ಮೀಸಲಾತಿ ಹೋರಾಟ: ವಿಧಾನಸಭೆಯಲ್ಲಿ ಸೋಮವಾರ ಯತ್ನಾಳ್ ಧರಣಿ
ಹೈಲೈಟ್ಸ್:
- ವಿಧಾನಸಭೆಯಲ್ಲಿ ಮೀಸಲಾತಿ ಹೋರಾಟ ನಡೆಸಲು ಮುಂದಾದ ಯತ್ನಾಳ್
- ವಿಧಾನಸಭೆಯಲ್ಲಿ ಸೋಮವಾರ ಯತ್ನಾಳ್ ನಡೆಸಲಿದ್ದಾರೆ ಧರಣಿ
- ಉನ್ನತ ಮಟ್ಟದ ಸಮಿತಿ ರಚನೆ ಮಾಡಿದರೂ ತೃಪ್ತರಾಗದ ಯತ್ನಾಳ್
ಬೆಂಗಳೂರು: ಪಂಚಮಸಾಲಿ ಸಮುದಾಯವನ್ನು 2ಎ ಪ್ರವರ್ಗಕ್ಕೆ ಸೇರ್ಪಡೆ ಮಾಡಬೇಕು ಎಂದು ಹೋರಾಟ ನಡೆಯುತ್ತಿದ್ದು ಸೋಮವಾರ ವಿಧಾನಸಭೆಯಲ್ಲಿ
ಮೀಸಲಾತಿ ಬೇಡಿಕೆ ಹಿನ್ನೆಲೆಯಲ್ಲಿ ಅಧ್ಯಯನ ನಡೆಸಲು ಈಗಾಗಲೇ ನಿವೃತ್ತ ನ್ಯಾಯಾಧೀಶ ಸುಭಾಶ್ ಅಡಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚನೆ ಮಾಡಲಾಗಿದೆ. ಮತ್ತೊಂದು ಕಡೆಯಲ್ಲಿ ಪಂಚಮಸಾಲಿ ಮೀಸಲಾತಿ ಬೇಡಿಕೆಯನ್ನು ಪರಿಶೀಲನೆ ನಡೆಸಲು ಹಿಂದುಳಿದ ವರ್ಗಗಳ ಆಯೋಗಕ್ಕೆ ಶಿಫಾರಸು ಮಾಡಲಾಗಿದೆ.
ಹೀಗಿದ್ದರೂ ಬುಧವಾರ ಸದನದಲ್ಲಿ ಈ ವಿಚಾರವನ್ನು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನೆ ಮಾಡಿದ್ದರು.ಇದಕ್ಕೆ ಸರ್ಕಾರದ ಪರವಾಗಿ ಕಾನೂನು ಸಚಿವ ಬಸವರಾಜ ಬೊಮ್ಮಾಯಿ ಉತ್ತರವನ್ನು ನೀಡಿದ್ದರು.
ಆದರೆ ಉತ್ತರಕ್ಕೆ ತೃಪ್ತರಾಗದ ಬಸನಗೌಡ ಪಾಟೀಲ್ ಯತ್ನಾಳ್ ಸೋಮವಾರ ಧರಣಿ ನಡೆಸುವ ಎಚ್ಚರಿಕೆಯನ್ನು ಸದನದಲ್ಲೇ ನೀಡಿದ್ದರು.ಆದರೆ ಮೀಸಲಾತಿ ವಿಚಾರವಾಗಿ ಉನ್ನತ ಮಟ್ಟದ ಸಮಿತಿ ಅಧ್ಯಯನ ನಡೆಸುತ್ತದೆ ಕಾನೂನಾತ್ಮಕವಾಗಿ ಸಂವಿಧಾನದ ಚೌಕಟ್ಟಿನಲ್ಲಿ ಎಲ್ಲರಿಗೂ ನ್ಯಾಯ ಒದಗಿಸಲಾಗುವುದು ಎಂಬ ಭರವಸೆಯನ್ನು ಸರ್ಕಾರದ ಪರವಾಗಿ ಬೊಮ್ಮಾಯಿ ನೀಡಿದ್ದಾರೆ.
ಆದರೆ ಮೀಸಲಾತಿ ವಿಚಾರವಾಗಿ ಸಿಎಂ ಬಿಎಸ್ ಯಡಿಯೂರಪ್ಪ ಭರವಸೆ ಕೊಡಬೇಕು ಹಾಗೂ ಸದನದಲ್ಲಿ ಮಾತನಾಡಬೇಕು ಎಂದು ಯತ್ನಾಳ್ ಪಟ್ಟುಹಿಡಿದಿದ್ದಾರೆ. ಇದಕ್ಕಾಗಿ ಪ್ರತಿಭಟನೆಯ ಹಾದಿ ತುಳಿದಿದ್ದಾರೆ. ಸ್ವತಃ ಸ್ವಪಕ್ಷೀಯ ಶಾಸಕರ ಈ ವರ್ತನೆ ಸರ್ಕಾರಕ್ಕೆ ಮುಜುಗರ ಉಂಟು ಮಾಡಿದೆ. ಈ ನಿಟ್ಟಿನಲ್ಲಿ ಯತ್ನಾಳ್ ಮನವೋಲಿಕೆ ಯತ್ನವೂ ಮುಂದುವರಿದಿದೆ.