Jio ಗ್ರಾಹಕರಿಗೆ ಗುಡ್ ನ್ಯೂಸ್: ರಿಲೀಸ್ ಆಯ್ತು ಹೊಸ ಡೇಟಾ ಪ್ಲಾನ್..!

ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಹೊಸದಾಗಿ ಕೆಲ ಡೇಟಾ ಪ್ಲಾನ್​ಗಳನ್ನ ಪರಿಚಯಿಸಿದೆ. ಈ ಹೊಸ ಪ್ಲಾನ್​ಗಳು 22 ರೂಪಾಯಿಯಿಂದ ಆರಂಭವಾಗಿ 152 ರೂಪಾಯಿಗಳವರೆಗೂ ಇದೆ. ಜಿಯೋದ ಈ ಹೊಸ ಪ್ಲಾನ್​ಗಳಿಂದ ಗ್ರಾಹಕರಿಗೆ ಡೇಟಾ ಲಾಭ ಸಿಗಲಿದೆ.

1.₹ 22 ಜಿಯೋ ಪ್ಲಾನ್​​ : 22 ರೂಪಾಯಿಯ ಈ ಹೊಸ ಪ್ಲಾನ್​​ನಲ್ಲಿ ಜಿಯೋ(Jio) ಗ್ರಾಹಕರಿಗೆ 4ಜಿ ಹೈ ಸ್ಪೀಡ್​​ 2 ಜಿಬಿ ಇಂಟರ್ನೆಟ್​ ಸೌಕರ್ಯ ನೀಡಲಿದೆ. ಇದರ ವ್ಯಾಲಿಡಿಟಿ 28 ದಿನಗಳು. ಡೇಟಾ ಮಿತಿ ಮುಗಿದ ಬಳಿಕ ಇಂಟರ್ನೆಟ್​ ಸ್ಪೀಡ್​ 645 ಕೆಬಿಪಿಎಸ್​ಗೆ ಇಳಿಯಲಿದೆ.

2. ₹ 52 ಜಿಯೋ ಪ್ಲಾನ್​ : ಈ ಡೇಟಾ ಪ್ಯಾಕ್​ನ ಬೆಲೆ 52 ರೂಪಾಯಿ ಆಗಿದ್ದು ಇದರಲ್ಲಿ ಗ್ರಾಹಕರು(Customer) 6 ಜಿಬಿ 4ಜಿ ಹೈಸ್ಪೀಟ್​ ಇಂಟರ್ನೆಟ್​ ಡೇಟಾ ಪಡೆಯಲಿದ್ದಾರೆ. ಡೇಟಾ ಮಿತಿ ಮುಗಿಯುತ್ತಿದ್ದಂತೆಯೇ ಇಂಟರ್ನೆಟ್​ ಸ್ಪೀಡ್​ಗೆ 64ಕೆಬಿಪಿಎಸ್​ಗೆ ಇಳಿಕೆ ಕಾಣಲಿದೆ. 28 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಪ್ಯಾಕ್​ನಲ್ಲಿ ಜಿಯೋ ಅಪ್ಲಿಕೇಶನ್​ಗೆ ಚಂದಾದಾರಿಕೆ ಕೂಡ ಸಿಗಲಿದೆ.

3. ₹ 72 ಜಿಯೋ ಪ್ಲಾನ್​ : 28 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಪ್ಲಾನ್(Plane)​ನಲ್ಲಿ ಗ್ರಾಹಕರಿಗೆ 72 ಜಿಬಿ ಹೈಸ್ಪೀಡ್​ ಇಂಟರ್ನೆಟ್​ ಡೇಟಾ ದೊರೆಯಲಿದೆ.

4. ₹ 102 ಜಿಯೋ ಪ್ಲಾನ್​ : ಈ ಜಿಯೋ ಪ್ಲಾನ್​ನಲ್ಲಿ ಗ್ರಾಹಕರಿಗೆ ಪ್ರತಿದಿನಿ 1 ಜಿಬಿ(GB) ಹೈಸ್ಪೀಡ್​ ಇಂಟರ್ನೆಟ್​ ಡೇಟಾ ದೊರೆಯಲಿದೆ.

5. ₹152 ಜಿಯೋ ಪ್ಲಾನ್​ : ಈ ಪ್ಲಾನ್​ನಲ್ಲಿ ಗ್ರಾಹಕರಿಗೆ 2 ಜಿಬಿ ಹೈಸ್ಪೀಡ್​ ಡೇಟಾ(High Speed) ಸಿಗಲಿದೆ. ಅಂದರೆ ಒಟ್ಟು 56 ಜಿಬಿ ಡೇಟಾ ಗ್ರಾಹಕರಿಗೆ ಸಿಗಲಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *