ಆಳಂದ : ಜನಸ್ನೇಹಿಯಾದ ಜನರೀಕ್ ಔಷದಿ ಮಳಿಗೆ
ಆಳಂದ :ಮಾ.7: ಜನರೀಕ್ ಔಷದಿ ಮಳಿಗೆ ಬಡವರಿಗೆ ಅನಕೂಲ ಮತ್ತು ಜನ ಸ್ನೇಹಿಯಾಗಿದೆ ಎಂದು ಪುರಸಭೆ ಉಪಾಧ್ಯಕ್ಷ ಚಂದ್ರಕಾಂತ ಹತ್ತರಕಿ ಹೇಳಿದರು.
ಆಳಂದ ಪಟ್ಟಣದಲ್ಲಿ ಆರಂಭಿಸಲಾದ ಜನರೀಕ್ ಔಷದಿ ಮಳಿಗೆಯ ಮೂರನೆ ವಾರ್ಷಿಕೋತ್ಸವವನ್ನು ಉದ್ಘಾಟನೆ ಮಾಡಿ ಮಾತನಾಡಿದರು. ಜನರೀಕ್ ಔಷದಿ ಮಳಿಗೆಯಲ್ಲಿ ಖರೀದಿಸುವ ಔಷದಿಗಳು ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಸಿಗುತ್ತವೆ ಆದ್ದರಿಂದ ಇಂಥ ಮಳಿಗೆ ಸ್ಥಾಪನೆಯಿಂದ ಸಾರ್ವಜನಿಕರಿಗೆ ತುಂಬಾ ಅನಕೂಲವಾಗಿದೆ ಎಂದರು. ಬಿಜೆಪಿ ಮುಖಂಡ ಶ್ರೀಶೈಲ ಖಜೂರಿ ಸೂರ್ಯಕಾಂತ ಹತ್ತಿ ಇತರರು ಇದ್ದರು.