ಸಿಡಿ ಇಟ್ಕೊಂಡೇ ಬ್ಲಾಕ್ ಮೇಲ್ ಮಾಡೋ ಕುಟುಂಬಗಳಿವೆ – ಬಸನಗೌಡ ಪಾಟೀಲ್ ಯತ್ನಾಳ್

ಬೆಂಗಳೂರು: ನಾನು ಬೇರೆ ಸಿಡಿ ಇದೆ ಅಂತ ಹೇಳಿದ್ದೆ. ಬೇರೆ ಸಿಡಿಗಳು ಬಗ್ಗೆ ಹೇಳಿದ್ದೆ. ಆದರೆ, ಬಿಡುಗಡೆಯಾಗಿದ್ದು ಬೇರೆ ಸಿಡಿ. ಇನ್ನೂ ಉಳಿದವೂ ಬರ್ತವೆ ಎಂದು ಬಸನಗೌಡ ಪಾಟೀಲ್​ ಯತ್ನಾಳ್ ಅವರು ಬುಧವಾರ ಹೇಳಿದ್ದಾರೆ. ನಗರದಲ್ಲಿಂದ ಟಿವಿ5 ಕನ್ನಡ ಜೊತೆ ಮಾತನಾಡಿರುವ ಅವರು, ರಮೇಶ್ ಜಾರಕಿಹೊಳಿಯವರ ಸಿಡಿ ಇವರು ಬಿಟ್ಟಿದ್ದಾರೆ. ಅವರು ಸುಮ್ಮನಿರ್ತಾರಾ(?) ಅವರ ಬಳಿಯೂ ಕೆಲವು ಇರ್ತಾವೆ. ಅಪ್ಪ-ಮಕ್ಕಳ ಸಿಡಿ ಅವರ ಬಳಿ ಇವೆ. ಅವರು ಆ ಸಿಡಿಗಳನ್ನ ಇಷ್ಟರಲ್ಲೇ ಬಿಡ್ತಾರೆ ನೋಡಿ ಎಂದರು. ಸಿಡಿ ಇಟ್ಕೊಂಡೇ ಬ್ಲಾಕ್ ಮೇಲ್ ಮಾಡೋ ಕುಟುಂಬಗಳಿವೆ. ಕೆಲ ರಾಜಕೀಯ ನಾಯಕರು ರಾಜ್ಯದಲ್ಲಿದ್ದಾರೆ. ಇನ್ನೂ 23 ಸಿಡಿಗಳು ಇವೆಯಂತೆ, ನೋಡ್ತಾ ಇರಿ ಅವು ಒಂದೊಂದಾಗಿ ಬಿಡುಗಡೆ ಆಗುತ್ತಿವೆ. ಯಾವುದೂ ಉಳಿಯೋದಿಲ್ಲ, ಎಲ್ಲವೂ ಬಿಡುಗಡೆಯಾಗುತ್ವೆ. ನಾನು ಸತ್ಯ ದರ್ಶನ ಬಿಡುಗಡೆ ಎಂದಿದ್ದೆ. ಅದರಂತೆ ಎಲ್ಲವೂ ಬಿಡುಗಡೆ ಆಗ್ತಿವೆ. ನನ್ನ ಬಳಿ ಯಾವ ಸಿಡಿಗಳೂ ಇಲ್ಲ, ಸತ್ಯ ಯಾವತ್ತಿದ್ರೂ ಹೊರಬರಬೇಕಲ್ವೇನ್ರೀ(?) ನೋಡ್ತಾ ಇರಿ ಇನ್ನು ಏನೇನು ಬಿಡುಗಡೆಯಾಗುತ್ವೋ(!) ಎಂದು ಬಸನಗೌಡ ಪಾಟೀಲ್​ ಯತ್ನಾಳ್ ಅವರು ಮಾತನಾಡಿದ್ದಾರೆ.

ಪಂಚಮಸಾಲಿ ಮೀಸಲಾತಿ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸ್ಪಷ್ಟವಾದ ಉತ್ತರವನ್ನ ಸರ್ಕಾರ ಕೊಟ್ಟಿಲ್ಲ, ಕಥೆಯನ್ನ ಹೇಳಿದ್ದು ಬಿಟ್ಟರೆ ಏನೂ ಉತ್ತರವಿಲ್ಲ, ಗಾಳಿಯಲ್ಲಿ ತೇಲುವ ಉತ್ತರವನ್ನ ಕೊಟ್ಟಿದ್ದಾರೆ. ಕಾನೂನು ಸಚಿವರ ಉತ್ತರ ತೃಪ್ತಿ ತಂದಿಲ್ಲ, ಸಿಎಂ ನಾನೇ ಉತ್ತರ ಕೊಡುತ್ತೇನೆ ಎಂದಿದ್ದರು. ನಾನು ಆಗಲೂ ಅವರಿಗೆ ಹೇಳಿದ್ದೆ. ನೀವು, ಶೆಟ್ಟರ್ ನಿಮ್ಮ ಉಪಜಾತಿ ಹೇಗೆ ಸೇರಿಸಿದ್ರಿ ಅಂತ. ರಾತ್ರೋರಾತ್ರಿ ಅವರು ಸೇರಿಸಿದ್ದರು. ಸಮುದಾಯದ ನಾಯಕ ಆಗ್ತೇನೆ ಅಂತ ತುಳಿಯುತ್ತಿದ್ದಾರೆ. ಯಡಿಯೂರಪ್ಪನವರಿಗೆ ಭಯ ಕಾಡುತ್ತಿರಬಹುದು ಎಂದು ಹೇಳಿದರು.

ಯತ್ನಾಳ್​ರ ಬಗ್ಗೆ ಅರಮನೆ ಮೈದಾನವೇ ಉತ್ತರಕೊಟ್ಟಿದೆ. ವೀರಶೈವ ಸಮುದಾಯದಲ್ಲೇ ನಮ್ಮದು ದೊಡ್ಡ ಸಮುದಾಯ. ವೀರಶೈವ ಹೆಸರೇಳಿ ಬ್ಲಾಕ್​ಮೇಲ್ ಮಾಡುತ್ತಿದ್ದರು. ಅವರ ಕೇಂದ್ರ ನಾಯಕರ ಮುಂದೆ ಮಾಡುತ್ತಿದರು. ಈಗ ಅವರದೇನು ಮುಂದೆ ನಡೆಯಲ್ಲ, ಹೈಪವರ್ ಕಮಿಟಿ ರಚನೆ ಯಾಕೆ ಬೇಕು. ನಾನು ಸೋಮವಾರದಿಂದ ಹೋರಾಟ ಮಾಡುತ್ತೇನೆ. ಮಂತ್ರಿಯಾಗಬೇಕಿತ್ತು ನಿರಾಣಿ ಹಿಂದೆ ಸರಿದರು. ಮಠಕ್ಕೆ 10 ಕೋಟಿ ಕೊಟ್ರು ಅವರು ಹಿಂದಕ್ಕೆ ಹೋದರು ಎಂದು ಸಚಿವ ಮುರುಗೇಶ್ ನಿರಾಣಿ, ವಚನಾನಂದ ಶ್ರೀಗಳ ವಿರುದ್ಧ ಯತ್ನಾಳ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *