ಹಿರಿಯ ನಾಗರಿಕರಿಗೆ ಕೋವಿಡ್ ಲಸಿಕೆಗಾಗಿ ಸಹಾಯವಾಣಿ ಆರಂಭಿಸಿದ ತೇಜಸ್ವಿ ಸೂರ್ಯ
ಬೆಂಗಳೂರು: ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಕೋವಿಡ್ -19 ಲಸಿಕಾ ಅಭಿಯಾನವನ್ನು ಯಶಸ್ವಿಯಾಗಿ ಜಾರಿಗೊಳಿಸಲು, ಬೆಂಗಳೂರು ದಕ್ಷಿಣ ಸಂಸದರ ತೇಜಸ್ವಿ ಸೂರ್ಯ ಕೋವಿಡ್ ರಕ್ಷಾ ವೇದಿಕೆ ಆರಂಭಿಸಿದ್ದಾರೆ.
ಸಹಾಯವಾಣಿ 080 6191 4960 ಸಂಖ್ಯೆಗೆ ಕರೆ ಮಾಡಿದಲ್ಲಿ ಹತ್ತಿರದ ಆಸ್ಪತ್ರೆ / ಕೇಂದ್ರದಲ್ಲಿ ಹಿರಿಯ ನಾಗರಿಕರ ಲಸಿಕಾ ನೋಂದಣಿಗೆ ಸಹಾಯ, ತಜ್ಞ ವೈದ್ಯರಿಂದ ಸಮಾಲೋಚನೆಗೆ ಅವಕಾಶವನ್ನು ಕಲ್ಪಿಸಿದ್ದಾರೆ.
ಬೆಂಗಳೂರು ದಕ್ಷಿಣ ಸಂಸದರ ಕಚೇರಿಯು ಇತರ ಸ್ವಯಂಸೇವಕರ ತಂಡದೊಂದಿಗೆ ‘ಕೋವಿಡ್ ರಕ್ಷಾ’ ವೇದಿಕೆಯ ಮೂಲಕ ಕಾಲ್ ಸೆಂಟರ್ ಅನ್ನು ಪ್ರಾರಂಭಿಸಿದ್ದು, ಈ ಸಹಾಯವಾಣಿಗೆ ಬರುವ ಕರೆಗಳ ಆಧಾರದಲ್ಲಿ ಲಸಿಕಾ ನೋಂದಣಿ ಕಾರ್ಯ ನಡೆಸಲಿದೆ. ಇದರನ್ವಯ, ಹಿರಿಯ ನಾಗರಿಕರಿಗೆ ಹತ್ತಿರದ ಆಸ್ಪತ್ರೆ, ಕೇಂದ್ರದಲ್ಲಿ ಲಸಿಕಾ ನೋಂದಣಿ, ಅಸ್ವಸ್ಥ ನಾಗರಿಕರಿಗೆ ಸಾರಿಗೆ ವ್ಯವಸ್ಥೆ ಹಾಗೂ ಲಸಿಕೆ ಪಡೆದುಕೊಂಡ ನಂತರ ತಜ್ಞ ವೈದ್ಯರಿಂದ ಸಲಹೆ, ಸಮಾಲೋಚನೆಗೆ ಕ್ರಮ ಕೈಗೊಳ್ಳಲಾಗಿದೆ.
‘ಕೋವಿಡ್ ರಕ್ಷಾ’ ಕುರಿತು ಮಾತನಾಡಿದ ತೇಜಸ್ವಿ ಸೂರ್ಯ, ” ಬೆಂಗಳೂರು ದಕ್ಷಿಣ ವ್ಯಾಪ್ತಿಯಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಲಸಿಕೆ ಪಡೆಯಲು ಅನುಕೂಲವಾಗುವ ನಿಟ್ಟಿನಲ್ಲಿ ಈ ವೇದಿಕೆ ಆರಂಭಿಸಲಾಗಿದೆ. ಕೋವಿನ್ ಅಪ್ಲಿಕೇಶನ್ ಅಥವಾ ಆರೋಗ್ಯ ಸೇತು ಜಾಲತಾಣದ ಮೂಲಕ ನೋಂದಣಿಗೊಳ್ಳಲು ಇದರಿಂದ ಸಹಾಯ ಒದಗಿಸಲಿದ್ದು, ಲಸಿಕೆ ಪಡೆದುಕೊಂಡ ನಂತರವೂ ತಜ್ಞ ವೈದ್ಯರೊಂದಿಗೆ ಸಮಾಲೋಚನೆ ನಡೆಸಲು ವ್ಯವಸ್ಥೆ ಮಾಡಲಾಗಿದೆ” ಎಂದು ತಿಳಿಸಿದರು.
ಭಾರತೀಯ ಜನತಾ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ತೇಜಸ್ವಿ ಸೂರ್ಯ, ಹಿರಿಯ ನಾಗರಿಕರ ಲಸಿಕಾ ಅನುಕೂಲಕ್ಕಾಗಿ ಪಕ್ಷದ ಕಾರ್ಯಕರ್ತರು, ಸ್ವಯಂ ಸೇವಕರ ಸಹಾಯದೊಂದಿಗೆ ಆಸ್ಪತ್ರೆಯಲ್ಲಿ ಹೆಲ್ಪ್ ಡೆಸ್ಕ್ ಗಳನ್ನು ಆರಂಭಿಸುವಂತೆ ಸೂಚಿಸಿರುತ್ತಾರೆ. ಸಧ್ಯದಲ್ಲೇ ಎಲ್ಲ ಆಸ್ಪತ್ರೆ/ ಪಾರ್ಕ್ ಗಳ ಸಮೀಪದಲ್ಲಿಯೂ ನೋಂದಣಿ ಡೆಸ್ಕ್ ಅನ್ನು ಆರಂಭಿಸುವ ಕುರಿತು ಮಾಹಿತಿ ನೀಡಿದರು.
ಕೋವಿಡ್ ರಕ್ಷಾ ವೇದಿಕೆಯನ್ನು 100ಕ್ಕೂ ಅಧಿಕ ವೈದ್ಯರ ಹಾಗೂ 200ಕ್ಕೂ ಅಧಿಕ ಸ್ವಯಂಸೇವಕರ ತಂಡದೊಂದಿಗೆ ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಹಾಗೂ ನಂತರದ ಅವಧಿಯಲ್ಲಿ ನಾಗರಿಕರ ಅನುಕೂಲಕ್ಕಾಗಿ ಆರಂಭಿಸಲಾಗಿತ್ತು.
ಅವಧಿಯಲ್ಲಿ ನಾಗರಿಕರ ಅನುಕೂಲಕ್ಕಾಗಿ ಆರಂಭಿಸಲಾಗಿತ್ತು.