ಸ್ತ್ರೀ ಶಕ್ತಿಯಿಂದಲೇ ಸಂಸ್ಥಾನಕ್ಕೆ ಯಶಸ್ಸು: ಮಾತೋಶ್ರೀ ಡಾ. ದ್ರಾಕ್ಷಾಯಿಣಿ

ನಮ್ಮ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ತ್ರೀ ಶಕ್ತಿಯೇ ನಮ್ಮ ಸಂಸ್ಥಾನದ ಯಶಸ್ಸಿಗೆ ಕಾರಣವಾಗಿದೆ. ಈ ಸ್ತ್ರೀ ಶಕ್ತಿಯ ಹಿಂದೆ ಅನೇಕ ಪುರುಷರ ಪರಿಶ್ರಮವಿದೆ ಎಂದು ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನರಾದ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರಾದ ಪೂಜ್ಯ ಮಾತೋಶ್ರೀ ಡಾ. ದಾಕ್ಷಾಯಿಣಿ ಅವರು ಶ್ಲಾಘಿಸಿದರು.
ನಗರದ ಶರಣಬಸವ ವಿಶ್ಯವಿದ್ಯಾಲಯದ ದೊಡ್ಡಪ್ಪ ಅಪ್ಪಾ ಸಭಾಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಪ್ರತಿ ಮಹಿಳೆ ಉತ್ತಮ ಕತೃತ್ವ, ನೇತೃತ್ವ ಮತ್ತು ಮಾತೃತ್ವ ಅಂಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುತ್ತಾರೆ. ಉತ್ತಮ ಕಾರ್ಯಗಳನ್ನು, ಉತ್ತಮವಾದ ರೀತಿಯಲ್ಲಿ ನೇತೃತ್ವ ನಿರ್ವಹಿಸಿ ಆ ಕಾರ್ಯಯೋಜನೆಗಳನ್ನು ಸಫಲಗೊಳಿಸಿರುತ್ತಾರೆ. ಅದರಂತೆ ಮಕ್ಕಳನ್ನು ಉತ್ತಮ ರೀತಿಯಲ್ಲಿ ಪೋಷಿಸಿ ರಕ್ಷಿಸಿ ಒಳ್ಳೆಯ ಮಾತೆಯಾಗುತ್ತಾಳೆ ಎಂದರು.
ಪ್ರತಿ ಗಂಡಿನ ಯಾವುದೆ ಕೆಲಸಕ್ಕೆ, ಹೆಣ್ಣಿನ ಸ್ಪರ್ಶ ಇದ್ದಾಗ ಮಾತ್ರ ಆ ಕೆಲಸ ಯಶಸ್ವಿನತ್ತ ಸಾಗುತ್ತದೆ ಮತ್ತು ಪರಿಪೂರ್ಣಗೊಳ್ಳುತ್ತದೆ ಅದೇ ರೀತಿ ಪುರುಷರ ಪ್ರೋತ್ಸಾಹದಿಂದ ಯಾವುದೇ ಕೆಲಸವನ್ನು ಆಕಾಶದೆತ್ತರಕ್ಕೆ ಕೊಂಡೊಯ್ಯಬಲ್ಲಳು ಹೆಣ್ಣು. ನಾರಿ ಶಕ್ತಿ ಸ್ವರೂಪಿಣಿಯಾಗಿದ್ದಾಳೆ. ಹೀಗಾಗಿ ನಮ್ಮ ದೇಶದಲ್ಲಿ ಹೆಣ್ಣನ್ನು ಪೂಜ್ಯನೀಯ ಸ್ಥಾನದಲ್ಲಿ ನೋಡಲ್ಪಡುತ್ತದೆ ಎಂದು ಅವರು ಹೇಳಿದರು.
ಲಿ. ದೊಡ್ಟಪ್ಪ ಅಪ್ಪಾ ಅವರು ಅಂದು ಹೆಣ್ಣು ಮಕ್ಕಳಿಗಾಗಿ ಪ್ರಾರಂಭಿಸಿದ್ದ ಮಹಾದೇವಿ ಕನ್ಯಾ ಪ್ರೌಢಶಾಲೆಯ ಎಂಬ ಸಸಿ ಇಂದು ವಿಶ್ವವಿದ್ಯಾಲಯದ ಮಟ್ಟಿಗೆ ಹೆಮ್ಮರವಾಗಿ ಬೆಳೆದಿದೆ ಎಂದು ಅವರು ಸಂತೋಷ ವ್ಯಕ್ತಪಡಿಸಿದರು.
