ಕೃಷಿ ಕಾಯ್ದೆ ವಿರೋದಿಸಿ ಮಾ.26 : ಭಾರತ್ ಬಂದ್ ಗೆ ರೈತರ ಕರೆ
ನವದೆಹಲಿ, ಮಾ.10-ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ ಮಾರ್ಚ್ 26ಕ್ಕೆ ನಾಲ್ಕು ತಿಂಗಳು ಪೂರ್ಣಗೊಳ್ಳಲಿರುವ ಹಿನ್ನೆಲೆಯಲ್ಲಿ ಅಂದು ಭಾರತ್ ಬಂದ್ ಗೆ ರೈತರು ನಾಯಕರು ಕರೆ ನೀಡಿದ್ದಾರೆ .
ಕೃಷಿ ಕಾಯ್ದೆಗಳನ್ನು ವಿರೋಧಿಸಿ ಈಗಾಗಲೇ ರೈತರು ರಸ್ತೆ ದಿಗ್ಬಂಧನ, ರೈಲು ತಡೆ ಸೇರಿದಂತೆ ವಿವಿಧ ಚಳುವಳಿಗಳನ್ನು ನಡೆಸಿ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ.ಈ ಹಿನ್ನೆಲೆಯಲ್ಲಿ ಇದೇ ಮಾರ್ಚ್ 26 ರಂದು ಸಂಪೂರ್ಣವಾಗಿ ಮಾಡಲು ರೈತ ನಾಯಕರು ನಿರ್ಧರಿಸಿದ್ದಾರೆ.
ಕಳೆದ ವರ್ಷ ಕೇಂದ್ರ ಸರ್ಕಾರ ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರ ಪಡೆದಿರುವ ಮೂರು ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿದ ನವಂಬರ್ 26 ರಿಂದ ರೈತರು ಗಡಿಭಾಗದಲ್ಲಿ ಹೋರಾಟ ನಡೆಸುತ್ತಿದ್ದಾರೆ.
ದೆಹಲಿ ಸೇರಿದಂತೆ ಸುತ್ತಮುತ್ತಲ ರಾಜ್ಯಗಳಿಗೆ ಸೀಮಿತವಾಗಿರುವ ರೈತರ ಹೋರಾಟವನ್ನು ದೇಶಾದ್ಯಂತ ವಿಸ್ತರಿಸಲು ರೈತ ನಾಯಕರು ನಿರ್ಧರಿಸಿರುವ ನಡುವೆಯೇ ಮಾರ್ಚ್ 26 ರಂದು ಭಾರತ ಬಂದ್ ಗೆ ಕರೆ ನೀಡಲಾಗಿದೆ.
ಮಾರ್ಚ್ 15 ರಂದು ಹೋರಾಟ:
ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪೆಟ್ರೋಲ್ ಡೀಸೆಲ್ ಮತ್ತು ಅಡುಗೆ ಅನಿಲ ದರ ಏರಿಕೆ ವಿರೋಧಿಸಿ ಇದೇ 15 ರಂದು ಟ್ರೇಡ್ ಯೂನಿಯನ್ ಪ್ರತಿಭಟನೆಗೆ ಕರೆ ನೀಡಿದ್ದಾರೆ.
ಜನವರಿ 26 ರಂದು ದೆಹಲಿಯ ಕೆಂಪು ಕೋಟೆಯ ಮೇಲೆ ನಡೆಸಿದ ಹೋರಾಟದ ಹಿನ್ನೆಲೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮದೊಂದಿಗೆ ಭಾರತ್ ಬಂದ್ ಗೆ ಕರೆ
ನೀಡಲಾಗಿದೆ.
ಹೋರಾಟ:
ಕೃಷಿ ಕಾಯ್ದೆ ವಿರೋದಿಸಿ ದೆಹಲಿಯ ಟಿಕ್ರಿ, ಸಿಂಘು, ಗಾಜಿಯಾ ಪುರ ಗಡಿ ಭಾಗದಲ್ಲಿ ರೈತರು ಹೋರಾಟ ನಡೆಸುತ್ತಿದ್ದಾರೆ.ಹೋರಾಟ ನಿರರ ರೈತರು ಚಳಿ ಮಳೆ ಗಾಳಿ ಎನ್ನದೆ ಹೋರಾಟದಲ್ಲಿ ಭಾಗಿಯಾಗಿದ್ದಾರೆ.
200 ಕ್ಕೂ ಹೆಚ್ಚು ರೈತರು ಸಾವು:
ಕೃಷಿ ಕಾಯ್ದೆಯನ್ನು ವಿರೋಧಿಸಿ ದೆಹಲಿಯಲ್ಲಿ ಹೋರಾಟ ನಡೆಸುತ್ತಿರುವ ರೈತರು ಅನಾರೋಗ್ಯ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಇನ್ನೂರಕ್ಕೂ ಹೆಚ್ಚು ರೈತರು ಮೃತಪಟ್ಟಿದ್ದಾರೆ.
ಆದರೂ ಕೇಂದ್ರ ಸರ್ಕಾರ ರೈತರ ಹೋರಾಟಕ್ಕೆ ಬೆಲೆ ನೀಡದೆ ಹಠಮಾರಿ ದೋರಣೆ ಪ್ರದರ್ಶಿಸುತ್ತದೆ ಇದು ಸಹಜವಾಗಿಯೇ ರೈತ ರೈತರನ್ನು ಮತ್ತಷ್ಟು ಕೆರಳಿಸುವಂತೆ ಮಾಡಿದೆ