ಬಾಬು ಜಗಜೀವನ್ ರಾಮ್ ಅವರ 114ನೇ ಅದ್ದೂರಿ ಜಯಂತಿಗೆ ಸಮಿತಿ ರಚನೆ
ಕಲಬುರಗಿ ಜಿಲ್ಲೆ ಕಾಳಗಿ ತಾಲೂಕು ನೂತನವಾಗಿ ಘೋಷಣೆಯಾಗಿದೆ. ಈ ತಾಲೂಕಿನಲ್ಲಿ ಏಪ್ರಿಲ್ ತಿಂಗಳಿನಲ್ಲಿ ನಡೆವುವ ಡಾII ಬಾಬು ಜಗಜೀವನ್ ರಾಮ್ ಅವರ 114ನೇ ಜಯಂತೋತ್ಸವ ಅದ್ದೂರಿಯಾಗಿ ಆಚರಿಸುವ ಹಿನ್ನೆಲೆಯಲ್ಲಿ ಸಮಿತಿ ರಚಿಸಲಾಯಿತು.
ತಾಲೂಕಿನ ಪ್ರವಾಸಿ ಮಂದಿರದಲ್ಲಿ ಎಲ್ಲ ಹಿರಿಯರು, ಯುವಕರು, ಸೇರಿಕೊಂಡು ಜಯಂತೋತ್ಸವ ಸಮಿತಿಯನ್ನು ರಚಿಸಿದರು.
ಸಮಿತಿಯ ಅಧ್ಯಕ್ಷರಾಗಿ ರೇವಣಸಿದ್ದ ಮಳಗಿ, ಗೌರವ ಅಧ್ಯಕ್ಷರಾಗಿ ಭಗವಂತ ಸಿಂಗೆ, ಉಪಾಧ್ಯಕ್ಷರಾಗಿ ಸಿದ್ದಲಿಂಗ ವಚ್ಚ, ಕಾರ್ಯಾಧ್ಯಕ್ಷರಾಗಿ ವಿನೋದ್ ಓಂಕಾರ್, ಕೋಶ ಅಧ್ಯಕ್ಷರಾಗಿ ಸೂರ್ಯಕಾಂತ್, ಪ್ರಚಾರ ಸಮಿತಿ ಅಧ್ಯಕ್ಷರಾಗಿ ಸುಂದರ ಡಿ ಸಾಗರ್, ಕಾನೂನು ಸಲಹೆಗಾರರಾಗಿ ನಾಗರಾಜ್ ಕುಡಹಳ್ಳಿ, ಅವರನ್ನ ಆಯ್ಕೆ ಮಾಡಿದ್ದರು.
ಈ ಸಂಧರ್ಭದಲ್ಲಿ ಎಲ್ಲ ಹಿರಿಯರು, ಯುವಕರು ಉಪಸ್ಥಿತರಿದ್ದರು.