ಸಿಬ್ಬಂದಿಗೆ ಕೋವಿಡ್ ಚಿಂಚೋಳಿ ನ್ಯಾಯಾಲಯಕ್ಕೆ ಸ್ಯಾನೆಟೈಜೇಷನ್
ಪಟ್ಟಣದ ನ್ಯಾಯಾಲಯದ ಸಿಬ್ಬಂದಿಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನಲೆಯಲ್ಲಿ ನ್ಯಾಯಾಲಯವನ್ನು ಸ್ವಚ್ಛಗೊಳಿಸಿ ಸ್ಯಾನೆಟೈಜೇಷನ್ ಮಾಡಿಸಲಾಯಿತು.
ಸರ್ಕಾರ ಮತ್ತು ಆರೋಗ್ಯ ಇಲಾಖೆಯ ಮಾರ್ಗಸೂಚಿಯಂತೆ ಸಾಮಾಜಿಕ ಅಂತರ, ಕಡ್ಡಾಯ ಮಾಸ್ಕ್ ಬಳಕೆಯೊಂದಿಗೆ ಇಲ್ಲಿನ ನ್ಯಾಯಾಲಯದ ಕಲಾಪವನ್ನು ಪ್ರಾರಂಭಿಸಲಾಯಿತು.
ಮಹಾಮಾರಿ ಕೊವಿಡ್ ಸೋಂಕು ಹರಡದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ನ್ಯಾಯಾಲಯದ ಸಿಬ್ಬಂದಿಗಳು, ವಕೀಲರು ಮತ್ತು ಕಕ್ಷಿದಾರರು ಪಾಲಿಸುವ ಮೂಲಕ ನ್ಯಾಯಾಲಯದ ಕಲಾಪಗಳು ಸುಗಮವಾಗಿ ನಡೆಯುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಹಶೀಲ್ದಾರರು ತಿಳಿಸಿದ್ದಾರೆ.ತಾಲೂಕಾ ವೈದ್ಯಾಧಿಕಾರಿ ಡಾ.ಮಹ್ಮದ ಗಫಾರ ನೇತೃತ್ವದಲ್ಲಿ ಕೋರ್ಟ ಸಿಬ್ಬಂದಿಗಳ ಕೋವಿಡ್ ತಪಾಸಣೆ ನಡೆಸಲಾಯಿತು.