ನೆಮಾ ಬಿಟ್ಟು ಧಾರಾವಾಹಿಗೆ ಎಂಟ್ರಿ ಕೊಟ್ರಾ ಹಾಸ್ಯ ನಟ ಸಾಧು ಕೋಕಿಲ…?
ಸ್ಯಾಂಡಲ್ ವುಡ್ ನ ಖ್ಯಾತ ಹಾಸ್ಯ ನಟ ಸಾಧು ಕೋಕಿಲ ಮತ್ತೊಂದು ಸಾಹಸಕ್ಕೆ ಮುಂದಾಗಿದ್ದಾರೆ. ನಟನೆಯ ಜೊತೆಗೆ ಈಗಾಗಲೇ ಸಂಗೀತ ನಿರ್ದೇಶಕರಾಗಿ, ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಕಾಮಿಡಿ ಮಹರಾಜ್ ಸಾಧು ಕೋಕಿಲ ಈಗ ಧಾರಾವಾಹಿ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅಂದಹಾಗೆ ಸಾಧು ಕೋಕಿಲ ಧಾರಾವಾಹಿಯಲ್ಲಿ ನಟನೆ ಮಾಡುತ್ತಿದ್ದಾರಾ ಅಂತ ಅಂದ್ಕೋಬೇಡಿ. ಧಾರಾವಾಹಿ ನಿರ್ಮಾಣದ ಮೂಲಕ ಕಿರುತೆರೆಯಲ್ಲಿ ಕಮಾಲ್ ಮಾಡಲು ಸಜ್ಜಾಗಿದ್ದಾರೆ. ಹೌದು, ನಟ ಸಾಧು ಕೋಕಿಲ ನಿರ್ಮಾಣದಲ್ಲಿ ಹೊಸ ಧಾರಾವಾಹಿ ಮೂಡಿಬರುತ್ತಿದೆ.
ಧಾರಾವಾಹಿಗೆ ‘ಗೌರಿಪುರದ ಗಯ್ಯಾಳಿಗಳು’ ಎಂದು ಟೈಟಲ್ ಇಡಲಾಗಿದೆ. ಈ ಧಾರಾವಾಹಿ ಮಾರ್ಚ್ 15 ರಿಂದ ಪ್ರತಿದಿನ ಸಂಜೆ 6.30ಕ್ಕೆ ಪ್ರಸಾರವಾಗಲಿದೆ. ಕಾಮಿಡಿ ಜೊತೆಗೆ ಸಸ್ಪೆನ್ಸ್ ಅಂಶವನ್ನು ಈ ಧಾರಾವಾಹಿ ಹೊಂದಿದೆ ಎನ್ನಲಾಗುತ್ತಿದೆ. ‘ಗೌರಿಪುರದ ಗಯ್ಯಾಳಿಗಳು’ ಧಾರಾವಾಹಿಗೆ ನಿರ್ಮಾಣ ಮಾಡುವ ಜೊತೆಗೆ ಈ ಧಾರಾವಾಹಿಯ ಶೀರ್ಷಿಕೆ ಗೀತೆಗೆ ಇವರೇ ಧ್ವನಿ ನೀಡಿದ್ದಾರೆ. ಈಗಾಗಲೇ ಸ್ಯಾಂಡಲ್ ವುಡ್ ನ ಅನೇಕ ನಟರು ಧಾರಾವಾಹಿ ನಿರ್ಮಾಣ ಮಾಡುತ್ತಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್, ರಮೇಶ್ ಅರವಿಂದ್ ಧಾರಾವಾಹಿ ಲೋಕದಲ್ಲಿ ಸಕ್ರೀಯರಾಗಿದ್ದಾರೆ.