Ramesh Jarkiholi: ನಾಳೆ ಸುದ್ದಿಗೋಷ್ಠಿ ಕರೆದ ರಮೇಶ್ ಜಾರಕಿಹೊಳಿ; ಸಿಡಿ ಪ್ರಕರಣ ಬಹಿರಂಗ ಸಾಧ್ಯತೆ
ನಾಳೆ ತಮ್ಮ ಸದಾಶಿವನಗರದ ಮನೆಯಲ್ಲಿ ಸುದ್ದಿಗೋಷ್ಠಿಯನ್ನು ಕರೆದಿದ್ದು, ಈ ಸಿಡಿ ಪ್ರಕರಣ ಬಹಿರಂಗಕ್ಕೆ ಕಾರಣ ಯಾರು? ಎಂಬ ಬಗ್ಗೆ ಮಾತನಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಬೆಳವಣಿಗೆಗಳ ಬೆನ್ನಲ್ಲೇ ಇದೀಗ ಖುದ್ದು ರಮೇಶ್ ಜಾರಕಿಹೊಳಿ ಈ ಸಿಡಿ ಪ್ರಕರಣ ಸಂಬಂಧ ಮಾತನಾಡಲು ಸುದ್ಧಿಗೋಷ್ಟಿ ನಡೆಸಲು ಮುಂದಾಗಿದ್ದಾರೆ. ಮಾರ್ಚ್ 9ರ ಅಂದರೆ ನಾಳೆ ಬೆಳಗ್ಗೆ 10. 30ಕ್ಕೆ ಅವರು ಈ ಪ್ರಕರಣ ಸಂಬಂಧ ಮಾತನಾಡುವ ಸಾಧ್ಯತೆ ಇದೆ. ನಾಳೆ ತಮ್ಮ ಸದಾಶಿವನಗರದ ಮನೆಯಲ್ಲಿ ಸುದ್ದಿಗೋಷ್ಠಿಯನ್ನು ಕರೆದಿದ್ದು, ಈ ಸಿಡಿ ಪ್ರಕರಣ ಬಹಿರಂಗಕ್ಕೆ ಕಾರಣ ಯಾರು? ಎಂಬ ಬಗ್ಗೆ ಮಾತನಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ರಮೇಶ್ ಜಾರಕಿಹೊಳಿ ಪ್ರಕರಣದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೇರಿದಂತೆ ಬಿಜೆಪಿ ಸಚಿವರು, ನಾಯಕರು ಮೌನ ತಾಳಿದ್ದು, ಇದುವರೆಗೂ ಯಾರು ಈ ಪ್ರಕರಣ ಕುರಿತು ತುಟಿ ಬಿಚ್ಚಿಲ್ಲ. ಸರ್ಕಾರಕ್ಕೆ ಸಾಕಷ್ಟು ಮುಜುಗರ ಉಂಟು ಮಾಡಿದ್ದ ಈ ಪ್ರಕರಣವನ್ನು ಕಾಂಗ್ರೆಸ್ ಸದಸ್ಯರು ಮಾತ್ರ ಅಸ್ತ್ರ ಮಾಡಿಕೊಂಡು ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು.