ದಿಲ್ಲಿ ಗಡಿಗಳಲ್ಲಿ ತಾತ್ಕಾಲಿಕ ಮನೆ ನಿರ್ಮಿಸಿಕೊಂಡ ರೈತರು: ಅನ್ನದಾತರ ಹೋರಾಟ ಮತ್ತಷ್ಟು ತೀವ್ರ

ಹೈಲೈಟ್ಸ್‌:

  • ಹರಿಯಾಣದ ಟಿಕ್ರಿ ಗಡಿ, ಬಹಾದುರ್‌ಘರ್‌ ಹೆದ್ದಾರಿ ಪಕ್ಕದಲ್ಲಿ ರೈತರಿಂದ ತಾತ್ಕಾಲಿಕ ಟೆಂಟ್
  • ಇಟ್ಟಿಗೆಗಳು, ಕಟ್ಟಿಗೆಗಳು, ಒಣ ಹುಲ್ಲಿನ ರಾಶಿಗಳನ್ನು ಬಳಸಿ ಮನೆಗಳ ನಿರ್ಮಾಣ
  • ಸುಗ್ಗಿ ಕಾಲ ಬಂದಿದ್ದರಿಂದ ಟ್ರ್ಯಾಕ್ಟರ್‌ಗಳನ್ನು ತಮ್ಮ ತಮ್ಮ ಊರಿಗೆ ಕಳುಹಿಸಿರುವ ರೈತರು

ಹೊಸದಿಲ್ಲಿ: ಕೇಂದ್ರ ಸರಕಾರದ ಮೂರು ಕೃಷಿ ಕಾನೂನು-ಗಳನ್ನು ರದ್ದುಪಡಿಸುವಂತೆ ಆಗ್ರಹಿಸಿ ಮೂರೂವರೆ ತಿಂಗಳುಗಳಿಂದ ರಾಷ್ಟ್ರ ರಾಜಧಾನಿಯ ಗಡಿಯಲ್ಲಿಪ್ರತಿಭಟನೆ ನಡೆಸುತ್ತಿರುವ ರೈತರು ಈಗ ಅಲ್ಲಿಯೇ ವಾಸಕ್ಕಾಗಿ ಚಿಕ್ಕ ಮನೆಗಳನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ. ಆ ಮೂಲಕ ತಮ್ಮ ಹೋರಾಟ ಮತ್ತಷ್ಟು ತೀವ್ರವಾಗುವ ಸೂಚನೆ ನೀಡಿದ್ದಾರೆ.

ಪ್ರತಿಭಟನೆ ಇನ್ನೂ ದೀರ್ಘ ಸಮಯದವರೆಗೆ ಮುಂದುವರಿಯುವ ಸುಳಿವು ಹಿನ್ನೆಲೆಯಲ್ಲಿಹೋರಾಟದಿಂದ ಹಿಂದೆ ಸರಿಯದಂತೆ ವಾಸಕ್ಕೆ ಸೂಕ್ತ ಸ್ಥಳಗಳ ಏರ್ಪಾಡುಗಳನ್ನು ರೈತರು ಮಾಡಿಕೊಳ್ಳುತ್ತಿದ್ದಾರೆ.

ಹರಿಯಾಣದ ಟಿಕ್ರಿ ಗಡಿ, ಬಹಾದುರ್‌ಘರ್‌ ಹೆದ್ದಾರಿ ಪಕ್ಕದಲ್ಲಿ ರೈತರು ಇಂತಹ ಪುಟ್ಟ ಮನೆಗಳನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ.

ಇಟ್ಟಿಗೆಗಳು, ಕಟ್ಟಿಗೆಗಳು, ಒಣ ಹುಲ್ಲಿನ ರಾಶಿಗಳನ್ನು ಬಳಸಿ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಸಾಮಗ್ರಿ ವೆಚ್ಚ ಸುಮಾರು 20 ರಿಂದ 25 ಸಾವಿರ ರೂ. ತಗಲುತ್ತಿದೆ. ರೈತರು ತಾವೇ ಸ್ವತಃ ಗುಡಿಸಲು ನಿರ್ಮಿಸಿಕೊಳ್ಳುತ್ತಿರುವುದರಿಂದ ಕೂಲಿಗಾಗಿ ಮಾಡುವ ವೆಚ್ಚ ಉಳಿದಿದೆ.

ಚಳಿ, ಗಾಳಿ, ಮಳೆ ಎನ್ನದೇ ಕಳೆದ ಸುಮಾರು ನಾಲ್ಕು ತಿಂಗಳಿನಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರಕಾರದೊಂದಿಗಿನ ಮಾತುಕತೆ ಯತ್ನ ಕಗ್ಗಂಟಾಗಿರುವ ಹಿನ್ನೆಲೆಯಲ್ಲಿಹಾಗೂ ರೈತ ಸಂಘಟನೆಗಳು ಕೇಂದ್ರ ಸರಕಾರ ಅಕ್ಟೋಬರ್‌ 2ರ ಗಡುವು ನೀಡಿರುವುದರಿಂದ ರೈತರು ಈ ತೀರ್ಮಾನಕ್ಕೆ ಬಂದಿದ್ದಾರೆ. ಅಲ್ಲದೆ, ಮುಂದಿನ ದಿನಗಳಲ್ಲಿಬಿಸಿಲ ತಾಪ ಹೆಚ್ಚಲಿರುವುದು ಸಹ ಮನೆ ನಿರ್ಮಿಸಲು ಕಾರಣವಾಗಿದೆ.

ಈ ಹಿಂದೆ ತಮ್ಮ ಟ್ರ್ಯಾಕ್ಟರ್‌ಗಳನ್ನು ದಿಲ್ಲಿ ಗಡಿಗಳಿಗೆ ತಂದು ಅದನ್ನೇ ತಾತ್ಕಾಲಿಕ ನಿವಾಸಗಳನ್ನು ಮಾಡಿ, ಅದರಲ್ಲೇ ವಾಸ ಮಾಡುತ್ತಿದ್ದರು. ಆದರೆ ಈಗ ಸುಗ್ಗಿ ಕಾಲ ಹತ್ತಿರ ಬರುತ್ತಿದ್ದು, ಟ್ರ್ಯಾಕ್ಟರ್‌ಗಳನ್ನು ಉಳುಮೆಗೆ ಬಳಸಬೇಕಾಗಿ ಬಂದಿದೆ. ಹೀಗಾಗಿ ಟ್ರ್ಯಾಕ್ಟರ್‌ಗಳನ್ನು ಊರಿಗೆ ಕಳುಹಿಸಿ ತಾತ್ಕಾಲಿಕ ಮನೆಗಳನ್ನು ನಿರ್ಮಾಣ ಮಾಡುತ್ತಿದ್ದಾರೆ.

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *