Passenger Train: ರೈಲು ಪ್ರಯಾಣಿಕರಿಗೆ ‘ಗುಡ್ ನ್ಯೂಸ್’ ನೀಡಿದ ಕೇಂದ್ರ ರೈಲ್ವೆ ಸಚಿವ!
ನವದೆಹಲಿ: ಕೇಂದ್ರ ಸರ್ಕಾರ ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ್ದು, ಈ ತಿಂಗಳೊಳಗೆ ಶೇಕಡ 85ರಷ್ಟು ಪ್ರಯಾಣಿಕ ರೈಲುಗಳ ಕಾರ್ಯಾರಂಭ ಮಾಡಲಿವೆ ಎಂದು ರೈಲ್ವೆ ಸಚಿವ ಪೀಯೂಷ್ ಗೋಯಲ್ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು(Piyush Goyal), ‘ಸದ್ಯ ಉಪನಗರ ರೈಲುಗಳ ಪೈಕಿ ಶೇಕಡ 95ರಷ್ಟು ರೈಲುಗಳು ಸಂಚಾರ ಆರಂಭಗೊಂಡಿದ್ದು, ಶೇ 75ರಷ್ಟು ಮೇಲ್ ಹಾಗೂ ಎಕ್ಸ್‌ಪ್ರೆಸ್ ರೈಲುಗಳು ಓಡಾಡುತ್ತಿವೆ. ಈ ಪ್ರಮಾಣವನ್ನ ಶೀಘ್ರವೇ ಶೇಕಡ 85ರಷ್ಟು ಹೆಚ್ಚಿಸಲಾಗುವುದು’ ಎಂದರು.
‘ಸಾಮಾನ್ಯ ದಿನಗಳಲ್ಲಿ ಸಾಗಿಸುತ್ತಿದ್ದಕ್ಕಿಂತ ಹೆಚ್ಚಿನ ಪ್ರಮಾಣದ ಸರಕನ್ನ ಈಗ ಸಾಗಿಸಲಾಗ್ತಿದೆ. ಕಳೆದ ವರ್ಷ ಕೋವಿಡ್(Covid) ವ್ಯಾಪಿಸಿದ ಅವಧಿಗೆ ಹೋಲಿಸಿದಾಗ ಪ್ರಸಕ್ತ ಹಣಕಾಸು ವರ್ಷದ ಅಂತ್ಯದ ಒಳಗಾಗಿ 10 ದಶಲಕ್ಷ ಟನ್ʼನಷ್ಟು ಅಧಿಕ ಸರಕು ಸಾಗಿಸುವ ನಿರೀಕ್ಷೆಯಿದೆ. ಇನ್ನು ಕಳೆದ ವರ್ಷದ ಮಾರ್ಚ್ 9ರ ವರೆಗಿನ ಅವಧಿಗೆ ಹೋಲಿಸಿದರೆ, ಈ ಮಾರ್ಚ್‌ನ ಇದೇ ಅವಧಿಯಲ್ಲಿ ಶೇ 6.75ರಷ್ಟು ಅಧಿಕ ಸರಕು ಸಾಗಣೆ ಮಾಡಲಾಗಿದೆ’ ಎಂದು ಹೇಳಿದರು.