‘ರಾಬರ್ಟ್’ ಚಿತ್ರದ ಮೊದಲ ಟಿಕೆಟ್ ಖರೀದಿ ಮಾಡಿದ ಲಕ್ಕಿ ಹ್ಯಾಂಡ್ ‘ಇವರದ್ದೇ’.!

ಹೈಲೈಟ್ಸ್‌:

  • ಅದ್ಧೂರಿಯಾಗಿ ತೆರೆಗೆ ಬಂದಿದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’
  • ಬಿಡುಗಡೆಗೂ ಮುನ್ನ ಬೆಂಗಳೂರಿನ ಶ್ರೀನಿವಾಸ ಥಿಯೇಟರ್ ನಲ್ಲಿ ಪೂಜೆ ಸಲ್ಲಿಸಿದ ಚಿತ್ರತಂಡ
  • ಪೂಜೆ ಬಳಿಕ ಶ್ರೀನಿವಾಸ ಥಿಯೇಟರ್ ನಲ್ಲಿ ಮೊದಲ ಟಿಕೆಟ್ ಖರೀದಿ ಮಾಡಿದ್ದು ಶೌರ್ಯ.!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಮೋಸ್ಟ್ ಎಕ್ಸ್ ಪೆಕ್ಟೆಡ್ ಮೂವಿ ‘ರಾಬರ್ಟ್‘ ಬಿಡುಗಡೆಯಾಗಿದೆ. ಇಂದು ಬೆಳಗ್ಗೆ 6 ಗಂಟೆಯಿಂದ ಕರ್ನಾಟಕದಲ್ಲಿ ‘ರಾಬರ್ಟ್’ ದರ್ಶನ ಪ್ರಾರಂಭವಾಗಿದೆ. ಒಂದ್ಕಡೆ ಶಿವರಾತ್ರಿ ಹಬ್ಬದ ಸಂಭ್ರಮ ಜೋರಾಗಿದ್ದರೆ, ಇನ್ನೊಂದು ಕಡೆ ಥಿಯೇಟರ್ ಗಳ ಮುಂದೆ ‘ರಾಬರ್ಟ್’ ಜಾತ್ರೆ ನಡೆಯುತ್ತಿದೆ.

ಕರ್ನಾಟಕದಲ್ಲಿ ಸುಮಾರು 180ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ‘ರಾಬರ್ಟ್’ ಶೋಗಳು ಶುರುವಾಗಿದ್ದು, ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ವರ್ಷದ ಬಳಿಕ ಡಿ ಬಾಸ್ ದರ್ಶನ್ ರನ್ನ ದೊಡ್ಡ ಪರದೆ ಮೇಲೆ ಕಣ್ತುಂಬಿಕೊಂಡ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

ಶ್ರೀನಿವಾಸ ಥಿಯೇಟರ್ ನಲ್ಲಿ ಚಿತ್ರತಂಡ
‘ರಾಬರ್ಟ್’ ರಿಲೀಸ್ ಪ್ರಯುಕ್ತ ಬೆಂಗಳೂರಿನ ಪದ್ಮನಾಭನಗರದ ಶ್ರೀನಿವಾಸ ಥಿಯೇಟರ್ ನಲ್ಲಿ ಚಿತ್ರತಂಡ ವಿಶೇಷ ಪೂಜೆ ಸಲ್ಲಿಸಿತು. ಥಿಯೇಟರ್ ಸ್ಕ್ರೀನ್ ಗೆ ‘ರಾಬರ್ಟ್’ ಚಿತ್ರತಂಡ ಪೂಜೆ ಮಾಡಿದರು. ಪೂಜೆಯಲ್ಲಿ ನಿರ್ದೇಶಕ ತರುಣ್ ಸುಧೀರ್, ನಾಯಕಿ ಆಶಾ ಭಟ್ ಹಾಗೂ ಚಿತ್ರತಂಡ ಭಾಗಿಯಾಗಿತ್ತು. ಸಿನಿಮಾಗೆ ಯಶಸ್ಸು ಸಿಗಲಿ, ಯಾವುದೇ ಸಮಸ್ಯೆ ಆಗದಿರಲಿ ಎಂದು ಚಿತ್ರತಂಡ ಪ್ರಾರ್ಥಿಸಿತ್ತು.

