್ದಾರೆ. ಇನ್ನು ಹ್ಯಾಂಡ್ಸಮ್ ಆಗಿ ಕಂಗೋಳಿಸುತ್ತಿರೋ ಧ್ರುವ, ಇತ್ತೀಚೆಗೆ ಅಭಿಮಾನಿಗಳ ಜೊತೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ಕೊಟ್ಟು, ಆಶಿರ್ವಾದ ಪಡೆದುಕೊಂಡಿದ್ದಾರೆ.
ಸದ್ಯ ಬಣ್ಣದ ಲೋಕದಲ್ಲಿ ಪೊಗರು ಪೊಗರಿಸಂ ಜೋರಾಗಿ ಕೇಳಿಬರ್ತಿದೆ. ಇದರ ಬೆನ್ನಲ್ಲೇ ಧ್ರುವ ಸರ್ಜಾ ಐದನೇ ಸಿನಿಮಾ ‘ದುಬಾರಿ’ಗೆ ಸಾಕಷ್ಟು ತಯಾರಿ ಮಾಡಿಕೊಳ್ತಿದ್ದಾರೆ. ಈಗಾಗಲೇ ದುಬಾರಿ ಸಿನಿಮಾದ ಪ್ರಿ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಕೆಲ ಮೂಲಗಳ ಪ್ರಕಾರ ಏಪ್ರಿಲ್ನಲ್ಲಿ ದುಬಾರಿ ಸಿನಿಮಾ ಸೆಟ್ಟೇರಲಿದೆ.