ಶ್ರೀ ಶರಣಬಸವೇಶ್ವರ್ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯ ಬಸವರಾಜ್ ದೇಶಮುಖ್ ಅವರು ಮಾತನಾಡಿ, ಪ್ರತಿ ಕುಟುಂಬದಲ್ಲಿ ಹೆಣ್ಣು ಶ್ರೇಷ್ಠಸ್ಥಾನ ಹೊಂದಿದ್ದಾರೆ. ನಮ್ಮ ಸಂಸ್ಥೆಯಲ್ಲಿ ಕೇವಲ ಮಹಿಳೆಯರಿಗಾಗಿ ಕೆಜಿಯಿಂದ ಪಿಜಿವರೆಗೆ ಶಿಕ್ಷಣ ಪಡೆಯುವ ಅವಕಾಶಗಳಿವೆ. ಇಲ್ಲಿ ಮಹಿಳೆಯರಿಗಾಗಿ ವಿಶೇಷ ಸ್ಥಾನಮಾನವಿದೆ ಎಂದರು.
ಕುಲಪತಿ ಡಾ. ನಿರಂಜನ್ ವಿ. ನಿಷ್ಠಿ ಅವರು ಮಾತನಾಡಿ, ಮಗುವಾಗಿದ್ದಾಗ ತೊಟ್ಟಿಲನ್ನು ತೂಗುವ ಕೈಗಳು, ತಪ್ಪು ಮಾಡಿದಾಗ ಶಿಕ್ಷೆ ನೀಡುವ ಕೈಗಳಾಗಿ ಪರಿವರ್ತನೆಗೊಳ್ಳುತ್ತವೆ. ಹೆಣ್ಣು ಶೈಕ್ಷಣಿಕ ಕ್ಷೇತ್ರದಲ್ಲಿ, ಹಣಕಾಸಿನ ಕೇತ್ರದಲ್ಲಿ, ಗೃಹಖಾತೆ ಹೀಗೆ ವಿವಿಧ ಕೇತ್ರದಲ್ಲಿ ಸಾಧನೆ ಮಾಡಿದ್ದಾರೆ ಎಂದರು.
ಸಮಾಜ ಸೇವಕರಾದ ಲಕ್ಷ್ಮಿ ದತ್ತಾತ್ರೇಯ್ ಪಾಟೀಲ್ ರೇವೂರ್ ಅವರು ಮಾತನಾಡಿ, ಶರಣಬಸವೇಶ್ವರ ಸಂಸ್ಥಾನದಲ್ಲಿ ಹೊಸ ಹೊಸ ಯೋಜನೆಗಳನ್ನು ಕೈಗೊಳ್ಳುವ ಮೂಲಕ ಈ ಶಿಕ್ಷಣ ಸಂಸ್ಥೆಯ ಅಭಿವೃದ್ಧಿಗೆ ಕಾರಣರಾಗಿದ್ದ ಅವ್ವಾಜಿಯವರು ನಮ್ಮೆಲರಿಗೂ ಮಾರ್ಗದರ್ಶಕರಾಗಿದ್ದಾರೆ ಎಂದರು.
ಪ್ರತಿ ಕೇತ್ರದಲ್ಲಿ ಹೆಣ್ಣು ಮಕ್ಕಳು ಸಾಧನೆ ಗೈದಿದ್ದಾರೆ. ಅರಣ್ಯ ಕೇತ್ರ, ಸೈನಿಕ ಕೇತ್ರ ಸೇರಿದಂತೆ ಪುರೋಹಿತ ಕ್ಷೇತ್ರದಲ್ಲಿಯೂ ಹೆಣ್ಣು ಮಕ್ಕಳು ಪಾದಾರ್ಪಣೆ ಮಾಡುತ್ತಿರುವುದು ಇನ್ನೂ ವಿಶೇಷ ಎಂದು ಅವರು ಹೇಳಿದರು.
ಬ್ಯಾಂಕ್ ಆಫ್ ಬರೋಡಾದ ಪ್ರಾದೇಶಿಕ ವ್ಯವಸ್ಥಾಪಕ ಸುನೀಲಕುಮಾರ್ ಅವರು ಮಾತನಾಡಿ, ತಾಯಿ ಮಗುವಿಗೆ ಸಮಾಜದಲ್ಲಿ ಸದೃಢವಾಗಿ ಬಳೆಸುವಂತಹ ನಾಯಕತ್ವಗುಣಗಳನ್ನು ಹೊಂದಿರುತ್ತಾಳೆ. ನಮ್ಮ ಇತಿಹಾಸದ ಮೂಲಕ ಸ್ತ್ರೀ ಶಕ್ತಿ ಸಾಮರ್ಥ ಅರ್ಥೈಸಿಕೊಳ್ಳಬಹುದಾಗಿದೆ ಎಂದರು.