ಮೊದಲ ಟಿಕೆಟ್ ಖರೀದಿ ಮಾಡಿದ್ದು ‘ಇವರೇ’.!
ಪೂಜೆ ಸಲ್ಲಿಸಿದ ಬಳಿಕ ಶ್ರೀನಿವಾಸ ಥಿಯೇಟರ್ ನಲ್ಲಿ ‘ರಾಬರ್ಟ್’ ಚಿತ್ರದ ಮೊದಲ ಟಿಕೆಟ್ ಖರೀದಿ ಮಾಡಿದ್ದು ಯಾರು ಗೊತ್ತೇ.? ಬೇರೆ ಯಾರೂ ಅಲ್ಲ.. ನಿರ್ದೇಶಕ ತರುಣ್ ಸುಧೀರ್ ಸಹೋದರನ ಪುತ್ರ ಶೌರ್ಯ.! ಹೌದು, ತರುಣ್ ಸುಧೀರ್ ಅಣ್ಣ ನಂದ ಕಿಶೋರ್ ಮಗ ಶೌರ್ಯ ‘ರಾಬರ್ಟ್’ ಚಿತ್ರದ ಮೊದಲ ಟಿಕೆಟ್ ಖರೀದಿ ಮಾಡಿದರು. ನಂದ ಕಿಶೋರ್ ಮಗ ಶೌರ್ಯ ಲಕ್ಕಿ ಎಂಬುದು ಕುಟುಂಬದ ನಂಬಿಕೆ. ಹೀಗಾಗಿ ಅವರ ಕೈಯಲ್ಲೇ ಮೊದಲ ಟಿಕೆಟ್ ಅನ್ನು ಖರೀದಿ ಮಾಡಿಸಲಾಗಿದೆ.

ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ
‘ರಾಬರ್ಟ್’ ಚಿತ್ರದ ಇಂದಿನ ಎಲ್ಲಾ ಶೋಗಳ ಟಿಕೆಟ್ ಗಳು ಸೋಲ್ಡ್ ಔಟ್ ಆಗಿವೆ. ಕರ್ನಾಟಕದ ಮೂಲೆ ಮೂಲೆಯಲ್ಲಿರುವ ಥಿಯೇಟರ್ ಗಳಲ್ಲೂ ‘ರಾಬರ್ಟ್’ ಚಿತ್ರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.

‘ರಾಬರ್ಟ್’ ಚಿತ್ರತಂಡ
‘ಚೌಕ’ ಚಿತ್ರದ ಬಳಿಕ ತರುಣ್ ಸುಧೀರ್ ನಿರ್ದೇಶನ ಮಾಡಿರುವ ಚಿತ್ರ ‘ರಾಬರ್ಟ್’. ಸಿನಿಮಾದಲ್ಲಿ ದರ್ಶನ್, ಆಶಾ ಭಟ್, ಜಗಪತಿ ಬಾಬು, ವಿನೋದ್ ಪ್ರಭಾಕರ್, ಸೋನಲ್ ಮಂಥೆರೋ, ಚಿಕ್ಕಣ್ಣ, ಅವಿನಾಶ್, ಶಿವರಾಜ್ ಕೆ.ಆರ್.ಪೇಟೆ, ಐಶ್ವರ್ಯಾ ಪ್ರಸಾದ್ ತಾರಾಗಣದಲ್ಲಿದ್ದಾರೆ. ಸಿನಿಮಾಗೆ ಉಮಾಪತಿ ಶ್ರೀನಿವಾಸ್ ಗೌಡ ಬಂಡವಾಳ ಹಾಕಿದ್ದಾರೆ. ಅರ್ಜುನ್ ಜನ್ಯ ಸಂಗೀತ ಚಿತ್ರಕ್ಕಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *