ಕೃಷಿ ವಿವಿಗಳಲ್ಲಿ ರೈತರ ಮಕ್ಕಳಿಗೆ ಇದ್ದ ಮೀಸಲಾತಿ ಶೇ.40ರಿಂದ ಶೇ.50ಕ್ಕೆ ಏರಿಕೆ…!
ಇದುವರೆಗೆ ರೈತರ ಮಕ್ಕಳಿಗಾಗಿ ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ಪದವಿ ಪಡೆಯಲು ಸೀಟುಗಳ ಆಯ್ಕೆಯಲ್ಲಿ ಶೇ.40ರಷ್ಟು ಮಾತ್ರವೇ ರೈತರ ಮಕ್ಕಳಿಗೆ ಸೀಟುಗಳನ್ನು ಮೀಸಲಿಟ್ಟು ನೀಡಲಾಗುತ್ತಿತ್ತು. ಇಂತಹ ಸೀಟುಗಳನ್ನು ಶೇ.40ರಿಂದ ಶೇ.50ಕ್ಕೆ ಹೆಚ್ಚಳ ಮಾಡಲಾಗುತ್ತಿರುವುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಘೋಷಿಸಿದರು.
ಇಂದು ಬಜೆಟ್ ಮಂಡನೆ ಮಾಡುತ್ತಾ ಮಾತನಾಡಿದಂತ ಅವರು, ರಾಜ್ಯದಲ್ಲಿನ ಕೃಷಿ ವಿಶ್ವ ವಿದ್ಯಾಲಯದಲ್ಲಿ ರೈತರ ಮಕ್ಕಳಿಗಾಗಿ ನೀಡಲಾಗುತ್ತಿದ್ದಂತ ಕೃಷಿ ವಿಶ್ವವಿದ್ಯಾಲಯಗಳ ಸೀಟುಗಳ ಆಯ್ಕೆಯ ಸಂಖ್ಯೆ ಶೇ.40ರಿಂದ ಶೇ.50ರಷ್ಟು ಮೀಸಲಿಗೆ ಹೆಚ್ಚಳ ಮಾಡಲಾಗುತ್ತಿದೆ. ಇದರಿಂದ ರಾಜ್ಯದ ರೈತರ ಮಕ್ಕಳು ಕೃಷಿ ಪದವಿ ವ್ಯಾಸಂಗಕ್ಕೆ ಅನುಕೂಲ ಮಾಡಲಾಗುತ್ತದೆ ಎಂಬುದಾಗಿ ಘೋಷಿಸಿದರು.
ಹೊಸ ಹೈಬ್ರೀಡ್ ಬೀಜ ನೀತಿ ಯೋಜನೆ, ಅಡಿಕೆ ಬೆಳೆಗಾರರಿಗೆ ಪರ್ಯಾಯ ಬೆಳೆ ಪ್ರೋತ್ಸಾಹಕ್ಕೆ 25 ಕೋಟಿ ರೂ. ಕರ್ನಾಟಕ ದ್ರಾಕ್ಷಾ ರಸ ಮಂಡಳಿಯನ್ನು, ಕರ್ನಾಟಕ ದ್ರಾಕ್ಷಿ ಮತ್ತು ದ್ರಾಕ್ಷಾ ರಸ ಮಂಡಳಿಯನ್ನಾಗಿ ಪುನರ್ರಚನೆ ಮಾಡುವುದು.
ಓಕಳಿಪುರಂನಲ್ಲಿ 150 ಕೋಟಿ ರೂಪಾಯಿ ವೆಚ್ದ ರೇಷ್ಮೇ ಭವನ, ರಾಮನಗರದಲ್ಲಿ ಹೈಟೆಕ್ ರೇಷ್ಮೇ ಗೂಡು ಮಾರುಕಟ್ಟೆ ನಿರ್ಮಾಣ, ಪ್ರತಿಯೊಂದು ಜಿಲ್ಲೆಗೊಂದರಂತೆ ಗೋಶಾಲೆ ರಚನೆ, ಬೆಂಗಳೂರಿನ ಹೆಸರಘಟ್ಟದಲ್ಲಿ ದೇಶಿಯ ಜಾನುವಾರುಗಳ ಥೀಮ್ ಪಾರ್ಕ್ ಸ್ಥಾಪನೆ ಮಾಡಲಾಗುವುದು, ಕೊಪ್ಪಳದಲ್ಲಿ ನಾರಿ ಸುವರ್ಣ ಕುರಿ ತಳಿಯ ಸಂವರ್ಧನಾ ಕೇಂದ್ರ ಸ್ಥಾಪನೆ ಆಕಸ್ಮಿಕ ಮರಣ ಹೊಂದುವ ಕುರಿ, ಮೇಕೆಗಳ ಪರಿಹಾರ ಧನ ಕಾರ್ಯಕ್ರಮ ಮುಂದುವರಿಕೆ, ಶಿವಮೊಗ್ಗದ ಪಶು ವೈದ್ಯಕೀಯ ಕಾಲೇಜಿನಲ್ಲಿ ಸಂಶೋಧನಾ ಕೇಂದ್ರ ಸ್ಥಾಪನೆ ಮಾಡಲಾಗುವುದು, ಮೀನುಗಾರರ ಯಾಂತ್ರೀಕೃತ ದೋಣಿಗಳಿಗೆ ಟ್ಯಾಕ್ಸ್ ಫ್ರೀ ಡಿಸೇಲ್ ನೀಡಲಾಗುವುದು ಎಂದು ಮಂಡಿಸಿದ್ದಾರೆ