ಗೋದುತಾಯಿ ಬಿ.ಇಡಿ ಶಿಕ್ಷಣ ಮಹಾವಿದ್ಯಾಲಯದ ನಿವೃತ್ತ ಪ್ರಿನ್ಸಿಪಾಲ್ ಸುಶೀಲಾ ನರಕೆ ಅವರು ಕಾಯಕ ರತ್ನ ಪ್ರಶಸ್ತಿ ಸ್ವೀಕರಿಸಿ ಮತ್ತು ಖ್ಯಾತ ವೈದ್ಯರಾದ ಡಾ. ಶಿವಲಿಂಗ್ ನಿಷ್ಠಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ದಾವಣಗೆರೆ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪಡೆದುಕೊಂಡಿರುವ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿಯವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು’. ಡಾ. ಸುಶೀಲಾ ನರಕೆ ಮತ್ತು ಕಮಲಾ ದೇವರಕಲ್ ಅವರು ಕಾಯಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಾ. ಜಯಶ್ರೀ ದಂಡೆ ಅವರಿಗೆ ‘ಸ್ತ್ರೀ ರತ್ನ ಪ್ರಶಸ್ತಿ’ ನೀಡಿ ಸನ್ಮಾನಿಸಲಾಯಿತು. ಕಮಲಾಬಾಯಿ ಚಿಟಗುಪ್ಪಿಕರ್ ಮತ್ತು ಅಪೂರ್ವ ಬಜಾಜ್ ಅವರಿಗೆ ‘ಸ್ತ್ರೀ ಶಕ್ತಿಪ್ರಶಸ್ತಿ’ ನೀಡಿಗೌರವಿಸಲಾಯಿತು. ಮಾಲಾ ದಣ್ಣೂರ್ ಮತ್ತು ಮಾಲಾ ಕಣ್ಣಿ ಅವರಿಗೆ ‘ಸೇವಾ ರತ್ನ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಶ್ರೀಧರ್, ಪುಷ್ಪರಾಜ್, ಸಲೀಂ, ಇರ್ಫಾನಾ ಬೇಗಂ, ಬಸಯ್ಯ ಹಿರೇಮಠ್, ಸಂತೋಷ್, ಮಹಾನಂದ, ಸಿದ್ರಾಮ್ ಚೌಹ್ವಾಣ್, ಚಂದ್ರಕಾಂತ್ ಅತನೂರ್, ಚಿದಾನಂದ್ ಅವರನ್ನು ‘ಸೇವಾರತ್ನ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಡಾ. ನಿಧಿಷ್ ನಿಷ್ಠಿ, ಡಾ. ಶಿವಲಿಂಗ್ ನಿಷ್ಠಿ ಅವರಿಗೆ ಕೋವಿಡ್ ವಾರಿಯರ್ಸ್ ಎಂದು ಗುರುತಿಸಿ ಸನ್ಮಾನಿಸಲಾಯಿತು. ಪ್ರೊ. ಚೇತನಾ ಪಾಟೀಲ್ ಮತ್ತು ಪ್ರೊ. ಶೃತಿ ಅವರು ಕಾರ್ಯಕ್ರಮ ನಿರೂಪಿಸಿದರು. ಸಂಗೀತ ವಿಭಾಗದಿಂದ ಪ್ರಾರ್ಥನೆ ಗೀತೆ ಹಾಡಲಾಯಿತು. ಡೀನ್ ಡಾ. ಲಕ್ಷ್ಮಿ ಪಾಟೀಲ್, ಮಾಕಾ ಅವರು ಸ್ವಾಗತಿಸಿದರು. ಡಾ. ವಾಣಿಶ್ರೀ ಅವರು ವಂದಿಸಿದರು. ಕಾರ್ಯಕ್ರಮದಲ್ಲಿ ಸಮಕುಲಪತಿ ಡಾ. ವಿ.ಡಿ. ಮೈತ್ರಿ, ಕುಲಸಚಿವ ಡಾ. ಅನೀಲಕುಮಾರ್ ಬಿಡವೆ, ಮೌಲ್ಯಮಾಪನ ಕುಲಸಚಿವ ಡಾ. ಲಿಂಗರಾಜ್ ಶಾಸ್ತ್ರೀ ಡೀನ್ ಡಾ. ಬಸವರಾಜ್ ಮಠಪತಿ ಸೇರಿದಂತೆ ವಿವಿಯ ವಿವಿಧ ವಿಭಾಗದ ಪ್ರಾಧ್ಯಾಪಕರು ಉಪಸ್ಥಿತರಿದ್ದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *