ಬೈಎಲೆಕ್ಷನ್‌ ಮೇಲೆ ಬಿಎಸ್ ಯಡಿಯೂರಪ್ಪ ಕಣ್ಣು..! ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಬಂಪರ್ ಕೊಡುಗೆ‌

ಹೈಲೈಟ್ಸ್‌:

  • ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಮೇಲೆ ಬಿಎಸ್‌ ಯಡಿಯೂರಪ್ಪ ಗಮನ
  • ಕರ್ನಾಟಕ ಬಜೆಟ್‌ನಲ್ಲಿ ಬೆಳಗಾವಿಗೆ ಭಾರೀ ಅನುದಾನ ಘೋಷಿಸಿದ ಸಿಎಂ ಬಿಎಸ್‌ವೈ
  • ರಿಂಗ್‌ ರೋಡ್‌, ರೈಲು ಮಾರ್ಗಕ್ಕೆ ಅನುದಾನ ಘೋಷಿಸಿದ ಸಿಎಂ ಬಿಎಸ್‌ ಯಡಿಯೂರಪ್ಪ

ಉಪ ಚುನಾವಣೆ ಹೊಸ್ತಿಲಲ್ಲಿರುವ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಘೋಷಣೆ ಮಾಡಲಾಗಿದೆ. ಸುರೇಶ ಅಂಗಡಿ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ ಇನ್ನೇನು ಚುನಾವಣೆ ನಡೆಯಲಿದೆ. ಇದೇ ಕ್ಷೇತ್ರ ವ್ಯಾಪ್ತಿಯಲ್ಲಿ ಅನೇಕ ವರ್ಷಗಳಿಂದ ಅನುದಾನ ನಿರೀಕ್ಷೆಯಲ್ಲಿದ್ದ ಕೇಂದ್ರ ಸರಕಾರದ ರಿಂಗ್‌ ರೋಡ್‌ ಯೋಜನೆಗೆ ರಾಜ್ಯ ಸರಕಾರ ಈ ಬಾರಿಯ ಬಜೆಟ್‌ನಲ್ಲಿತನ್ನ ಪಾಲಿನ ಶೇ.50 ರಷ್ಟು, 140 ಕೋಟಿ ರೂ. ಅನುದಾನ ಘೋಷಣೆ ಮಾಡಿದೆ.

ಜತೆಗೆ ಸುರೇಶ ಅಂಗಡಿ ಅವರ ಅವಧಿಯಲ್ಲಿ ಮಂಜೂರಾಗಿದ್ದ ಬೆಳಗಾವಿ-ಕಿತ್ತೂರು- ಧಾರವಾಡ ರೈಲು ಮಾರ್ಗಕ್ಕೆ 463 ಕೋಟಿ ರೂ. ಅನುದಾನ ಘೋಷಣೆಯಾಗಿದೆ. ಕಿತ್ತೂರು ತಾಲೂಕಿನಲ್ಲಿರುವ ಕಿತ್ತೂರು ಕೋಟೆ ಅಭಿವೃದ್ಧಿಗೆ 50 ಕೋಟಿ ರೂ. ಅನುದಾನ ಪ್ರಕಟಿಸಲಾಗಿದೆ. ನಿಪ್ಪಾಣಿಯ ಕೊಲ್ಲಾಪುರಿ ಚಪ್ಪಲಿ ಕ್ಲಸ್ಟರ್‌ ನಿರ್ಮಾಣದ ಬಗ್ಗೆ ಪ್ರಕಟಿಸಲಾಗಿದೆ. ಆದರೆ, ಹಣ ಪ್ರಸ್ತಾಪಿಸಿಲ್ಲ.

ಅದರಲ್ಲಿ ರಿಂಗ್‌ ರೋಡ್‌ ಮತ್ತು ರೈಲ್ವೆ ಮಾರ್ಗ ನಿರ್ಮಾಣ ಕೇಂದ್ರ ಸರಕಾರದ ಯೋಜನೆಗಳು. ಈ ಎರಡು ಯೋಜನೆಗಳಿಗೆ ರಾಜ್ಯ ಸರಕಾರ ತನ್ನ ಪಾಲಿನ ಹಣ ಕೊಡಬೇಕಿದೆ. ಬೆಳಗಾವಿ ಲೋಕಸಭೆ ಉಪ ಚುನಾವಣೆ ಹಿನ್ನೆಲೆಯಲ್ಲಿ ಈ ಎರಡು ಯೋಜನೆಗಳು ಸಾಕಷ್ಟು ಮಹತ್ವದ್ದಾಗಿದೆ. ಜನರ ಬೇಡಿಕೆಯೂ ಇದೆ. ಈ ಸಂದರ್ಭದಲ್ಲಿ ಎರಡೂ ಯೋಜನೆಗಳಿಗೆ ಹಣ ಮೀಸಲಿಟ್ಟಿರುವುದು ಗಮನ ಸೆಳೆದಿದೆ.
ಅಸಲಿಗೆ ದಶಕಗಳಿಂದಲೂ ಕುಂಟುತ್ತಿರುವ ಬೆಳಗಾವಿ ರಿಂಗ್‌ ರೋಡ್‌ ಯೋಜನೆ ಜಾರಿ ಬಗ್ಗೆ 2019 ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬೆಳಗಾವಿಗೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸ್ತಾಪಿಸಿದ್ದರು. ಆ ಬಳಿಕ ಯಾವುದೇ ಪ್ರಕ್ರಿಯೆ ಆಗಿರಲಿಲ್ಲ. ಈಗ ಅದಕ್ಕೆ ಹಣ ದೊರೆತಿದೆ. ಆದರೆ, ವಾಸ್ತವವಾಗಿ ಈ ಯೋಜನೆ ಅನುಷ್ಠಾದಲ್ಲಿ ಇರುವ ಸಮಸ್ಯೆಗಳು ಹಲವು.
ಇನ್ನು ಬೆಳಗಾವಿ-ಕಿತ್ತೂರು-ಧಾರವಾಡ ರೈಲು ಮಾರ್ಗ ಜಿಲ್ಲೆಯ ಜನರ ಬಹು ವರ್ಷಗಳ ಕನಸು. ಅದು ದಿ. ಸುರೇಶ ಅಂಗಡಿ ಅವರ ಅವಧಿಯಲ್ಲಿಮಂಜೂರಾದ ಕಾರಣಕ್ಕೆ ಭಾವನಾತ್ಮಕ ಸಂಬಂಧ ಇದೆ. ಆ ಯೋಜನೆಗೆ ರಾಜ್ಯ ಸರಕಾರ ಹಣ ಮೀಸಲಿಟ್ಟಿದ್ದು ಖುಷಿ ವಿಚಾರ. ಇದರ ಜತೆ ಅತಿ ಜರೂರಾದ ಬೇಡಿಕೆ ಕಡೆಗಣಿಸಲಾಗಿದೆ ಎಂಬ ಕೊರಗು ಈ ಭಾಗದ ಜನರನ್ನು ಕಾಡತೊಡಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *